ಈ ಬಾರಿ ಸಾಮೂಹಿಕ ನಾಗರಪಂಚಮಿ ಆಚರಿಸುವಂತಿಲ್ಲ..!
ಕರಾವಳಿಯಲ್ಲಿ ಅತೀ ಹೆಚ್ಚು ಜನರು ಶ್ರದ್ಧಾ ಭಕ್ತಿ-ಭಾವದಿಂದ ಆಚರಿಸುವ ನಾಗರಪಂಚಮಿ ಹಬ್ಬಕ್ಕೂ ಕೊರೋನಾ ವೈರಸ್ ಅಡ್ಡಿಯಾಗಿದೆ.
ಆಷಾಢ ಕಳೆದು ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿ ಹಬ್ಬದಿಂದ ಪ್ರಾರಂಭಗೊಳ್ಳುವ ಹಬ್ಬಗಳ ಸಂಭ್ರಮ ವರ್ಷವಿಡಿ ಮುಂದುವರಿಯುತ್ತದೆ.
ಈ ಬಾರಿ ಜುಲೈ 25 ರಂದು ನಾಗರಪಂಚಮಿ ಹಬ್ಬವಿದೆ. ಸದ್ಯ ಕೊರೋನಾ ಮಿತಿ ಮೀರಿ ಹರಡುತ್ತಿರುವ ಹಿನ್ನಲೆಯಲ್ಲಿ ಸಾಮೂಹಿಕವಾಗಿ ಹಬ್ಬ ಆಚರಣೆ ಮಾಡುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ನೀಡಿದ ನಿರ್ದೇಶನಗಳಲ್ಲಿ ದೇವಸ್ಥಾನ ತೆರೆಯಲು ಮಾತ್ರ ಅವಕಾಶ ನೀಡಲಾಗಿದ್ದು, ಹಬ್ಬ-ಹರಿದಿನ ಆಚರಣೆ ಅವಕಾಶ ಕಲ್ಪಿಸಿಲ್ಲ. ಈ ನಿಟ್ಟಿನಲ್ಲಿ ಸಾಮೂಹಿಕವಾಗಿ ಪಾಲ್ಗೊಳ್ಳೂವ ಯಾವುದೇ ಹಬ್ಬ ಹರಿದಿನಗಳಿಗೆ ಜಿಲ್ಲೆಯಲ್ಲಿ ಅವಕಾಶ ನೀಡದಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ . ಶ್ರಾವಣ ಮಾಸದಲ್ಲಿ ಬರುವ ಎಲ್ಲಾ ಹಬ್ಬಗಳನ್ನು ಮನೆಯಲ್ಲಿ ಆಚರಿಸಲು ಮಾತ್ರ ಅವಕಾಶವಿದ್ದು, ಸಾಮೂಹಿಕವಾಗಿ ಆಚರಿಸಲು ಅವಕಾಶ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಡಪಡಿಸಿದ್ದಾರೆ.