Home ರಾಜ್ಯ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಿದ ನಿರಾಣಿ

ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಿದ ನಿರಾಣಿ

ಬೆಂಗಳೂರು :  ಧರ್ಮನಿಂದನೆ ವಾಟ್ಸ್​ಆ್ಯಪ್ ಮೆಸೇಜ್ ಫಾರ್ವಡ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಿದ್ದಾರೆ.

“ವಾಟ್ಸ್ಆ್ಯಪ್​ನಲ್ಲಿ ಮೆಸೇಜ್ ಫಾರ್ವಡ್ ಆದ ನಂಬರ್ ನನ್ನದೇ. ಆದ್ರೆ, ನಾನು ಸ್ವತಃ  ನಾನು ಫಾರ್ವಡ್ ಮಾಡಿಲ್ಲ. ಸಾರ್ವಜನಿಕ ಸಂಪರ್ಕಕ್ಕಾಗಿ ನನ್ನ ಗನ್​ಮ್ಯಾನ್ ಮತ್ತು ಪಿಎ ಈ ನಂಬರ್ ಉಪಯೋಗಿಸುತ್ತಿರ್ತಾರೆ. ನಿನ್ನೆ ರಾತ್ರಿ ಫೋನ್ ಪಿಎ ಬಳಿ ಫೋನ್ ಇತ್ತು. ಬೆಳಗ್ಗೆ ಎಲ್ಲಿಂದಲೋ ಬಂದ ಮೆಸೇಜ್​ ಅನ್ನು ಅವರು ಅಜಾಗರುಕತೆಯಿಂದ ಫಾರ್ವಡ್ ಮಾಡಿದ್ದಾರೆ. ಅದಕ್ಕೆ ಅವರು ಕ್ಷಮೆ ಕೇಳಿದ್ದಾರೆ. ತಪ್ಪು ಯಾರು ಮಾಡಿದರೂ ತಪ್ಪೆ. ಇದಕ್ಕಾಗಿ ನಾಡಿನ ಜನತೆಯಲ್ಲಿ ಕ್ಷಮೆಯಾಚಿಸ್ತೀನಿ. ನಾನು ಧರ್ಮಸಹಿಷ್ಣುವಾಗಿದ್ದು, ಧರ್ಮ, ನಂಬಿಕೆಗಳ ಬಗ್ಗೆ ಎಂದೂ ಹಗುರವಾಗಿ ಮಾತಾಡಿಲ್ಲ. ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸ್ತೀನಿ. ಸನಾತನ ಧರ್ಮದ ಬಗ್ಗೆಯಂತೂ ಅತ್ಯಂತ ಶ್ರದ್ಧೆ, ಭಕ್ತಿಯಿಂದ ನಡೆದುಕೊಳ್ಳುತ್ತೇನೆ. ಹಿಂದೂವಾಗಿ ನನ್ನ ಧರ್ಮದ ಬಗ್ಗೆ ಅಭಿಮಾನವಿದೆ’’ ಅಂತ  ಹೇಳಿದ್ದಾರೆ.

ರಾಮ, ಕೃಷ್ಣ ದೇವರೇ ಅಲ್ವಂತೆ..!  ಬಿಜೆಪಿ ನಾಯಕನಿಂದ  ಹಿಂದೂ ದೇವರ ಬಗ್ಗೆ ಅಪಸ್ವರ..!

LEAVE A REPLY

Please enter your comment!
Please enter your name here

- Advertisment -

Most Popular

ಕುಡಿದ ಮತ್ತಿನಲ್ಲಿ ಜಗಳ ಯುವಕರಿಬ್ಬರ ಮೇಲೆ ಮಾರಾಣಾಂತಿಕ ಹಲ್ಲೆ : ಓರ್ವ ಸಾವು

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಬೆಳೆದ ಮಾತಿಗೆ ಮಾತು, ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.  ನಗರದ ಎನ್.ಟಿ. ರಸ್ತೆಯ ಸುಂದರ ಆಶ್ರಯ ಪಕ್ಕದ ವಿಠಲ ದೇವಾಲಯದ ಬಳಿಯೇ ಈ ಘಟನೆ ನಡೆದಿದ್ದು, ಐದಾರು ಯುವಕರ ತಂಡ...

‘ಕಾಡಾನೆ ತುಳಿದು ಕೂಲಿ ಕಾರ್ಮಿಕ ಸಾವು’

ಹಾಸನ : ಕಾಡಾನೆ ತುಳಿದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಅರಕಲಗೂಡು ತಾಲೂಕಿನ ಹಾಸನ-ಕೊಡಗು ಗಡಿ ಭಾಗದ ಬಾಣಾವರ ಗೇಟ್ ನ ಬೆಟ್ಟಗಳಲೆ ಬಳಿ ತಡರಾತ್ರಿ ನಡೆದಿದೆ. ಅರಕಲಗೂಡು ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದ...

‘ಇಂದು ವಿಧಾನಮಂಡಲ ಕಲಾಪ ಆರಂಭ’

ಬೆಂಗಳೂರು: ಇಂದಿನಿಂದ ರಾಜ್ಯ ವಿಧಾನಮಂಡಲ ಕಲಾಪ ಆರಂಭವಾಗಲಿದ್ದು, ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ, ಇತ್ತೀಚಿನ ಖಾತೆ ಹಂಚಿಕೆ ಗೊಂದಲ, ವಿಧಾನಪರಿಷತ್ ನ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಸೇರಿದಂತೆ...

‘ಶಾಸಕ ಎಂ.ಸಿ. ಮನಗೂಳಿ ವಿಧಿವಶ’

ವಿಜಯಪುರ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವಿಜಯಪುರ ಜಿಲ್ಲೆ ಸಿಂಧಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ (85) ಅವರು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ತಡರಾತ್ರಿ 1 ಗಂಟೆಗೆ ನಿಧನರಾಗಿದ್ದಾರೆ. ಸಿಂಧಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್...

Recent Comments