Home ರಾಜ್ಯ ಮಹಿಳಾ ಪೊಲೀಸ್​ ಮನೆಯಲ್ಲಿ ಸಿನಿಮೀಯ ರೀತಿಯ ಕಳ್ಳತನ..!

ಮಹಿಳಾ ಪೊಲೀಸ್​ ಮನೆಯಲ್ಲಿ ಸಿನಿಮೀಯ ರೀತಿಯ ಕಳ್ಳತನ..!

 ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ಸಿನಿಮೀಯ ಮಾದರಿಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಮಹಿಳಾ ಪೊಲೀಸ್ ಮುಖ್ಯಪೇದೆ ಮನೆಯಲ್ಲೇ ಕಳ್ಳತನ ನಡೆದಿದೆ.
ಸಿಸಿಆರ್ ಬಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವನಜಾಕ್ಷಿ ಎಂಬುವವರ ಸರಸ್ವತಿಪುರಂ ನಲ್ಲಿರುವ ನಿವಾಸದಲ್ಲಿ ಕಳ್ಳತನವಾಗಿದೆ. 
 
ಬೀಗ ಒಡೆದಿಲ್ಲ, ಬಾಗಿಲು,ಕಿಟಕಿ ಮುರಿದಿಲ್ಲ ! : ಮನೆಯ ಬೀಗ ಒಡೆದಿಲ್ಲ, ಬಾಗಿಲು, ಕಿಟಕಿ ಮುರಿದಿಲ್ಲ..! ಆದ್ರೂ ಮನೆಯಲ್ಲಿದ್ದ ಎರಡು ಕೆ.ಜಿ.ಚಿನ್ನ ನಾಪತ್ತೆಯಾಗಿದೆ.
ಕಳ್ಳತನದ ವೇಳೆಯಲ್ಲಿ ಮನೆಯಲ್ಲಿ ಬಾಲಕಿಯೊಬ್ಬಳು ಮಾತ್ರ ಇದ್ದಳು ಎನ್ನಲಾಗಿದೆ.  ಸಣ್ಣ ಕುರುಹು ಇಲ್ಲದೆ ಚಾಲಾಕಿ ಕಳ್ಳರು ಚಿನ್ನ ಕದ್ದೊಯ್ದಿದ್ದಾರೆ. ಮಧ್ಯ ರಾತ್ರಿ ಮೂರು ಗಂಟೆ ವೇಳೆಯಲ್ಲಿ ಕಳ್ಳತನ ನಡೆದಿದೆ ಎನ್ನಲಾಗಿದೆ.
ಬ್ಯಾಂಕ್ ನಲ್ಲಿ ಇಡಲಾಗಿದ್ದ ಚಿನ್ನಾಭರಣಗಳನ್ನ ಮನೆಗೆ ತಂದು ಇಟ್ಟುಕೊಂಡಿದ್ದಾರೆ.
ವನಜಾಕ್ಷಿಗೆ ರವರಿಗೆ ಸೇರಿದ 1.5 ಕೆಜಿ ಚಿನ್ನ ಹಾಗೂ ಸಂಬಂಧಿಕರಿಗೆ ಸೇರಿದ ಅರ್ಧ ಕೆ.ಜಿ.ಚಿನ್ನ ಕಳ್ಳತನವಾಗಿದೆ. 
ಸಂಬಂಧಿಕರ ಮನೆ ರಿಪೇರಿ ನಡೆಯುತ್ತಿದ್ದ ಕಾರಣ ಅವರಿಗೆ ಸೇರಿದ ಅರ್ಧ ಕೆ.ಜಿ. ಚಿನ್ನ ವನಜಾಕ್ಷಿ ಮನೆಗೆ ತಂದು ಇಡಲಾಗಿತ್ತೆಂದು ಹೇಳಲಾಗಿದೆ.
ಕಳೆದ ರಾತ್ರಿ ವನಜಾಕ್ಷಿ ಅತ್ತೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಮನೆಯಲ್ಲಿ ಕಳವು ಆಗಿದೆ ಎಂದು ತಿಳಿದುಬಂದಿದೆ. 
ಸರಸ್ವತಿಪುರಂ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ. ನಿಗೂಢವಾಗಿ ಚಿನ್ನಾಭರಣ ಮಾಯವಾಗಿರೋದು ಕುತೂಹಲಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments