Home P.Special ಐಟಿ ಉದ್ಯೋಗಕ್ಕೆ ಬೈ ಬೈ .. ಕೃಷಿಗೆ ಜೈ ಜೈ..!

ಐಟಿ ಉದ್ಯೋಗಕ್ಕೆ ಬೈ ಬೈ .. ಕೃಷಿಗೆ ಜೈ ಜೈ..!

ಮೈಸೂರು :  ಕಂಪ್ಯೂಟರ್ ,ಲ್ಯಾಪ್ ಟ್ಯಾಪ್ ಗಳನ್ನ ಹಿಡಿಯಬೇಕಿದ್ದ ಕೈಗಳೀಗ ಎತ್ತುಗಳನ್ನ ಹಿಡಿದಿವೆ. ವ್ಯವಸಾಯ ತೊರೆದು ನಗರದತ್ತ ಮುಖಮಾಡುತ್ತಿರುವ ಕೃಷಿಕರಿಗೆ ಈ ಟೆಕ್ಕಿಗಳು ಮಾದರಿಯಾಗಿದ್ದಾರೆ. ಹವಾನಿಯಂತ್ರಿತ ಕೊಠಡಿಯಲ್ಲಿರಬೇಕಿದ್ದ ಉದ್ಯೋಗಿಗಳು ಕೃಷಿಯತ್ತ ಆಕರ್ಷಿಸಿ ಸಾಧನೆ ಮಾಡಲು ಬಂದಿದ್ದಾರೆ. ಮೂವರು ಟೆಕ್ಕಿಗಳೀಗ ಸಾಂಪ್ರದಾಯಿಕ ಕೃಷಿಗೆ ಮುಂದಾಗಿ ಸಾಧನೆಯತ್ತ ಮುನ್ನುಗ್ಗಿದ್ದಾರೆ.

ಸದಾ ಕಾಲ ಕಂಪ್ಯೂಟರ್ ಮುಂದೆ ಮುಳುಗುತ್ತಿದ್ದ ಟೆಕ್ಕಿಗಳಿಂದು ದೇಸೀ ಪದ್ದತಿಯ ಎಣ್ಣೆಗಾಣದ ಉದ್ಯಮವನ್ನ ಅಪ್ಪಿಕೊಂಡಿದ್ದಾರೆ.
ಐಟಿ ವಲಯಕ್ಕೆ ಬೈ..ಬೈ.. ಹೇಳಿ ಕೃಷಿ ವಲಯಕ್ಕೆ ಎಂಟ್ರಿ ಕೊಟ್ಟು ಐಟಿ ಕ್ಷೇತ್ರದಲ್ಲಿ ಕಾಣದ ತೃಪ್ತಿಯನ್ನ ಕೃಷಿ ವಲಯದಲ್ಲಿ ಕಂಡಕೊಂಡಿದ್ದಾರೆ.

ಕೆ.ಆರ್.ನಗರದ ಅಡಗನಹಳ್ಳಿಯಲ್ಲಿ ಇದ್ದಾರೆ ಈ ಕೃಷಿಕರಾದ ಟೆಕ್ಕಿಗಳು. ಕೆ.ಆರ್.ನಗರದ ನವೀನ್ ಕುಮಾರ್ ಚಾಮರಾಜನಗರದ ಮಹೇಶ್ ಹಾಗೂ ಬೆಂಗಳೂರಿನ ಯೋಗೇಶ್ ರವರ ಸಾಧನೆ ಇದು. 

ಬೆಂಗಳೂರಿನ ಹೆಸರಾಂತ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಕೈ ತುಂಬಾ ಸಂಬಳ ಬರುತ್ತಿತ್ತು. ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂಬ ಹಂಬಲದಿಂದ ಕಂಪನಿಗೆ ಗುಡ್ ಬೈ ಹೇಳಿ ಕೆ.ಆರ್.ನಗರದ ಅಡಗನಹಳ್ಳಿ ಗ್ರಾಮದತ್ತ ಮುಖಮಾಡಿದ್ದಾರೆ.  ಕೆಲಸಕ್ಕೆ ರಾಜೀನಾಮೆ ಕೊಟ್ಟ ನಂತರ ಮೂವರು ಟೆಕ್ಕಿಗಳು ಸುಮಾರು 15 ಸಾವಿರ ಕಿಲೋಮೀಟರ್ ಸುತ್ತಾಡಿ ಕೃಷಿ ವಿಚಾರದಲ್ಲಿ ಸಾಕಷ್ಟು ಸರ್ವೆ ಮಾಡಿ ಕೊನೆಗೆ ನಿರ್ಧಾರಕ್ಕೆ ಬಂದಿದ್ದು ದೇಸಿ ಪದ್ದತಿಯ ಎಣ್ಣೆಗಾಣದ ಉದ್ಯಮ ಆರಂಭಿಸುವುದು..!

ಗ್ರಾಮೀಣ ಪ್ರದೇಶದಲ್ಲಿ ಆರಂಭಿಸಲು ಉದ್ದೇಶಿಸಿ ಕೆ.ಆರ್.ನಗರದ ಅಡಗನಹಳ್ಳಿಯಲ್ಲಿ ಮೂರು ವರ್ಷದ ಹಿಂದೆ 2 ಎಕರೆ ಜಮೀನು ಖರೀದಿಸಿದ ನವೀನ್ ಕುಮಾರ್ ಸ್ನೇಹಿತರ ಜೊತೆ ಸೇರಿ ಒಂದು ಅಡುಗೆ ಎಣ್ಣೆ ಅರೆಯುವ ಗಾಣ ಆರಂಭಿಸಿದ್ರು. ದೇಸಿ ನ್ಯಾಚುರಲ್ಸ್ ಹೆಸರಿನಲ್ಲಿ ಆರಂಭವಾದ ಉದ್ಯಮ ಇದೀಗ 6 ಗಾಣಗಳಾಗಿ ಬೆಳೆದಿವೆ. 
25 ಮಂದಿಗೆ ಉದ್ಯೋಗ ಸೃಷ್ಟಿಯಾಗಿದೆ.
ಪರಿಶುದ್ಧ ಆಹಾರ, ಕಲಬೆರೆಕೆ ಬಗ್ಗೆ ಜಾಗೃತಿ, ನೈಸರ್ಗಿಕ ಕೃಷಿ ಪದ್ಧತಿ ಸಂಕಲ್ಪದೊಂದಿಗೆ ಆರಂಭವಾದ ದೇಸೀ ನ್ಯಾಚುರಲ್ಸ್ ಇದೀಗ ಮಾದರಿ ಉದ್ಯಮ.
ಸಾಂಪ್ರದಾಯಿಕ ಕೃಷಿ ವಿಧಾನಗಳಿಗೆ ಒತ್ತು ನೀಡಿ ಅಡುಗೆ ಎಣ್ಣೆ ಸೇರಿದಂತೆ ಹಲವು ಬಗೆಯ ಎಣ್ಣೆ ಉತ್ಪಾದನೆ ಮಾಡಲಾಗುತ್ತಿದೆ.
ಎತ್ತುಗಳು ಇದೀಗ ಎಣ್ಣೆಗಾಣದ ಸಾರಥಿಗಳಾಗಿವೆ. ದೇಸೀ ತಳಿ ದನಗಳ ಸಂತತಿಗೂ ರಕ್ಷಣೆಯ ಭಾಗ್ಯ ದೊರೆತಿದೆ. ಕೃಷಿ ತೊರೆಯುತ್ತಿರುವ ರೈತರಿಗೆ ಟೆಕ್ಕಿಗಳ ಕಾರ್ಯ ಮಾದರಿಯಾಗುತ್ತಿದೆ.
ತಿಂಗಳಿಗೆ 6000 ಕೆ.ಜಿ.ಎಣ್ಣೆ ಉತ್ಪಾದನೆ ಮಾಡುವ ಟೆಕ್ಕಿಗಳು2500 ಕ್ಕೂ ಹೆಚ್ಚು ಗ್ರಾಹಕರನ್ನ ಆಕರ್ಷಿಸಿದ್ದಾರೆ.
ಮಾರುಕಟ್ಟೆಗಿಂತಲೂ ದುಪ್ಪಟ್ಟು ಬೆಲೆಯಾದ್ರೂ ಗುಣಮಟ್ಟಕ್ಕೆ ಸೋತ ಗ್ರಾಹಕರು ಖರೀದಿಸುತ್ತಿದ್ದಾರೆ. ಪರಿಸರ ಸ್ನೇಹಿ ವಾತಾವರಣ ಸೃಷ್ಟಿಯಾಗಿದೆ. ಉತ್ಪಾದಿಸಿದ ಎಣ್ಣೆ ವೈಜ್ಞಾನಿಕವಾಗಿ ಸಂರಕ್ಷಿಸಲಾಗುತ್ತದೆ. ಪ್ಲಾಸ್ಟಿಕ್ ಬಳಕೆಗೆ ಬ್ರೇಕ್ ಹಾಕಿ ಗಾಜಿನ ಬಾಟಲ್ ಬಳಸಲಾಗುತ್ತಿದೆ.
ಹಳ್ಳಿಗಳಿಂದಲೇ ನಿರುದ್ಯೋಗ ಸಮಸ್ಯೆ ನೀಗಿಸುವ ಗುರಿ ಇವರಿಗೆ ಇದೆ.
ಪ್ರತಿಯೊಂದು ಹಳ್ಳಿಯಲ್ಲೂ ಗಾಣಗಳು ಸ್ಥಾಪನೆ ಆಗಬೇಕೆಂಬ ಆಕಾಂಕ್ಷೆ ಮೂವರಲ್ಲೂ ತುಂಬಿಕೊಂಡಿದೆ. ಈ ಮೂಲಕ ಗುಡಿಕೈಗಾರಿಕೆಗಳು ಬೆಳೆಯಬೇಕೆಂಬ ಹಂಬಲವಿದೆ.
ದೇಸೀ ಪದ್ದತಿಯಲ್ಲಿರುವ ಎಣ್ಣೆಗಾಣಗಳಿಗೆ ಮರುಹುಟ್ಟು ನೀಡುವ ಇಚ್ಛಾಶಕ್ತಿ ಬೆಳೆಸಿಕೊಂಡಿರುವ ಇವರಿಗೆ ಸಾಕಷ್ಟು ಯೋಜನೆಗಳನ್ನ ಸಿದ್ದಪಡಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವ ಗುರಿ ಇದೆ.
ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಈ ಟೆಕ್ಕಿಗಳ ಕಾರ್ಯ ಪ್ರೇರಣೆಯಾಗಿದೆ.
ಟೆಕ್ಕಿಗಳ ಕೃಷಿ ಆಸಕ್ತಿಗೆ ಸ್ಥಳೀಯರು ಫಿದಾ ಆಗಿದ್ದಾರೆ. ಕೃಷಿ ಬಗ್ಗೆ ಅಸಡ್ಡೆ ತೋರುವ ಇಂದನ ಯುವಪೀಳಿಗೆಗೆ ಖಂಡಿತವಾಗ್ಲೂ ಇವರು ಮಾದರಿ.

-ಕೃಷ್ಣಕುಮಾರ್, ಮೈಸೂರು 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments