Home ರಾಜ್ಯ ಸಿಇಒ ಪ್ರಶಾಂತ್ ಕುಮಾರ್ ಪರ ಪಿಡಿಒಗಳ ಬ್ಯಾಟಿಂಗ್​..!

ಸಿಇಒ ಪ್ರಶಾಂತ್ ಕುಮಾರ್ ಪರ ಪಿಡಿಒಗಳ ಬ್ಯಾಟಿಂಗ್​..!

ಮೈಸೂರು : ನಂಜನಗೂಡು ತಾಲ್ಲೂಕು ವೈಧ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಭಂಧಿಸಿದಂತೆ ಮುಷ್ಕರ ಕೈಗೊಂಡಿದ್ದ ಸರ್ಕಾರಿ ವೈದ್ಯರು ಇಂದು ವಾಪಸ್ ಪಡೆದಿದ್ದಾರೆ. ಆದ್ರೆ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ವರ್ಗಾವಣೆ ಆದೇಶ ಪಿಡಿಒಗಳನ್ನ ಕೆರಳಿಸಿದೆ. ವೈದ್ಯರು ಮುಷ್ಕರ ವಾಪಸ್ ಪಡೆದ ಬೆನ್ನಲ್ಲೇ ಸಿಇಒ ಪರ ಭರ್ಜರಿ ಬ್ಯಾಟಿಂಗ್ ಮಾಡಲು ಪಿಡಿಒ ಗಳು  ಮುಂದಾಗಿದ್ದಾರೆ. 

ಟಿಹೆಚ್​​ಒ ಡಾ.ನಾಗೇಂದ್ರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಹೊತ್ತ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ವರ್ಗಾವಣೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಸಸ್ಪೆಂಡ್ ಮಾಡ್ಲೇಬೇಕು ಅಂತ ಪಟ್ಟು ಹಿಡಿದಿದ್ದ ಸರ್ಕಾರಿ ವೈದ್ಯರು ನಾಲ್ಕನೆ ದಿನವಾದ ಇಂದೂ ಕೂಡ ಮುಷ್ಕರ ಮುಂದುವರೆಸುವ ಸೂಚನೆಯನ್ನು ಶನಿವಾರ ಕೊಟ್ಟಿದ್ರು. ಇವತ್ತು ನಜರಬಾದ್ ನಲ್ಲಿರುವ ಡಿಹೆಚ್​​​​ಒ ಕಚೇರಿ ಆವರಣದಲ್ಲಿ ಸೇರಿದ ವೈದ್ಯರು ಸರ್ಕಾರದ ಮನವಿಗೆ ಸ್ಪಂದಿಸಿ ಮುಷ್ಕರ ಕೈಬಿಟ್ಟರು.

ಕೊರೋನಾ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಅಂತ ಕಾರಣ ಕೊಟ್ಟ ವೈದ್ಯರು ಮುಷ್ಕರ ವಾಪಸ್ ಪಡೆದರು. ಪ್ರಶಾಂತ್ ಕುಮಾರ್ ಮಿಶ್ರಾರವರ ವರ್ಗಾವಣೆ ಆದೇಶವನ್ನ ಸ್ವಾಗತಿಸಿದ ವೈದ್ಯರು ಕೆಲವು ಕಂಡೀಷನ್​ಗಳನ್ನು ಸರ್ಕಾರದ ಮೇಲೆ ಹೇರಿದ್ದಾರೆ. ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ನಿರ್ಧಾರ ಪ್ರಕಟಿಸಿದ ವೈದ್ಯರು ತಮ್ಮ ಬೇಡಿಕೆ ಈಡೇರಿಕೆಗಾಗಿ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿ ಮುಷ್ಕರ ಹಿಂದಕ್ಕೆ ಪಡೆದಿದ್ದಾರೆ.

ಪ್ರಶಾಂತ್ ಕುಮಾರ್ ಮಿಶ್ರಾ ವರ್ಗಾವಣೆಗೆ ವೈದ್ಯರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ತಮ್ಮ ಮುಷ್ಕರ ಕೈ ಬಿಟ್ಟಿದ್ದಾರೆ. ಅಂತ್ಯ ಕಾಣುವ ಎಲ್ಲಾ ಸೂಚನೆಗಳ ಮಧ್ಯೆ ಇದೀಗ ಪಿಡಿಒ ಗಳು ಸಿಡಿದೆದ್ದಿದ್ದಾರೆ.

ಪ್ರಶಾಂತ್ ಕುಮಾರ್ ಮಿಶ್ರಾ ಒಬ್ಬ ದಕ್ಷ ಅಧಿಕಾರಿ. ಅನಾವಶ್ಯಕವಾಗಿ ಅವರನ್ನ ತೇಜೋವಧೆ ಮಾಡಲಾಗಿದೆ. ಮಿಶ್ರಾರವರ ಮೇಲಿರುವ ಆರೋಪಕ್ಕೆ ತನಿಖೆ ಆರಂಭವಾಗಿದೆ. ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ. ಆದರೆ ತನಿಖೆ ಪೂರ್ಣಗೊಳ್ಳುವ ಮುನ್ನವೇ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂಬುದು ಪಿಡಿಒಗಳ ವಾದ.

ಕೂಡಲೇ ಸರ್ಕಾರ ವರ್ಗಾವಣೆ ಆದೇಶವನ್ನ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ. ಮಿಶ್ರಾ ಬೆಂಬಲಿಸಿ ಸೋಮವಾರ ಬೃಹತ್ ಜಾಥಾ ನಡೆಸಲು ತೀರ್ಮಾನಿಸಿದ್ದಾರೆ. ಒಬ್ಬ ಐಎಎಸ್ ಅಧಿಕಾರಿಯ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ನಡೆಯುತ್ತಿದೆ. ಎಲ್ಲೇ ಹೋಗಿ ಕರ್ತವ್ಯ ನಿರ್ವಹಿಸಿದ್ರೂ ಈ ಆರೋಪ ಅವರನ್ನ ಕಾಡುತ್ತೆ. ಈ ವಿಚಾರದಲ್ಲಿ ಪಿಡಿಒ ಸಂಘದಿಂದ ವರ್ಗಾವಣೆ ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಅಥವಾ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಪ್ರಶಾಂತ್ ಕುಮಾರ್ ಮಿಶ್ರಾ ಪರ ಹೋರಾಟಕ್ಕೆ ವೇದಿಕೆ ಸಜ್ಜಾಗುತ್ತಿದೆ.

ಒಟ್ಟಾರೆ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ ಹಲವು ತಿರುವುಗಳನ್ನ ಪಡೆಯುತ್ತಿದೆ. ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ಧ ವೈದ್ಯರು ಸಿಡಿದೆದ್ದರೆ, ಪರವಾಗಿ ಪಿಡಿಒಗಳು ರಸ್ತೆಗಿಳಿಯಲು ರೆಡಿಯಾಗಿದ್ದಾರೆ.  ಮಾಡಿಕೊಂಡಿದ್ದಾರೆ. ಡಾ.ನಾಗೇಂದ್ರ ಸಾವಿನ ಪ್ರಕರಣ ವೈದ್ಯರು v/s ಪಿಡಿಒಗಳು ಎಂಬಂತಾಗಿದೆ. ವೈದ್ಯರ ಮುಷ್ಕರಕ್ಕೆ ಅಂತ್ಯ ದೊರೆಯುತ್ತಿರುವಾಗಲೇ ಪಿಡಿಒಗಳ ಹೋರಾಟ ಸರ್ಕಾರಕ್ಕೆ ಮತ್ತೆ ತಲೆನೋವಾಗಲಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments