ಇಸ್ಲಾಮಾಬಾದ್ : ಗಲ್ಲು ಶಿಕ್ಷೆಗೆ ಗುರಿಯಾಗಿರುವ ಪಾಕ್ ಪ್ರಧಾನಿ ಪರ್ವೇಜ್ ಮುಷರಫ್ ಶಿಕ್ಷೆಗೂ ಮುನ್ನ ಸಾವನ್ನಪ್ಪಿದರೆ ಶವವನ್ನು ಮೂರು ದಿನಗಳ ಕಾಲ ನೇತು ಹಾಕುವಂತೆ ಕೋರ್ಟ್ ಹೇಳಿದೆ.
ದೇಶದ್ರೋಹ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮುಷರಫ್ ಮರಣ ಹೊಂದಿದ್ರೆ ಶವವನ್ನು ಇಸ್ಲಾಮಾಬಾದ್ನಲ್ಲಿರುವ ಸೆಂಟ್ರಲ್ ಸ್ಕ್ವೇರ್ನಲ್ಲಿ ಮೂರು ದಿನ ನೇತುಹಾಕಬೇಕೆಂದು ಮುಖ್ಯ ನ್ಯಾಯಾಧೀಶ ಅಹಮ್ಮದ್ ಸೇಠ್ 167 ಪುಟಗಳ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
1999 ರಿಂದ 2008ರವರೆಗೆ ಪಾಕ್ ಸರ್ವಾಧಿಕಾರಿಯಾಗಿ ಅಧಿಕಾರ ನಡೆಸಿದ್ದ ಮುಷರಫ್ ಆಡಳಿತಾವಧಿಯಲ್ಲೇ ಭಾರತ – ಕಾರ್ಗಿಲ್ ಯುದ್ದ ನಡೆದಿದ್ದನ್ನು ಸ್ಮರಿಸಬಹುದು. ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಷರಫ್ಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.
ಪಾಕ್ ಮಾಜಿ ಅಧ್ಯಕ್ಷ ಮುಷರಫ್ಗೆ ಗಲ್ಲು!