Friday, September 30, 2022
Powertv Logo
Homeವಿದೇಶ`ವಿಶ್ವ ವಿಜೇತ'ಧೋನಿ ಎಂಟ್ರಿಗೆ 15 ವರ್ಷ!

`ವಿಶ್ವ ವಿಜೇತ’ಧೋನಿ ಎಂಟ್ರಿಗೆ 15 ವರ್ಷ!

ಮಹೇಂದ್ರ ಸಿಂಗ್ ಧೋನಿ.. ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್​..ವರ್ಲ್ಡ್​​ ಕ್ರಿಕೆಟ್ ಕಂಡ ಅದ್ಭುತ ಕ್ರಿಕೆಟಿಗ.. ಕ್ರಿಕೆಟ್​ ಲೋಕವೇ ಮೆಚ್ಚಿದ ಕ್ಯಾಪ್ಟನ್! ಬಹುಶಃ ಧೋನಿ ಎಂಬ ಶಕ್ತಿಯ ಯಶಸ್ಸಿನ ಹಿಂದಿರೋದು ಅವರ ತಾಳ್ಮೆ.. ಅದೆಂಥಾ ಪರಿಸ್ಥತಿಯನ್ನೂ ಕೂಲ್ ಆಗಿಯೇ ನಿಭಾಯಿಸುವ ಜಾಣ್ಮೆ, ಚಾಕಚಕ್ಯತೆ!
ಭಾರತಕ್ಕೆ ಎರಡು ವರ್ಲ್ಡ್​ಕಪ್ ತಂದುಕೊಟ್ಟ ಅಪ್ರತಿಮ ನಾಯಕ ಧೋನಿ ಟೀಮ್ ಇಂಡಿಯಾ ಪರ ಕಣಕ್ಕಿಳಿದು, ಇಂಟರ್​ನ್ಯಾಷನಲ್​ ಕ್ರಿಕೆಟ್​ಗೆ ಎಂಟ್ರಿಕೊಟ್ಟು 15 ವರ್ಷ.
ಅದು ಇಂದಿನ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಟೀಮ್ ಇಂಡಿಯಾದ ಕ್ಯಾಪ್ಟನ್​ ಆಗಿದ್ದ ದಿನಗಳು. ಭಾರತೀಯ ಕ್ರಿಕೆಟಿನ ಸುವರ್ಣಕಾಲವದು. ಆ ದಿನಗಳಲ್ಲಿ ಉದಯಿಸಿದ ಕ್ರಿಕೆಟಿಗರಲ್ಲಿ ಧೋನಿ ಕೂಡ ಒಬ್ಬರು. 2004 ಡಿಸೆಂಬರ್ 23ರಂದು ಬಾಂಗ್ಲಾ ದೇಶದ ವಿರುದ್ಧದ ಮ್ಯಾಚ್ ಮೂಲಕ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಡ್ತಾರೆ. ಚೊಚ್ಚಲ ಮ್ಯಾಚಲ್ಲಿ ಧೋನಿ ಸಾಧನೆ ಶೂನ್ಯ!
ಆದರೆ, 2005ರ ಏಪ್ರಿಲ್​ನಲ್ಲಿ ಪಾಕಿಸ್ತಾನ್​ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ ಮ್ಯಾಚ್​ನಲ್ಲಿ ಗಂಗೂಲಿ ಧೋನಿಯನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಸಿದ್ರು. ನಾಯಕನ ನಿರ್ಧಾರ ಸಮರ್ಥಿಸಿಕೊಂಡ ಮಾಹಿ 123 ಬಾಲ್​ಗಳಲ್ಲಿ 148ರನ್ ಬಾರಿಸಿದ್ರು. ಅವರ ಅಬ್ಬರಕ್ಕೆ ಪಾಕ್ ಬೌಲರ್​ಗಳು ನಡುಗಿ ಹೋಗಿದ್ರು. ಅಲ್ಲಿಂದ ಧೋನಿ ಹಿಂತಿರುಗಿ ನೋಡಿಲ್ಲ.
ಕೇವಲ 48 ಮ್ಯಾಚ್​ಗಳಲ್ಲಿ ಐಸಿಸಿ ಒಡಿಐ ರ್ಯಾಂಕಿಂಗ್​ನಲ್ಲಿ ಇದೇ ಧೋನಿ ನಂಬರ್ 1 ಪಟ್ಟ ಅಲಂಕರಿಸಿದ್ರು! ಅತೀ ಕಡಿಮೆ ಮ್ಯಾಚ್​​ ಗಳಲ್ಲಿ ಐಸಿಸಿ ರ್ಯಾಂಕಿಂಗ್​​​ನಲ್ಲಿ ಅಗ್ರಸ್ಥಾನಕ್ಕೇರಿದ ಹಿರಿಮೆಗೆ ಪಾತ್ರರಾಗಿದ್ರು. ಮುಂದೆ ಧೋನಿ ಸೃಷ್ಟಿಸಿದ್ದೆಲ್ಲಾ ಅಳಿಸಲಾಗದ ಚರಿತ್ರೆ!
ಕನ್ನಡಿಗ ರಾಹುಲ್ ದ್ರಾವಿಡ್ ನಂತರ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದ ಧೋನಿ 2007ರ ಟಿ20 ವರ್ಲ್ಡ್​ಕಪ್, 2011ರ ಒಡಿಐ ವರ್ಲ್ಡ್​​ಕಪ್​​ ಗೆಲ್ಲಿಸಿಕೊಟ್ರು. ಅಲ್ಲದೆ 2013ರಲ್ಲಿ ಇದೇ ಧೋನಿ ಕ್ಯಾಪ್ಟೆನ್ಸಿಯಲ್ಲಿ ಭಾರತ ಚಾಂಪಿಯನ್ಸ್​​ ಟ್ರೋಫಿ ಗೆದ್ದು ಬೀಗಿತು. ಹೀಗೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಭಾರತದ ಏಕೈಕ ಕ್ಯಾಪ್ಟನ್ ಧೋನಿ.
2019ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ವರ್ಲ್ಡ್​ಕಪ್ ಬಳಿಕ ಸದ್ಯ ವಿರಾಮದಲ್ಲಿರುವ ಧೋನಿ ಮುಂಬರುವ ಟಿ20 ವರ್ಲ್ಡ್​ಕಪ್​ನಲ್ಲಿ ಕಣಕ್ಕಿಳಿಯಬೇಕು ಅನ್ನೋದು ಕೋಟಿ ಕೋಟಿ ಅಭಿಮಾನಿಗಳ ಆಸೆ.

9 COMMENTS

  1. hi!,I really like your writing so a lot! proportion we communicate more approximately your post on AOL? I need an expert in this house to unravel my problem. Maybe that is you! Looking forward to peer you.

LEAVE A REPLY

Please enter your comment!
Please enter your name here

- Advertisment -

Most Popular

Recent Comments