ಮೈಸೂರು : ಹಳೇ ಚಿನ್ನದ ನಾಣ್ಯ ಸಂಗ್ರಹಿಸೋದು, ಅನಾಮಧೇಯ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಚಿನ್ನ ಖರೋದಿಸೋ ಹವ್ಯಾಸ ನಿಮಗೆ ಇದ್ಯಾ…? ಹಾಗಿದ್ರೆ ಹುಷಾರ್ ನಯವಂಚಕ್ರು ನಿಮ್ಮಂಥವ್ರನ್ನ ಹುಡುಕಿ ಬರ್ತಾರೆ. ಸಲೀಸಾಗಿ ವಂಚಿಸಿ ಮಾಯವಾಗ್ತಾರೆ. ಹೀಗೇ ಹಳೇ ಚಿನ್ನದ ನಾಣ್ಯಗಳನ್ನ ಕೊಡ್ತೀವಂತ ನಂಬಿಸಿ 30 ಲಕ್ಷಕ್ಕೆ ಉಂಡೆನಾಮ ಹಾಕಿದ ಐನಾತಿ ಕಳ್ಳರು ಮೈಸೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಅವ್ರು ವಂಚಿಸಿದ ಸ್ಟೈಲೇ ಡಿಫರೆಂಟ್ ಅದನ್ನ ತಿಳ್ಕೊಂಡ್ರೆ ಇಂಟರೆಸ್ಟಿಂಗ್…
ಯೆಸ್.. ಮೈಸೂರಿನ ಸರಸ್ವತಿಪುರಂ ಪೊಲೀಸರ ಭರ್ಜರಿ ಕಾರ್ಯಾಚರಣೆಗೆ ಇಬ್ಬರು ಚಾಲಾಕಿ ವಂಚಕರು ಸಿಕ್ಕಿಬಿದ್ದಿದ್ದಾರೆ. ಒಬ್ಬನ ಹೆಸ್ರು ಭೀಮ್ @ಡೈನ್ ಮತ್ತೊಬ್ಬನ ಹೆಸ್ರು ಅರ್ಜುನ್@ಮಾರ್ವಾಡ. ಯಾವ್ದೋ ರಾಜ್ಯದಿಂದ ಬಂದವ್ರಲ್ಲ. ಇಲ್ಲೇ ಪಕ್ಕದಲ್ಲೇ ಇರೋ ಕೆ.ಆರ್.ಎಸ್.ನವ್ರು. ಸಧ್ಯಕ್ಕೆ ಮೈಸೂರು ಪೊಲೀಸ್ರ ಅತಿಥಿಗಳು. ಹಳೆ ಕಾಲದ ಚಿನ್ನದ ನಾಣ್ಯ ಮತ್ತು ಗುಂಡುಗಳನ್ನ ಕೊಡ್ತೀನಂತ ಮೈಸೂರಿನ ಒಬ್ಬ ವ್ಯಕ್ತಿಗೆ ಬಕ್ರಾ ಮಾಡಿ ಎಸ್ಕೇಪ್ ಆಗಿದ್ದವ್ರು ಸಿಕ್ಕಿಬಿದ್ದಿದ್ದಾರೆ.
ಜುಲೈ 13 ನೇ ತಾರೀಖು ಮೈಸೂರಿನ ಕುಂಬಾರ ಕೊಪ್ಪಲಿನ ನಿವಾಸಿ ರಾಘವೇಂದ್ರ ಎಂಬುವರನ್ನ ಸರಸ್ವತಿಪುರಂ ನ ಬ್ಯಾಂಕ್ ಒಂದ್ರಲ್ಲಿ ಪರಿಚಯ ಮಾಡಿಕೊಳ್ಳೋ ಕಿಲಾಡಿಗಳು ನಮ್ಹತ್ರ ಪುರಾತನ ಚಿನ್ನದ ನಾಣ್ಯಗಳಿವೆ, ಚಿನ್ನದ ಗುಂಡುಗಳಿವೆ ಅಂತ ನಂಬಿಸ್ತಾರೆ. ಮೊದ್ಲೇ ಹಳೇ ನಾಣ್ಯಗಳನ್ನ ಸಂಗ್ರಹಿಸುವ ಹವ್ಯಾಸ ಇದ್ದ ರಾಘವೇಂದ್ರ ಇವ್ರ ನಯವಾದ ಮಾತುಗಳನ್ನ ನಂಬ್ತಾರೆ. ಮೊದ್ಲು ಒಂದು ನಾಣ್ಯ ಮತ್ತೆ ಗುಂಡನ್ನ ಪಡೆದು ಪರಿಶೀಲನೆ ಮಾಡ್ದಾಗ ಒರಿಜಿನಲ್ ಆಗಿರುತ್ತೆ. 30 ಲಕ್ಷ ಮೌಲ್ಯಕ್ಕೆ ಚಿನ್ನದ ನಾಣ್ಯ ಹಾಗೂ ಗುಂಡುಗಳನ್ನ ಖರೀದಿಸ್ತಾರೆ. ಹಣ ಪಡೆದ ಕಿಲಾಡಿಗಳು ಜಾಗ ಖಾಲಿ ಮಾಡಿದ್ದಾರೆ. ಕಡಿಮೆ ಬೆಲೆಗೆ ಚಿನ್ನ ಸಿಕ್ತು ಅಂತ ಮನೆಗೆ ಬಂದು ಪರಿಶೀಲನೆ ಮಾಡ್ದಾಗ ಅವು ನಕಲಿಯಾಗಿರುತ್ತೆ.
ವಂಚನೆಗೆ ಒಳಗಾದ ರಾಘವೇಂದ್ರ ಕೂಡಲೇ ಸರಸ್ವತಿಪುರಂ ಠಾಣೆಗೆ ಬಂದು ಪ್ರಕರಣ ದಾಖಲಿಸ್ತಾರೆ. ವಂಚಕರ ಸೆರೆಗೆ ತಂಡ ರಚನೆಯಾಗುತ್ತೆ. ರಾಘವೇಂದ್ರ ಬಳಿ ಇದ್ದ ಮೊಬೈಲ್ ನಂಬರ್ ಜಾಡು ಹಿಡಿದ ಪೊಲೀಸ್ರು ವಂಚಕರ ಜಾಡನ್ನ ಅರಸಿ ಹೋದಾಗ ಕೆ.ಆರ್.ಎಸ್ ನಂಟಿರುವುದು ಗೊತ್ತಾಗುತ್ತೆ. ಬಲೆ ಬೀಸಿದ ಪೊಲೀಸ್ರಿಗೆ ಇಬ್ಬರು ಖದೀಮರು ಸಿಕ್ಕಿಬೀಳ್ತಾರೆ. 5 ಮಂದಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಬಂಧಿತರಿಂದ 30 ಲಕ್ಷ ಕ್ಯಾಶ್, ಎರಡು ಬೈಕ್ ಹಾಗೂ ಮೊಬೈಲ್ ಗಳನ್ನ ವಶಪಡಿಸಿಕೊಂಡಿದ್ದಾರೆ.
ವಂಚಕರ ಕಾರ್ಯಾಚರಣೆ ಗಮನಿಸಿದ್ರೆ ಇದರ ಹಿಂದೆ ದೊಡ್ಡ ಜಾಲ ಇರೋದು ಖಚಿತವಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸ್ರು ಬಲೆ ಬೀಸಿದ್ದಾರೆ. ಶೀಘ್ರದಲ್ಲೇ ಉಳಿದವರನ್ನ ಸೆರೆ ಹಿಡಿಯವ ವಿಶ್ವಾಸ ಮೈಸೂರು ಪೊಲೀಸ್ರಲ್ಲಿ ಇದೆ..