Home ರಾಜ್ಯ ಸೋಂಕಿತನ ಅಂತ್ಯಕ್ರಿಯೇ ನೆರವೇರಿಸಿದ ಮುಸಲ್ಮಾನ್ ಯುವಕರು..!  

ಸೋಂಕಿತನ ಅಂತ್ಯಕ್ರಿಯೇ ನೆರವೇರಿಸಿದ ಮುಸಲ್ಮಾನ್ ಯುವಕರು..!  

ಶಿವಮೊಗ್ಗ : ಕೊರೋನಾದಿಂದ ಸಾವನಪ್ಪಿದವನಿಗೆ, ಕುಟುಂಬಸ್ಥರು, ಮತ್ತು ನೆರೆಹೊರೆಯವರು, ಅಂತ್ಯಕ್ರಿಯೇ ಮಾಡಲು ಹಿಂಜರಿದ ಹಿನ್ನೆಲೆಯಲ್ಲಿ, ಮುಸಲ್ಮಾನ್ ಯುವಕರೇ ನಿಂತು ಅಂತ್ಯಕ್ರಿಯೇ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಶಿವಮೊಗ್ಗದ  ಶಿರಾಳಕೊಪ್ಪದಲ್ಲಿಯೇ ಈ ಘಟನೆ ನಡೆದಿದ್ದು, ಇಲ್ಲಿನ ದೇವರಾಜು ಅರಸು ಕಾಲೋನಿ ನಿವಾಸಿ ಸಂಪತ್ ಕುಮಾರ್ ಗೆ, ಕಳೆದ 10 ದಿನಗಳ ಹಿಂದೆ ಶೀತ, ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು.  ಅಂದಿನಿಂದ ಮನೆಯಲ್ಲಿಯೇ, ಚಿಕಿತ್ಸೆ ಪಡೆದುಕೊಂಡಿದ್ದ ಈತ ನಿನ್ನೆ ತೀವ್ರ ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪಿದ್ದ.  ಕೊನೆ ಘಳಿಗೆಯಲ್ಲಿ ಆಸ್ಪತ್ರೆಗೆ ಕೊಂಡೊಯ್ದ ಕುಟುಂಬಸ್ಥರಿಗೆ ವೈದ್ಯರು ಈ ವ್ಯಕ್ತಿಗೆ ಕೊರೋನಾ ಇರುವುದು ಧೃಢಪಡಿಸಿದ್ರು.  ಈ ವೇಳೆ ಅಂತ್ಯಕ್ರಿಯೇ ನೆರವೇರಿಸಲು ಕುಟುಂಬಸ್ಥರು ಒಪ್ಪದ ಹಿನ್ನೆಲೆಯಲ್ಲಿ, ಹ್ಯೂಮನಿಟಿ ರಿಲೀಫ್ ಸೊಸೈಟಿ ಸಂಸ್ಥೆಯ ಮುಸಲ್ಮಾನ್ ಸದಸ್ಯರು, ಮತ್ತು ಸ್ಥಳೀಯ ಸಮಾಜ ಸೇವಕರು ಹಾಗೂ ಲಾರಿ ಮಾಲೀಕರ ಸಂಘದ ಸದಸ್ಯರು ತಾವೇ ನಿಂತು ಅಂತ್ಯಕ್ರಿಯೇ ನೆರವೇರಿಸಿದ್ದಾರೆ.

 ಇನ್ನು ಅಂತ್ಯಕ್ರಿಯೇ ನಡೆಯುವ ವೇಳೆ, ದೂರದಲ್ಲಿ ನಿಂತು ಕುಟುಂಬಸ್ಥರು ಮತ್ತು ನೆರೆಹೊರೆಯವರು ವೀಕ್ಷಿಸಿದ್ದಾರೆ.  ಈ ಮೂಲಕ, ಜಾತಿ-ಧರ್ಮದ ಅಮಲಿನಲ್ಲಿ ಹೀಯಾಳಿಸುವ ಜನರಿಗೆ ಇಲ್ಲಿನ ಮುಸಲ್ಮಾನ್ ಯುವಕರು, ಉತ್ತರ ನೀಡಿದ್ದಾರೆ.  ನಾವೆಲ್ಲರೂ ಒಂದೇ ಎನ್ನುವ ಸಂದೇಶ ರವಾನಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments