ಧೋನಿ ಬೆಂಬಲಕ್ಕೆ ಬಿಸಿಸಿಐ, ಸ್ಟಾರ್ ಆಟಗಾರರು..!

0
167

ಬಲಿದಾನದ ಗ್ಲೌಸ್​ ತೊಟ್ಟು ಕೀಪಿಂಗ್ ಮಾಡಿದ ಮಹೇಂದ್ರ ಸಿಂಗ್ ಧೋನಿ ಬೆಂಬಲಕ್ಕೆ ಬಿಸಿಸಿಐ ಮತ್ತು ದೇಶದ ಸ್ಟಾರ್ ಆಟಗಾರರು ಬೆಂಬಲ ನೀಡಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಧೋನಿ ಕಠಾರಿ ಮುದ್ರೆ ಬಲಿದಾನದ ಪಟ್ಟಿಯನ್ನು ಹೊಂದಿರುವ ಗ್ಲೌಸ್​ ಹಾಕಿ ಕೀಪಿಂಗ್ ಮಾಡಿದ್ದರು. ಧೋನಿ ನಿಲುವಿಗೆ ಅಸಮಧಾನ ವ್ಯಕ್ತಪಡಿಸಿದ್ದ ಐಸಿಸಿ ಬಲಿದಾನದ ಬ್ಯಾಡ್ಜ್​​​​ ತೆಗೆದಿಡುವಂತೆ ಸೂಚನೆ ನೀಡಿತ್ತು. ಇದೀಗ ಬಿಸಿಸಿಐ ಧೋನಿ ಬೆಂಬಲಕ್ಕೆ ನಿಂತಿದ್ದು, ವಿಶ್ವಕಪ್​ನಲ್ಲಿ ಧೋನಿ ಬಲಿದಾನ ಗ್ಲೌಸ್​ ತೊಟ್ಟು ಆಡಲು ಅನುಮತಿನ ನೀಡುವಂತೆ ಮನವಿ ಮಾಡಿದ್ದು, ಐಸಿಸಿ ಮನವಿ ಪರಿಶೀಲಿಸುವ ಭರವಸೆ ನೀಡಿದೆ.
ಇನ್ನು ಭಾರತೀಯ ಕ್ರೀಡಾಪಟುಗಳು ಕೂಡ ಧೋನಿ ಬೆಂಬಲಕ್ಕೆ ನಿಂತಿದ್ದಾರೆ. ಕುಸ್ತಿಪಟು ಸುಶೀಲ್ ಕುಮಾರ್, ಅಥ್ಲೀಟ್​ ಮಿಲ್ಕಾಸಿಂಗ್‌ ಬೆಂಬಲ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here