Home ರಾಜ್ಯ 'ಜಿಲ್ಲೆಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ ಜಿಲ್ಲಾಡಳಿತ'..!

‘ಜಿಲ್ಲೆಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ ಜಿಲ್ಲಾಡಳಿತ’..!

ಚಿಕ್ಕಮಗಳೂರು: ಡಿಸೆಂಬರ್ ಲಾಸ್ಟ್ ವೀಕ್‍ನಲ್ಲೇ ಚಿಕ್ಕಮಗಳೂರಿಗೆ ಹೋಗಿ ವಾರ ಅಲ್ಲೇ ಇದ್ದು ಹೊಸ ವರ್ಷಕ್ಕೆ ಸ್ವಾಗತ ಕೋರಿ ಜನವರಿ 1 ಅಥವಾ 2 ಕ್ಕೆ ವಾಪಸ್ ಬರೋಣ ಅನ್ನೋ ಪ್ಲಾನ್ ಇದ್ದರೆ ನಿಮ್ಮ ಪ್ಲಾನನ್ನ ಡಿಸೆಂಬರ್ 30 ಕ್ಕೆ ಬದಲಿಸಿಕೊಳ್ಳಿ. ಬಂದು ಮತ್ತೆ ವಾಪಸ್ ಹೋಗೋದು ಬೇಡ. ಯಾಕೆಂದರೆ, ಇದೇ ತಿಂಗಳ 25ನೇ ತಾರೀಖಿನಿಂದ 30ನೇ ತಾರೀಖಿನವರಗೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗದ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ಬಗಾಧಿ ಗೌತಮ್ ಆದೇಶ ಹೊರಡಿಸಿದ್ದಾರೆ. ಇದೇ ತಿಂಗಳ 19ನೇ ತಾರೀಖಿನಿಂದ ದತ್ತಜಯಂತಿ ಆರಂಭವಾಗಿದ್ದು, 29ನೇ ತಾರೀಖಿನಿವರೆಗೂ ಇರುತ್ತೆ. ಈಗಾಗಲೇ ದತ್ತ ಭಕ್ತರು ಮಾಲೆ ಧರಿಸಿ ವೃತ್ತದಲ್ಲಿದ್ದಾರೆ.

ವೃತದಲ್ಲಿರೋ ಭಕ್ತರು ಡಿಸೆಂಬರ್ 27 ರಂದು ಅನಸೂಯ ಜಯಂತಿ, 28 ರಂದು ನಗರದಲ್ಲಿ ಸಾಂಕೇತಿಕ ಶೋಭಾಯಾತ್ರೆ ಹಾಗೂ 29ರಂದು ದತ್ತಪೀಠದಲ್ಲಿ ಪೂಜೆ ನಡೆಸಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಈ ಮೂರು ದಿನಗಳ ಕಾಲ ಕೂಡ ದತ್ತಪೀಠದಲ್ಲಿ ಪೂಜೆ ನಡೆಯಲಿದೆ. ಜೊತೆಗೆ, ರಾಜ್ಯಾದ್ಯಂತ ಮಾಲೆ ಧರಿಸಿರೋ ಭಕ್ತರು ಕೂಡ ಅಂದು ದತ್ತಪೀಠಕ್ಕೆ ಬಂದು ಪೂಜೆ ಸಲ್ಲಿಸಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಹಾಗಾಗಿ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಹೊನ್ನಮ್ಮನ ಹಳ್ಳ ಹಾಗೂ ಮಾಣಿಕ್ಯಧಾರ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ. ಡಿಸೆಂಬರ್ 25 ಸಂಜೆ ಆರು ಗಂಟೆಯಿಂದ ಡಿಸೆಂಬರ್ 30ರ ಬೆಳಗ್ಗೆ ಆರು ಗಂಟೆಯವರೆಗೆ ಪ್ರವಾಸಿಗರಿಗೆ ಮುಳ್ಳಯ್ಯನಗಿರಿ ಭಾಗದ ಟೂರಿಸ್ಟ್ ಪ್ಲೇಸ್‍ಗಳಿಗೆ ನಿಷೇಧ ಹೇರಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಬೆಂಗಳೂರಿನಲ್ಲಿ ಸಿಡಿದೆದ್ದ ಅನ್ನದಾತರು..!

ಬೆಂಗಳೂರು: ಬೆಂಗಳೂರಿನಲ್ಲಿ ಸಿಡಿದೆದ್ದ ಅನ್ನದಾತರು. ಬೆಂಗಳೂರಿನ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರೈತರು ಪ್ರತಿಭಟನೆ ಆಗಮಿಸುವ ಹಿನ್ನಲೆಯಲ್ಲಿ ಪೊಲೀಸರು ಹೆಬ್ಬಾಳದ ಮುಖ್ಯ ರಸ್ತೆಗೆ ಬ್ಯಾರಿಕೆಡ್ ಗಳನ್ನು ಹಾಕಿ ತಡೆಹಿಡೆಯಲಾಗಿದೆ. 50ಕ್ಕೂ ಹೆಚ್ಚು ಕಾರು...

‘ರಾಷ್ಟ್ರಗೀತೆ ಹಾಡುವ ಮೂಲಕ ಪ್ರತಿಭಟನೆಗೆ ಚಾಲನೆ’

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೈತರ ಬೃಹತ್ ಪ್ರತಿಭಟನಾ ರ್ಯಾಲಿ ಆರಂಭವಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ರೈತರು ಆಗಮಿಸಿದ್ದಾರೆ. ನಗರದ ಆರು ದಿಕ್ಕೂಗಳಿಂದ ರೈತರು ಬರುತ್ತಿದ್ದಾರೆ. ರಾಷ್ಟ್ರಗೀತೆ ಹಾಡುವ ಮೂಲಕ ರ್ಯಾಲಿಗೆ ಚಾಲನೆ...

‘ದೆಹಲಿಯಲ್ಲಿ ರೈತರ ಮೇಲೆ ಲಾಠಿ ಚಾರ್ಜ್’

ದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯ ಸಿಂಘು, ಟಿಕ್ರಿ ಗಡಿಯಲ್ಲಿ ಬ್ಯಾರಿಕೇಡ್ ಮುರಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ದೆಹಲಿಯಲ್ಲಿ ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ.   ರೈತರು...

ರಾಜಧಾನಿಯಲ್ಲಿ ಟ್ಯ್ರಾಕ್ಟರ್ ರ್ಯಾಲಿ..!

ಬೆಂಗಳೂರು: ರೈತರ ಮೂರು ಕೃಷಿ ಕಾಯ್ದೆ ವಿರೋಧಿಸಿ ಇಂದು ಬೆಂಗಳೂರಿನಲ್ಲಿ ಬೃಹತ್ ಮಟ್ಟದ ಟ್ಯ್ರಾಕ್ಟರ್ ಪರೇಡ್ ನಡೆಸುತ್ತಿದ್ದಾರೆ. ಎಲ್ಲ ಜಿಲ್ಲೆಗಳಿಂದಲೂ ರೈತರು ರಾಜಧಾನಿಗೆ ಟ್ಯ್ರಾಕ್ಟರ್ ನಲ್ಲಿ ಆಗಮಿಸುತ್ತಿದ್ದಾರೆ. ಇಂದು ನೈಸ್ ರಸ್ತೆ ಬಳಿಯ ಇರುವ...

Recent Comments