Home ರಾಜ್ಯ ಫೆರಾರಿ ಒಡೆಯನಾದ ಎಂಟಿಬಿ ನಾಗರಾಜ್..!

ಫೆರಾರಿ ಒಡೆಯನಾದ ಎಂಟಿಬಿ ನಾಗರಾಜ್..!

ದೇವನಹಳ್ಳಿ : ಮಾಜಿ ಸಚಿವ ಎಂಟಿಬಿ ನಾಗರಾಜ್ ಇತ್ತೀಚಿಗೆ ಅತ್ಯಂತ ದುಬಾರಿ 12 ಕೋಟಿ ಮೌಲ್ಯದ ರೋಲ್ಸ್ ರಾಜ್ ಕಾರು ಖರೀದಿ ಮಾಡಿ ಸುದ್ದಿ ಆಗಿದ್ದರು. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಆ ಕಾರನ್ನು ಖರೀದಿ ಮಾಡಿದ್ದರು.  ದೇಶದಲ್ಲಿ ರೋಲ್ಸ್ ರಾಯ್ ಕಾರು ಹೊಂದಿರುವ ಬೆರಳೆಣಿಯಷ್ಟು ಮಂದಿಯಲ್ಲಿ ಎಂಟಿಬಿ ನಾಗರಾಜ್ ಸಹ ಒಬ್ಬರು. ಇದೀಗ ಮತ್ತೊಂದು ದುಬಾರಿ ಕಾರನ್ನು ಎಂಟಿಬಿ ನಾಗರಾಜ್ ಕುಟುಂಬ ಖರೀದಿ ಮಾಡಿದೆ. 

ಬರೋಬ್ಬರಿ 6 ಕೋಟಿಯ ಮೌಲ್ಯದ ಫೆರಾರಿ ಕಾರನ್ನು ಖರೀದಿ ಮಾಡಿದ್ದಾರೆ. ರೋಲ್ಸ್ ರಾಯ್ ಮತ್ತು ಫೆರಾರಿ ಜೊತೆಗೆ ಇನ್ನೂ 10 ಕ್ಕೂ ಅಧಿಕ ಬೆಲೆ ಬಾಳುವ ಕಾರುಗಳನ್ನು ಎಂಟಿಬಿ ನಾಗರಾಜ್ ಕುಟುಂಬ ಹೊಂದಿದೆ.

 ಎಂಟಿಬಿ ನಾಗರಾಜ್ ಅವರ ಕುಟುಂಬ ಖರೀದಿ ಮಾಡಿರುವ ನೂತನ ಫೆರಾರಿ ಕಾರಿನ ಜೊತೆ ಕುಟುಂಬ ತೆಗೆಸಿಕೊಂಡಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾಗಿ , ಮಾಜಿ ಸಚಿವರಾಗಿ ಸದ್ಯಕ್ಕೆ ಎಂಎಲ್ಸಿ ಆಗಿದ್ದಾರೆ ಎಂಟಿಬಿ. 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments