Saturday, October 1, 2022
Powertv Logo
Homeರಾಜ್ಯಮಚ್ಚಿನಿಂದ ಕೊಚ್ಚಿ ಕೊಲೆ

ಮಚ್ಚಿನಿಂದ ಕೊಚ್ಚಿ ಕೊಲೆ

ಚನ್ನಪಟ್ಟಣ: ಇತ್ತೀಚೆಗೆ ಎಲ್ಲಿ ನೋಡಿದರೂ ಹೊಡಿ ಬಡಿ ಕಡಿ, ಕೊಚ್ಚು ಇಂತಹ ಸುದ್ದಿಗಳೇ ರಾರಾಜಿಸುತ್ತಿರುತ್ತವೆ. ಮೊದಲು ಕೊಲೆಗಳು ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ರೌಡಿಗಳಿಂದ ಮಾತ್ರ ನಡೆಯುತ್ತಿತ್ತು. ಆದರೆ ಈಗ ಕೊಲೆಯೆನ್ನುವುದು ಹಳ್ಳಿಗಳಲ್ಲೂ ಸಾಮಾನ್ಯವಾಗಿಬಿಟ್ಟಿದೆ.

ಇಂತಹುದೆ ಒಂದು ಕೃತ್ಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ನಡೆದಿದೆ. ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಮಹಿಳೆಯನ್ನ ಕೊಲೆ ಮಾಡಿದ ಘಟನೆ ಚನ್ನಪಟ್ಟಣ ತಾಲ್ಲೂಕಿನ ತೂಬಿನಕೆರೆಯಲ್ಲಿ ನಡೆದಿದೆ. 65 ವರ್ಷ ಪ್ರಾಯದ ಜಯಮ್ಮ ಹಾಗೂ ಆಕೆಯ ಮಗ ಸಿದ್ದರಾಜು ಮೇಲೆ ಓರ್ವ ಅಪರಿಚಿತ ವ್ಯಕ್ತಿ ಹಲ್ಲೆ ನಡೆಸಿದ್ದು, ಜಯಮ್ಮ ಸಾವನ್ನಪ್ಪಿದ್ದಾರೆ. ಇನ್ನು ಸಿದ್ದರಾಜು ಸಾವು ಬದುಕಿನ ನಡುವೆ ಹೋರಾಡ್ತಿದ್ದಾರೆ. ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments