ಧೋನಿಗೆ ರಕ್ಷಣೆ ನೀಡೋದೇ ಬೇಕಿಲ್ಲ ಅಂದ್ರು ಸೇನಾ ಮುಖ್ಯಸ್ಥ..!

0
578

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರೋದು ಎಲ್ರಿಗೂ ಗೊತ್ತಿರೋ ವಿಷ್ಯವೇ. ಈಗ ಅವರು ಕಾಶ್ಮೀರದಲ್ಲಿ ಕೆಲ ದಿನಗಳ ಕಾಲ ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ರೆಡಿಯಾಗಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ದೂರ ಉಳಿದಿರೋ ಮಾಹಿ ದೇಶ ಸೇವೆಗೆ ಸನ್ನದ್ಧರಾಗಿದ್ದಾರೆ.
15 ದಿನಗಳ ಕಾಲ ಮಾಹಿ ಸೇನೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಭಾರತೀಯ ಸೇನಾ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​, ”ಧೋನಿಗೆ ರಕ್ಷಣೆ ನೀಡೋ ಬಗ್ಗೆ ಸೈನ್ಯ ಚಿಂತಿಸಬೇಕಾಗಿಲ್ಲ. ತಮ್ಮ ತರಬೇತಿ ಬಳಿಕ ಅವರೇ ದೇಶದ ನಾಗರಿಕರನ್ನು ರಕ್ಷಿಸಲಿದ್ದಾರೆ” ಅಂತ ಹೇಳಿದ್ದಾರೆ.
ಧೋನಿ ಪ್ಯಾರಾಚೂಟ್​ ರೆಜಿಮೆಂಟ್​ನ 106 ಪ್ಯಾರಾ ಟೆರಟೋರಿಯಲ್ ಬೆಟಾಲಿಯನ್​ನಲ್ಲಿ ಕಾರ್ಯ ನಿರ್ವಹಿಸ್ತಿದ್ದಾರೆ.

LEAVE A REPLY

Please enter your comment!
Please enter your name here