Sunday, June 26, 2022
Powertv Logo
Homeದೇಶವಿವಾಹ ಕಾಯ್ದೆಗೆ ಮುಸ್ಲಿಂ ಲೀಗ್​​ ವಿರೋಧ

ವಿವಾಹ ಕಾಯ್ದೆಗೆ ಮುಸ್ಲಿಂ ಲೀಗ್​​ ವಿರೋಧ

ಕೇರಳ : ಪುರುಷ ಮತ್ತು ಮಹಿಳೆಯರ ವಿವಾಹ ವಯೋಮಿತಿಯಲ್ಲಿ ಏಕರೂಪತೆ ತರುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿತ್ತು.

ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಸಂಬಂಧ ಮಸೂದೆಯನ್ನು ತರಲು ಸರ್ಕಾರ ತೀರ್ಮಾನವನ್ನು ತೆಗೆದುಕೊಂಡಿತ್ತು. ಆದರೆ ಈಗ ಈ ನಿರ್ಧಾರವನ್ನು ಕೇರಳದ ಹಲವು ಮುಸ್ಲಿಂ ಸಂಘಟನೆಗಳು ವಿರೋಧಿಸಿವೆ. ಆದರೆ ಕೇರಳದ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್, ಲಿಂಗ ತಾರತಮ್ಯವಿಲ್ಲದೆ ಮದುವೆಯ ವಯಸ್ಸಿನಲ್ಲಿ ಏಕರೂಪತೆಯನ್ನು ತರುವ ನಿರ್ಧಾರವನ್ನು ಶ್ಲಾಘಿಸಿದ್ದು, ಮಹಿಳೆಯರು 21 ರ ವರ್ಷದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಲು ಅವಕಾಶ ಸಿಗುತ್ತದೆ ಇದು ಪ್ರಬುದ್ಧ ಸಂಬಂಧ ಮತ್ತು ಆರೋಗ್ಯಕರ ಕುಟುಂಬಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಆದರೆ ಮುಸ್ಲಿಂ ಲೀಗ್‌ ಇದನ್ನು ವಿರೋಧಿಸುವ ಮೂಲಕ ಇದೊಂದು ಕೋಮು ದೃಷ್ಟಿಕೋನದಿಂದ ಕೂಡಿದ ಹೊಸ ಕಾನೂನಾಗಿದ್ದು, ಸಂಘ ಪರಿವಾರದ ನೆಚ್ಚಿನ ಕಾರ್ಯಸೂಚಿವಾದ.ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ದೂರಿದೆ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಮದುವೆ, ವಿಚ್ಛೇದನ ಮತ್ತು ಆಸ್ತಿಯ ಹಕ್ಕನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ ಮತ್ತು ವಿವಾಹದ ವಯಸ್ಸನ್ನು ಏರಿಸುವುದು ಲಿವ್-ಇನ್ ಸಂಬಂಧಗಳು ಮತ್ತು ನ್ಯಾಯಸಮ್ಮತವಲ್ಲದ ಸಂಬಂಧಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳುತ್ತಿದ್ದಾರೆ.

ಮುಸ್ಲಿಂ ಲೀಗ್‌ನ ಮಹಿಳಾ ವಿಭಾಗ, ಸುನ್ನಿ ವಿದ್ವಾಂಸರ ಸಂಘಟನೆಯಾದ ಸಮಸ್ತ ಕೇರಳ ಜಮೈತ್-ಉಲ್-ಉಲೇಮಾ ಮತ್ತು ಇತರ ಅನೇಕ ಮುಸ್ಲಿಂ ಧಾರ್ಮಿಕ ಸಂಘಟನೆಗಳು ಮುಖ್ಯವಾಗಿ ತೀವ್ರವಾಗಿ ವಿರೋಧಿಸಿದ್ದು, ಇನ್ನು ಮುಸ್ಲಿಂ ಸಂಸ್ಥೆಗಳ ವಿರೋಧಕ್ಕೆ ಸಿಪಿಐನ ಮಹಿಳಾ ವಿಭಾಗ, ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಬೆಂಬಲ ನೀಡಿದ್ದಾರೆ.

ಹಾಗೂ ಮುಸ್ಲಿಂ ಲೀಗ್ ನಾಯಕ ಇಟಿ ಮೊಹಮ್ಮದ್ ಬಶೀರ್ ಶುಕ್ರವಾರ ಲೋಕಸಭೆಯಲ್ಲಿ ವಯೋಮಿತಿ ಹೆಚ್ಚಳದ ನಿರ್ಣಯ ಮಂಡಿಸಿ, ಈ ನಿರ್ಧಾರ ಮುಸ್ಲಿಂ ವೈಯಕ್ತಿಕ ಕಾನೂನಿಗೆ ವಿರುದ್ಧವಾಗಿದೆ ಮತ್ತು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಪರಿಚಯಿಸುವ ಮತ್ತೊಂದು ಹೆಜ್ಜೆಯಾಗಿದೆ ಎಂದು ಹೇಳಿದರು.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments