Home ಕ್ರೀಡೆ P.Cricket ಕಾಲಲ್ಲಿ ರಕ್ತ ಚಿಮ್ಮುತ್ತಿದ್ರು ಚೆನ್ನೈ ಗೆಲುವಿಗೆ ಹೋರಾಡಿದ ವ್ಯಾಟ್ಸನ್​..!

ಕಾಲಲ್ಲಿ ರಕ್ತ ಚಿಮ್ಮುತ್ತಿದ್ರು ಚೆನ್ನೈ ಗೆಲುವಿಗೆ ಹೋರಾಡಿದ ವ್ಯಾಟ್ಸನ್​..!

12ನೇ ಆವೃತ್ತಿಯ ಐಪಿಎಲ್ ಮುಕ್ತಾಯವಾಗಿ ಎರಡು ದಿನಗಳಾಗಿವೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್​ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು ಇತಿಹಾಸ.
ಹೈದರಾಬಾದ್ ನಲ್ಲಿ ಕಳೆದ ಭಾನುವಾರ ನಡೆದ ಫೈನಲ್ ಮ್ಯಾಚ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 149ರನ್​ ಬಾರಿಸಿತ್ತು. 150ರನ್​ಗಳ ಗುರಿಯನ್ನು ಬೆನ್ನತ್ತಿದ ಚೆನ್ನೈ ಬ್ಯಾಟ್ಸ್​ಮನ್​ಗಳು ಮುಂಬೈ ದಾಳಿಗೆ ಪರದಾಡಿದರು. ಆದರೆ, ಶೇನ್ ವ್ಯಾಟ್ಸನ್​ ಮಾತ್ರ ಏಕಾಂಗಿ ಹೋರಾಟ ನಡೆಸಿ ಗೆಲುವಿನ ಸನಿಹ ತಂಡವನ್ನು ಕೊಂಡೊಯ್ದಿದ್ದರು. ಅಂತಿಮ ಕ್ಷಣದಲ್ಲಿ ವ್ಯಾಟ್ಸನ್​ ಔಟಾಗುವುದರೊಂದಿಗೆ ಚೆನ್ನೈ ಗೆಲುವಿನ ಅವಕಾಶವೂ ತಪ್ಪಿತು. ಅಕಸ್ಮಾತ್ ವ್ಯಾಟ್ಸನ್​ ಇದ್ದಿದ್ದರೆ ಕಥೆಯೇ ಬೇರೆ ಇತ್ತು.
ಅದೇನೇ ಇರಲಿ ಈಗ ಮ್ಯಾಚ್​ ಮುಗಿದಿದೆ. ಐಪಿಎಲ್​ ಹಬ್ಬ ಮುಗಿದಿದ್ದು ಇನ್ನು ವರ್ಲ್​ಕಪ್ ಸಂಭ್ರಮ. ಹೀಗಿರುವಾಗ ಮತ್ತೆ ಐಪಿಎಲ್​ ಅನ್ನು ನೆನಪಿಸಿಕೊಳ್ಳೋಕೆ ಕಾರಣ ವ್ಯಾಟ್ಸನ್​ ಮೆರೆದ ಕ್ರೀಡಾ ಬದ್ಧತೆ..!
ಹೌದು, ಶೇನ್ ವ್ಯಾಟ್ಸನ್ ಅವರು ಕ್ರೀಡಾ ಬದ್ಧತೆ ಮೆರೆದಿದ್ದಾರೆ. ಗುರಿ ಬೆನ್ನತ್ತಿದ ಚೆನ್ನೈ ಪರ ಏಕಾಂಗಿ ಹೋರಾಟ ನಡೆಸಿದ್ದ ವ್ಯಾಟ್ಸನ್ 80ರನ್ ಮಾಡಿ ಪೆವಿಲಿಯನ್ ಸೇರಿದ್ರು. ಆದರೆ, ಅದು ಅವರು ಆರಾಮಾಗಿದ್ದು ನಡೆಸಿದ ಹೋರಾಟವಲ್ಲ..! ಆಡುತ್ತಿರುವಾಗ ಗಾಯಗೊಂಡಿದ್ರು..! ಅವರ ಎಡಗಾಲಲ್ಲಿ ರಕ್ತ ಚಿಮ್ಮುತ್ತಿತ್ತು. ಆದರೆ ಆ ನೋವನ್ನು ಸಹಿಸಿಕೊಂಡು, ಯಾರಿಗೂ ಗೊತ್ತಾಗದಂತೆ ಬ್ಯಾಟ್​ ಬೀಸಿದ್ರು ವ್ಯಾಟ್ಸನ್. ವ್ಯಾಟ್ಸನ್ ಅವರ ಕಾಲಲ್ಲಿ ರಕ್ತ ಚಿಮ್ಮುತ್ತಿರೋ ವಿಡಿಯೋ ಈಗ ವೈರಲ್ ಆಗಿದೆ. ಅಂದು ಮ್ಯಾಚ್​ ನೋಡುವಾಗ ಯಾರೊಬ್ಬರೂ ಅವರ ಕಾಲನ್ನು ಗಮನಿಸಿರಲಿಲ್ಲ.!
ಮ್ಯಾಚ್​ ಮುಗಿದು 20 ಗಂಟೆಗಳ ಬಳಿಕ ಸ್ಟಾರ್ ಬೌಲರ್ ಹರ್ಭಜನ್ ಸಿಂಗ್ ಶೇನ್ ವ್ಯಾಟ್ಸನ್​ ಫೋಟೋ ಹಾಕಿ ಕಾಲಿನಿಂದ ಸುರಿಯುತ್ತಿದ್ದ ರಕ್ತವನ್ನು ನೋಡಿದ್ದೀರಾ? ಮ್ಯಾಚ್​ ಮುಗಿದ ಬಳಿಕ ಆ ಗಾಯಕ್ಕೆ 6 ಹೊಲಿಗೆಗಳು ಬಿದ್ದಿವೆ. ರನ್ ಔಟ್​ ಆಗೋದನ್ನು ತಪ್ಪಿಸಿಕೊಳ್ಳಲು ಡೈವ್ ಹೊಡೆದಾಗ ಕಾಲಿಗೆ ಇಂಥಾ ಗಾಯವಾಗಿದ್ರೂ ಅದನ್ನು ಮರೆಮಾಚಿ ವ್ಯಾಟ್ಸನ್ ಆಟ ಮುಂದುವರೆಸಿದ್ದರು ಅಂತ ಭಜ್ಜಿ ಪೋಸ್ಟ್ ಮಾಡಿದ್ದಾರೆ. ವ್ಯಾಟ್ಸನ್​ ಕ್ರೀಡಾ ಸ್ಫೂರ್ತಿ, ಬದ್ಧತೆ ಎಲ್ಲಾ ಕಡೆ ಮೆಚ್ಚುಗೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments