ಮಹೇಂದ್ರ ಸಿಂಗ್ ಧೋನಿ ಏಕದಿನ ತಂಡಕ್ಕೆ ಕ್ಯಾಪ್ಟನ್.. ಟೆಸ್ಟ್ಗೆ ವಿರಾಟ್ ಕೊಹ್ಲಿ ನಾಯಕ! ಅರೆ ಏನಿದು ಮೂರು ಮಾದರಿಯ ಟೀಮ್ಗೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್ ಅಲ್ವಾ? ಧೋನಿ ಈಗಾಗಲೇ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರಲ್ಲಾ? ಮತ್ತೆ ವಾಪಸ್ ತಂಡದ ಚುಕ್ಕಾಣಿ ಹಿಡಿದ್ರಾ ಅಂತ ಕೇಳ್ತಿದ್ದೀರಾ? ನಾವ್ ಹೇಳ್ತಿರೋದು ಟೀಮ್ ಇಂಡಿಯಾ ಕಥೆಯಲ್ಲ… ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ದಶಕದ ಏಕದಿನ ತಂಡದ ಸುದ್ದಿ.
ಹೌದು, ಭಾರತಕ್ಕೆ ಎರಡು ವರ್ಲ್ಡ್ಕಪ್ ತಂದು ಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿರೋ ದಶಕದ ಏಕದಿನ ತಂಡದ ನಾಯಕರಾಗಿದ್ದಾರೆ. ಟೆಸ್ಟ್ ತಂಡದ ನಾಯಕನನ್ನಾಗಿ ಟೀಮ್ ಇಂಡಿಯಾ ಹಾಲಿ ಕ್ಯಾಪ್ಟನ್ ಕೊಹ್ಲಿ ಆಯ್ಕೆಯಾಗಿದ್ದಾರೆ. ಅಂತೆಯೇ ಹಿಟ್ ಮ್ಯಾನ್ ರೋಹಿತ್ ಶರ್ಮಾ ತಂಡದಲ್ಲಿ ಸ್ಥಾನಪಡೆದಿದ್ದಾರೆ.
ಧೋನಿ ನಾಯಕತ್ವದ ಕ್ರಿಕೆಟ್ ಆಸ್ಟ್ರೇಲಿಯಾ ದಶಕದ ತಂಡದಲ್ಲಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾಶಿಮ್ ಆಮ್ಲಾ, ಎ.ಬಿ ಡಿವಿಲಿಯರ್ಸ್, ಶಕೀಬ್ ಅಲ್ ಹಸನ್, ಜೋಸ್ ಬಟ್ಲರ್, ಮಿಶ್ಚೆಲ್ ಸ್ಟಾರ್ಕ್, ಟ್ರೆಂಟ್ ಬೋಲ್ಟ್, ಲಸಿತ್ ಮಲಿಂಗ, ರಶೀದ್ ಖಾನ್ ಇದ್ದಾರೆ.
ಅಂತೆಯೇ ವಿರಾಟ್ ಕೊಹ್ಲಿ ನೇತೃತ್ವದ ಕ್ರಿಕೆಟ್ ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಆ್ಯಲಿಸ್ಟರ್ ಕುಕ್, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ಎಬಿ ಡಿವಿಲಿಯರ್ಸ್, ಬೆನ್ ಸ್ಟೋಕ್ಸ್, ಡೇಲ್ ಸ್ಟೈನ್, ಬ್ರಾಡ್ ನಾಥನ್ ಲೈಯನ್, ಜೇಮ್ಸ್ ಆ್ಯಂಡರ್ಸನ್ ಇದ್ದಾರೆ.
ಒಡಿಐಗೆ ಧೋನಿ, ಟೆಸ್ಟ್ಗೆ ಕೊಹ್ಲಿ ಕ್ಯಾಪ್ಟನ್..!
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on