ಸರ್ಕಾರದ ದುಸ್ಥಿತಿಗೆ ಕುಮಾರಸ್ವಾಮಿಯೇ ಕಾರಣ : ಎಂಟಿಬಿ

0
112

ಬೆಂಗಳೂರು : ಮೈತ್ರಿ ಸರ್ಕಾರದ ದುಸ್ಥಿತಿಗೆ ಸಿಎಂ ಕುಮಾರಸ್ವಾಮಿ ಮತ್ತು ರೇವಣ್ಣನವರೇ ಕಾರಣ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್  ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವ್ರು, ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಸರ್ವಾಧಿಕಾರಿ ಧೋರಣೆ ನಡೆಸುತ್ತಿದೆ. ಜೆಡಿಎಸ್​ನವರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಕಾಂಗ್ರೆಸ್ ಶಾಸಕರಿಗೆ ಅನುದಾನವನ್ನೂ ನೀಡುತ್ತಿಲ್ಲ. ಜೆಡಿಎಸ್​ ಮುಖಂಡರಿಗೆ ಇಷ್ಟಬಂದಂತೆ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಅತೃಪ್ತ ಶಾಸಕರ ಪರ ಬ್ಯಾಟ್​ ಬೀಸಿದ ಎಂಟಿಬಿ ನಾಗರಾಜ್​ ಕುಮಾರಸ್ವಾಮಿ ಆಡಳಿತದಿಂದ ಬೇಸತ್ತು ಅತೃಪ್ತರು ಮುಂಬೈಗೆ ಹೋಗಿದ್ದಾರೆ. ಅವರು ದುಡ್ಡಿಗಾಗಿ ಹೋದವರಲ್ಲ, ಅವರ ಬಳಿ ಹಣವಿದೆ ಎಂದಿದ್ದಾರೆ. 

LEAVE A REPLY

Please enter your comment!
Please enter your name here