Home ರಾಜ್ಯ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣ ಸುತ್ತ ಅನುಮಾನದ ಹುತ್ತ ..!

ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣ ಸುತ್ತ ಅನುಮಾನದ ಹುತ್ತ ..!

ಮೈಸೂರು : ನಂಜನಗೂಡು ಆರೋಗ್ಯಾಧಿಕಾರಿ ನಾಗೇಂದ್ರ ಆತ್ಮಹತ್ಯೆ ಪ್ರಕರಣ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ. ಅನೇಕ ಆರೋಪಗಳ ನಡುವೆ ಮರಣೋತ್ತರ ಪರೀಕ್ಷೆ ನಡೆದಿದೆ. ನಾಗೇಂದ್ರ ಕುಟುಂಬದ ರಕ್ಷಣೆಯ ಭರವಸೆ ಬಗ್ಗೆ ಸರ್ಕಾರ ಅಭಯ ನೀಡಿದ್ದರೂ ವೈದ್ಯರಲ್ಲಿ ಇನ್ನೂ ಅಸಮಾಧಾನ ಇದ್ದೇ ಇದೆ. ಕಿರುಕುಳ ಕೊಟ್ಟ ಆರೋಪ ಎದುರಿಸುತ್ತಿರುವ ಜಿಲ್ಲಾ ಪಂಚಾಯ್ತಿ ಸಿಇಒ ಸಸ್ಪೆಂಡ್ ಗೆ ವೈದ್ಯರ ಸಂಘ ಪಟ್ಟುಹಿಡಿದಿದೆ.
ಕೆಲಸದ ಒತ್ತಡದಿಂದ ನಂಜನಗೂಡು ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಂದ್ರ ಮೈಸೂರಿನ ಆಲನಹಳ್ಳಿ ನಿವಾಸದಲ್ಲಿ ನಿನ್ನೆ ನೇಣಿಗೆ ಶರಣಾಗಿದ್ದಾರೆ. ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾರವರ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಆರೋಪಿಸಿ ನಿನ್ನೆ ತಡ ರಾತ್ರಿವರೆಗೆ ಮೈಸೂರಿನ‌ ನಜರಬಾದ್ ನಲ್ಲಿರುವ ಡಿಹೆಚ್ ಒ ಕಚೇರಿ ಮುಂದೆ ನಾಗೇಂದ್ರ ಮೃತದೇಹವನ್ನ ಇಟ್ಟ ವೈದ್ಯ ಸಂಘದ ಸದಸ್ಯರು ಪ್ರತಿಭಟನೆ ಮಾಡಿ ಅಧಿಕಾರಿಯ ಅಮಾನತ್ತಿಗಾಗಿ ಪಟ್ಟು ಹಿಡಿದಿದ್ರು. ವೈದ್ಯಕೀಯ ಸಚಿವ ಡಾ.ಸುಧಾಕರ್ ಬಂದಾಗ ತೀವ್ರ ತರಾಟೆಗೆ ತೆಗೆದುಕೊಂಡ ಕೆಲವು ವೈದ್ಯರು ನಾಗೇಂದ್ರ ಸಾವಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಸಚಿವ ಸುಧಾಕರ್ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟ ನಂತರ ಮೃತದೇಹವನ್ನ ಶವಾಗಾರಕ್ಕೆ ಸಾಗಿಸುವ ವ್ಯವಸ್ಥೆ ಆಯ್ತು.

ಇಂದು ಬೆಳಗ್ಗೆ ನಾಗೇಂದ್ರ ರವರ ಮರಣೋತ್ತರ ಪರೀಕ್ಷೆ ನಡೆಯಬೇಕಿತ್ತು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಹ ಶವಾಗಾರಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಕಾರ್ಯಕ್ರಮವಿತ್ತು.  ಸಚಿವ ಎಸ್.ಟಿ.ಸೋಮಶೇಖರ್ ರವರ ಮೇಲೂ ಸಹ ಸಿಇಒರನ್ನ ಅಮಾನತ್ತು ಪಡಿಸುವಂತೆ ವೈದ್ಯ ಸಮೂಹ ಒತ್ತಡ ಹೇರಿತು. ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಸರ್ಕಾರ ಭರವಸೆ ಕೊಟ್ಟಿತು. ವಿಚಾರವೇನಂದ್ರೆ ನಾಗೇಂದ್ರ ಕುಟುಂಬಸ್ಥರಿಂದ ಇದುವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ. ಹೀಗಿದ್ದೂ ಪ್ರಾದೇಶಿಕ ಆಯುಕ್ತರ ನೇತೃತ್ವದ ತನಿಖೆ ಬೇಡವೆಂದ್ರೆ ರಾಜ್ಯದ ಯಾವುದೇ ಅಧಿಕಾರಿಯಿಂದ ತನಿಖೆ ನಡೆಸಲು ಸಿದ್ದವೆಂದು ಎಸ್.ಟಿ.ಎಸ್.ತಿಳಿಸಿದ್ರು. ಕೆಲಸದ ಒತ್ತಡ ಇರುವ ಬಗ್ಗೆಯೂ ಯಾವುದೇ ದೂರುಗಳು ಬಂದಿಲ್ಲವೆಂದು ಸ್ಪಷ್ಟಪಡಿಸಿದ ಜಿಲ್ಲಾ ಉಸ್ತುವಾರಿಗಳು ಸಾವು ಒಂದೇ ಮಾರ್ಗವಲ್ಲವೆಂದು ಸಲಹೆ ನೀಡಿದ್ರು.

ಈ ಮಧ್ಯೆ ನಾಗೇಂದ್ರರವರ ಕಾರ್ಯವೈಖರಿಯನ್ನ ಖಂಡಿಸಿ ಕ್ಲಾಸ್ ತೆಗೆದುಕೊಂಡಿದ್ದ ಜಿಲ್ಲಾಧಿಕಾರಿ ಆಡಿಯೋ ವೈರಲ್ ಆಗಿತ್ತು. ಇದು ಒತ್ತಡವಲ್ಲ ಕೊರೋನಾ ಮುಕ್ತವಾಗಲೆಂಬ ಉದ್ದೇಶದಿಂದ ಹೇಳಿದ್ದಾರೆಂದು ಎಸ್.ಟಿ.ಎಸ್. ಸಮರ್ಥಿಸಿಕೊಂಡ್ರು.ಅದೇನೇ ಇರಲಿ ಯಾರೇ ತಪ್ಪು ಮಾಡಿದ್ರೂ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ರು.

ವೈದ್ಯಕೀಯ ಸಚಿವ ಡಾ.ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೀಡಿದ ಭರವಸೆ ಕೆಲವು ವೈದ್ಯರಿಗೆ ಸಮಾಧಾನ ತರಲಿಲ್ಲ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಪರ ಲಾಭಿ ಮಾಡಲಾಗ್ತಿದೆ. ಒಬ್ಬ ಸಿಇಒ ರನ್ನ ಉಳಿಸಲು ಅಮಾಯಕ ವೈದ್ಯನ ಬಲಿ ಪಡೆಯಲಾಗುತ್ತಿದೆ. ಇವರು ಮನುಷ್ಯರೇ ಅಲ್ಲವೆಂದು ವೈದ್ಯ ಸಮೂಹ ಆಕ್ರೋಷ ವ್ಯಕ್ತಪಡಿಸಿತು.ಕೂಡಲೇ ಪ್ರಶಾಂತ್ ಕುಮಾರ್ ಮಿಶ್ರಾ ರನ್ನ ಅಮಾನತು ಪಡಿಸದಿದ್ದಲ್ಲಿ ನಾವು ಕರ್ತವ್ಯಕ್ಕೆ ಹಾಜರಾಗುವುದಿಲ್ಲವೆಂದು ಎಚ್ಚರಿಕೆ ನೀಡಿದ್ರು.

ಹಿರಿಯ ಅಧಿಕಾರಿಗಳ ಕಿರುಕುಳವೋ ಅಥವಾ ಕೆಲಸದ ಒತ್ತಡವೋ ಗೊತ್ತಿಲ್ಲ ಕೊರೋನಾ ವಾರಿಯರ್ ಒಬ್ರು ಸಾವನ್ನಪ್ಪಿದ್ದಾರೆ. ಸರ್ಕಾರ ಪರಿಹಾರ ಘೋಷಿಸಿದ್ರೂ ಕುಟುಂಬಕ್ಕೆ ಮಾತ್ರ ಡಾ.ನಾಗೇಂದ್ರ ಸಾವು ಭರಿಸಲಾದ ನಷ್ಟ ಮಾಡಿದೆ. ನಾಗೇಂದ್ರ ಸಾವಿಗೆ ನ್ಯಾಯ ದೊರೆಯಬೇಕಿದ್ರೆ ನಿಷ್ಪಕ್ಷಪಾತ ತನಿಖೆ ನಡೆಯಬೇಕಿದೆ. ತಪ್ಪಿತಸ್ಥರು ಯಾರೇ ಆಗಿದ್ರೂ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments