Home ರಾಜ್ಯ ದಾಖಲೆ ಇಲ್ಲದ ಬೈಕ್ ಪೊಲೀಸರ ವಶಕ್ಕೆ ...ಮನ ನೊಂದ ಬಾಲಕ ನೇಣಿಗೆ...

ದಾಖಲೆ ಇಲ್ಲದ ಬೈಕ್ ಪೊಲೀಸರ ವಶಕ್ಕೆ …ಮನ ನೊಂದ ಬಾಲಕ ನೇಣಿಗೆ…

ಮೈಸೂರು :ದಾಖಲೆ ಇಲ್ಲದೆ ಬೈಕ್ ಓಡಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಬಾಲಕ ಮನ ನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಸುಣ್ಣದಕೇರಿಯಲ್ಲಿ ನಡೆದಿದೆ. ಗಸ್ತಿನಲ್ಲಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದ ೧೭ ವರ್ಷದ ಅಪ್ರಾಪ್ತ ಬಾಲಕ ದರ್ಶನ್ ಮನೆಗೆ ಹಿಂತಿರುಗಿ ನೇಣಿಗೆ ಶರಣಾಗಿದ್ದಾನೆ.

ನಿನ್ನೆ ರಾತ್ರಿ ಗಸ್ತಿನಲ್ಲಿದ್ದ ಕೆ.ಆರ್.ಠಾಣಾ  ಪೊಲೀಸರಿಗೆ ನಂಜುಮಳಿಗೆ ವೃತ್ತದ ಬಳಿ  ನಂಬರ್ ಪ್ಲೇಟ್ ಇಲ್ಲದ ಬಾಕ್ಸರ್ ಬೈಕ್ ನಲ್ಲಿ ಸ್ನೇಹಿತನ ಜೊತೆ ಬಂದು ಸಿಕ್ಕಿಬಿದ್ದಿದ್ದಾನೆ. ಬೈಕ್ ಗೆ ಹಿಂಬದಿ ನಂಬರ್ ಪ್ಲೇಟ್ ಇಲ್ಲ ಹಾಗೂ ಮುಂಬದಿಯ ನಂಬರ್ ಪ್ಲೇಟ್ ಕಟ್ ಆಗಿತ್ತು.ಈ ಕಾರಣ ಬೈಕನ್ನ ಪೊಲೀಸ್ರು ಸೀಜ್ ಮಾಡಿದ್ದಾರೆ.ಈ ವೇಳೆ ದರ್ಶನ್ ಮೇಲೆ ಪೊಲೀಸ್ರು ಹಲ್ಲೆ ನಡೆಸಿದರು ಎಂಬ  ಆರೋಪ ಕೇಳಿಬಂದಿದೆ.

ದಾಖಲೆಗಳನ್ನ ತಂದು ತೋರಿಸಿ ವಾಹನ ಹಿಂದಕ್ಕೆ ಪಡೆಯುವಂತೆ ಪೊಲೀಸರ ಸೂಚನೆ ನೀಡಿ ಕಳಿಸಿದ್ದಾರೆ. ದಾಖಲೆಗಳನ್ನ ತರಲು ಹೋದ ದರ್ಶನ್ ಘಟನೆ ಬಗ್ಗೆ ಬೇಸತ್ತು ನೇಣಿಗೆ ಶರಣಾಗಿದ್ದಾನೆ.

ಕೆ.ಆರ್.ಠಾಣಾ ಪೊಲೀಸರು  ಪರಿಶೀಲನೆ ನಡೆಸುತ್ತಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments