Home ರಾಜ್ಯ ರಾಮ, ಕೃಷ್ಣ ದೇವರೇ ಅಲ್ವಂತೆ..!  ಬಿಜೆಪಿ ನಾಯಕನಿಂದ  ಹಿಂದೂ ದೇವರ ಬಗ್ಗೆ ಅಪಸ್ವರ..!

ರಾಮ, ಕೃಷ್ಣ ದೇವರೇ ಅಲ್ವಂತೆ..!  ಬಿಜೆಪಿ ನಾಯಕನಿಂದ  ಹಿಂದೂ ದೇವರ ಬಗ್ಗೆ ಅಪಸ್ವರ..!

ಬೆಂಗಳೂರು :  ಇದು ಪ್ರತಿಯೊಬ್ಬ ಆಸ್ತಿಕರನ್ನು ರೊಚ್ಚಿಗೇಳಿಸುವಂಥಾ ಸುದ್ದಿ. ಬಿಜೆಪಿ ನಾಯಕರೊಬ್ಬರು  ಹಿಂದೂ ದೇವರನ್ನು ಅವಹೇಳನ ಮಾಡಿದ್ದಾರೆ. ರಾಮ, ಕೃಷ್ಣ, ಶಿವ ಸೇರಿದಂತೆ ಹಿಂದೂ ದೇವಾನುದೇವತೆಗಳ ಬಗ್ಗೆ ಅಪಸ್ವರ ತೆಗೆದಿದ್ದಾರೆ.

ಹಿಂದುತ್ವ ಪಕ್ಷ ಅಂತಲೇ ಗುರುತಿಸಿಕೊಂಡಿರೋ, ಕರೆಯಲ್ಪಡೋ ಬಿಜೆಪಿ ಪಕ್ಷದ ಕಟ್ಟಾಳು ಮೈಮೇಲೆ ಎಳೆದುಕೊಂಡಿರೋ ಪ್ರಮಾದವಿದು! ಆ ಜನನಾಯಕ ಬೇರೆ ಯಾರೂ ಅಲ್ಲ ಶುಗರ್ ಕಂಪನಿಗಳ ಕಿಂಗ್, ನಿರಾಣಿ ಶುಗರ್ಸ್​ ಲಿಮಿಟೆಡ್​ ಅಧ್ಯಕ್ಷ, ಶಾಸಕ ಮುರುಗೇಶ್ ನಿರಾಣಿ.

ಹೌದು, ಮುರುಗೇಶ್ ನಿರಾಣಿ ವಾಟ್ಸ್​ಆ್ಯಪ್​ನಲ್ಲಿ ಬ್ರಹ್ಮ, ವಿಷ್ಣು, ರಾಮ, ಕೃಷ್ಣ, ಇಂದ್ರ ಮೊದಲಾದ  ಹಿಂದೂ ಆರಾಧ್ಯ ದೇವರುಗಳ ಬಗ್ಗೆ ಅತ್ಯಂತ ಕೀಳಾದ ಮೆಸೇಜನ್ನು ಫಾರ್ವಡ್ ಮಾಡಿದ್ದಾರೆ. ಈ ಮೂಲಕ ಆಸ್ತಿಕರ ಭಾವನೆಗೆ ಧಕ್ಕೆ ತಂದಿದ್ದಾರೆ, ದೇವರ ವಿಚಾರದಲ್ಲಿ ಕಿಡಿ ಹತ್ತಿಸಿದ್ದಾರೆ.

‘’ಮಗಳನ್ನೇ  ಮದುವೆಯಾದ ಬ್ರಹ್ಮ ನಮಗೆ ದೇವರು. 16 ಸಾವಿರ ಹೆಂಡಂದಿರನ್ನು ಮದುವೆಯಾದ ದನಕಾಯುವ ಕೃಷ್ಣ ದೇವರು, ಮುಗ್ಧ ಬಾಲಕಿಯರು ಸರೋರವರದಲ್ಲಿ ಬೆತ್ತಲೆ ಸ್ನಾನ ಮಾಡುವಾಗ ಸೀರೆ ಕದ್ದವ ನಮ್ಮ ದೇವರು. ತಲೆ ಮೇಲೆ ಒಬ್ಬಳು, ತೊಡೆಯ ಮೇಲೆ ಒಬ್ಬಳನ್ನು ಇಟ್ಟುಕೊಂಡಾತ ನಮಗೆ ದೇವರು. ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ರಾಮ ನಮ್ಮ ದೇವರು. ಹಾವು, ಹಂದಿ, ಕುದುರೆ, ಕತ್ತೆ, ನಾಯಿ, ಆಕಳು, ರತ್ನಪಕ್ಷಿ ಇನ್ನೂ ಹಲವು ದೇವರಾದರೆ, ಕಾಗೆ, ಗೂಬೆ, ಬೆಕ್ಕು ಇವು ಅಪಶಕುನ, ದೇವರುಗಳಿಗೆ ದೇವರೆನಿಸಿಕೊಂಡಾತ ಇಂದ್ರನು ಮಾಡಲಾರದ ಅನಾಚಾರಗಳು ಎಷ್ಟು? ಆದರೂ ನಮ್ಮ ದೇವರು.  ಜರಾಸಂಧನ ಹೆಂಡತಿ ವೃಂದಾಳನ್ನು ಅತ್ಯಾಚಾರ ಮಾಡಿದ ವಿಷ್ಣು ನಮ್ಮ ದೇವರು, ಗಂಡನ ಸಂಪರ್ಕ ಪಡೆಯದೇ ಸೂರ್ಯನಿಂದ, ಯಮನಿಂದ, ಇಂದ್ರನಿಂದ, ವಾಯುವಿನಿಂದ, ಪುತ್ರರನ್ನು ಪಡೆದ ಕುಂತಿ ದೇವತೆ. ಸನಾತನಿಗಳು ತಮ್ಮ ತೀಟೆಗೆ ನೂರೆಂಟು ಕಥೆಕಟ್ಟಿ ಸ್ತ್ರೀಯರನ್ನು ದೇವದಾಸಿಯರನ್ನಾಗಿ ಮಾಡಿದರು. ಸೂಳೆಯರನ್ನಾಗಿ ಮಾಡಿದರು. ದೇಹ ಸುಖ ಸವಿಯಲು ಬೆತ್ತಲೆ ಮೆರವಣಿಗೆ ಆಚರಣೆಗೆ ತಂದರು’’ ಅಂತ ತುಚ್ಛ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಮುಂದುವರೆದು, ‘’ ವಿಶ್ವಗುರು ಅಪ್ಪ ಬಸವಣ್ಣ, ಪತಿತೆಯರನ್ನು ತಾಯಿಯಾಗಿ ಕಂಡ ಜಗತ್ತಿನ ಏಕೈಕ ದಾರ್ಶನಿಕರು, ದಯವೇ ಧರ್ಮದವೆಂದರು. ಕಾಯಕವೇ ಕೈಲಾಸವೆಂದರು. ಸ್ತ್ರೀಯರಿಗೆ ಗೌರವ ಸಮಾನತೆ ತಂದರು. ಸ್ತ್ರೀ ಸೂತಕತೆಗೆ ವಿರೋಧಿಸಿದರು. ಸಕಲರೂ ಸಮಾನರೆಂದರು. ದೇಹವೇ ದೇಗುಲವೆಂದರು, ದಾಸೋಹದ ಹರಿಕಾರರು, ಕರಸ್ಥಲದಲ್ಲಿ ಚುಳುಕಾಗಿಸಿದ ಇಷ್ಟಲಿಂಗದ ಪರಿಕಲ್ಪನೆಯಲ್ಲಿ ಬ್ರಹ್ಮಾಂಡ (ಯೂನಿವರ್ಸ್) ವನ್ನೇ ಪೂಜಿಸಿ ವಿಶ್ವ ವೈಶಾಲ್ಯತೆಯನ್ನು ಜಗಕೆ ತೋರಿಸಿದವರು. ಅನುಭವ ಮಂಟಪದ ಸೃಷ್ಟಿಕರ್ತರು, ಶರಣು ಶರಣಾರ್ಥಿ ಎಂದರು. ಸಕಲ ಜೀವಾತ್ಮರಿಗೂ ಲೇಸಾಗಲೆಂದರು. ಮೂಢನಂಬಿಕೆ, ಪವಾಡ, ಕಂದಾಚಾರ, ಉಚ್ಛ , ನೀಚ, ನಿಯಮ ವಿರೋಧಿಸಿದ ಧೀಮಂತ ಧೀರರು. ಜಗದ ಪ್ರಥಮ ಪ್ರಧಾನ ಮಂತ್ರಿಗಳು, ಸರಳತೆಯ ಮಹಾನ್ ಬುದ್ಧಿವಂತ ವಚನ, ಸಾಹಿತ್ಯಜ್ಞರು, ಅರ್ಥಶಾಸ್ತ್ರಜ್ಞರು, ಉಣಲು ಕಲಿಸಿದವರು, ಉಡಲು ಕಲಿಸಿದವರು. ಪ್ರಾಮಾಣಿಕ ದುಡುಮೆಯೇ ನಾಡಿನ ಸಂಪತ್ ಅಭಿವೃದ್ಧಿ ಎಂದರು. ಗುರು ಲಿಂಗ ಜಂಗಮ ಷಟ್​ ಸ್ಥಲ ಅಷ್ಠಾವರಣ ಅನೇಕ ಪ್ರಥಮಗಳ ಜನಕರು, ಪ್ರಜಾಸತ್ತಾತ್ಮಕ ಲಿಂಗಾಯತ ಧರ್ಮ ಸಂಸ್ಥಾಪಕರೂ ಆದ ವಿಶ್ವಗುರು ಬಸವಣ್ಣನವರು’’ ಎಂದು ಆ ಸದೇಶದಲ್ಲಿದೆ.

ಇಲ್ಲಿ ಬಸವಣ್ಣನವರ ಬಗ್ಗೆ ಇರುವ ಸಾಲುಗಳ ಬಗ್ಗೆ ಯಾರ, ಯಾವ ಆಕ್ಷೇಪವೂ ಇಲ್ಲ. ಆದ್ರೆ, ರಾಮ, ಕೃಷ್ಣ ಮತ್ತಿತರ ದೇವರುಗಳ ಬಗ್ಗೆ ಮಾತನಾಡಿರೋದು ಅಕ್ಷಮ್ಯ.

ಹಿಂದೂ ದೇವರಗಳ ಬಗ್ಗೆ ತುಚ್ಛ ವಾಕ್ಯಗಳ ಮೆಸೇಜನ್ನು ಮುರುಗೇಶ್ ನಿರಾಣಿ ವಾಟ್ಸ್​ಆ್ಯಪ್​ ಗ್ರೂಪೊಂದರಲ್ಲಿ ಫಾರ್ವಡ್ ಮಾಡಿದ್ದಾರೆ. ಹೀಗೆ ಕಿಡಿ ಹತ್ತಿಸೋ ಸಂದೇಶ ಕಳುಹಿಸಿ, ಆಮೇಲೆ  ಕ್ಷಮಿಸಿ, “ಸರ್ ಒಂದು ಮೆಸೇಜ್ ತಪ್ಪಾಗಿ ಬಂದಿದೆ. ದಯವಿಟ್ಟು ಡಿಲೀಟ್ ಮಾಡಿ’’ ಅಂತ ಕೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

‘ಬಿಎಸ್ ವೈ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್’

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಯತ್ನಾಳ್ ಪಾಟೀಲ್ ಇಂದು ಮತ್ತೆ ವಿಧಾನಸೌಧದಲ್ಲಿ ಗುಡುಗಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ, ವಂಶಪಾರಂಪರ್ಯ ಆಡಳಿತ ಕೊನೆಯಾಗಬೇಕೇಂದು ಪ್ರಧಾನಿ ನರೇಂದ್ರ ಮೋದಿಯವರ ಕನಸು ಆಗಿದೆ. ಒಂದು ಕುಟುಂಬಕ್ಕೆ ಒಂದೇ...

ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ: ಡಿ.ಕೆ.ಶಿವಕುಮಾರ

ಬೆಂಗಳೂರು: ಪ್ರೀಡಂ ಪಾರ್ಕನ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಸಭೆ ಮುಗಿದ ಬಳಿಕ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ರೈತ ಪರವಾಗಿರುತ್ತೆ. ನಾವು ರೈತರ ಪರವಾಗಿ ಹೋರಾಟ ಮಾಡುತ್ತಿದ್ದೇವೆ....

‘ಪ್ರೀಡಂ ಪಾರ್ಕ್ ತಲುಪಿದ ಪ್ರತಿಭಟನೆ’

ಬೆಂಗಳೂರು: ಕೃಷಿ ವಿರೋಧಿ ಕಾಯ್ದೆಯ ಪ್ರತಿಭಟನೆ ಕಾವು ಕ್ಷಣ ಕ್ಷಣ್ಣಕ್ಕೂ ಹೆಚ್ಚಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ಬಿಸಿ ಹೆಚ್ಚುತ್ತಿದೆ. ಮೆಜೆಸ್ಟಿಕ್ ನಿಂದ ಫ್ರೀಡಂ ಪಾರ್ಕ್ ನತ್ತ...

ಹೆಣ್ಣು ಮಕ್ಕಳ ಶಿಕ್ಷಣ ಎಸ್.ಎಸ್.ಎಲ್.ಸಿಗೆ ಕೊನೆಯಾಗಬಾರದು : ಸುರೇಶ್ ಕುಮಾರ್

ಶಿವಮೊಗ್ಗ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.  ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಜೊತೆ ಇಂದು ನಗರದ ವಿವಿಧ ಸರ್ಕಾರಿ ಶಾಲೆಗಳಿಗೆ ರೌಂಡ್ಸ್ ಹಾಕಿದ ಸಚಿವ...

Recent Comments