Home ರಾಜ್ಯ ಬೆಂಗಳೂರು ಸಿಎಂ ತವರು ಜಿಲ್ಲೆಯಲ್ಲಿ ಎಂಪಿಎಂ ಅರಣ್ಯ ನೌಕರರ ಗೋಳು ಕೇಳೋರು ಯಾರು....?

ಸಿಎಂ ತವರು ಜಿಲ್ಲೆಯಲ್ಲಿ ಎಂಪಿಎಂ ಅರಣ್ಯ ನೌಕರರ ಗೋಳು ಕೇಳೋರು ಯಾರು….?

ಶಿವಮೊಗ್ಗ: ಸಿ.ಎಂ. ತವರು ಜಿಲ್ಲೆಯ ಭದ್ರಾವತಿ ತಾಲೂಕಿನ ಜನರ ಎರಡು ಕಣ್ಣುಗಳಲ್ಲಿ ಒಂದಾಗಿರುವ ಎಂಪಿಎಂ ಕಾರ್ಖಾನೆ ಸಮಸ್ಯೆ ಮುಗಿಯುವ ಲಕ್ಷಣ ಕಾಣ್ತಿಲ್ಲ. ಈಗಾಗಲೇ ಎಂ.ಪಿ.ಎಂ. ಕಾಗದ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿದ್ದು, ಕೇಂದ್ರ ಸರ್ಕಾರ ಇದನ್ನ ಈಗಾಗಲೇ, ಮಾರಾಟ ಮಾಡಲು ರೆಡಿಯಾಗಿದೆ. ಈ ನಡುವೆ ಕಳೆದ 35 ವರ್ಷಗಳಿಂದ ಕಾರ್ಖಾನೆಗಾಗಿ ದುಡಿಯುತ್ತಿರುವ ಅರಣ್ಯ ದಿನಗೂಲಿ ನೌಕರರ ಗೋಳು ಹೇಳತೀರದಾಗಿದೆ. ಕಾರ್ಖಾನೆ ಮುಚ್ಚುವ ಹಂತ ತಲುಪಿದೆ. ಈಗಲಾದರೂ ನಮಗೆ ನ್ಯಾಯ ಕೊಡ್ಸಿ ಅಂತಿದ್ದಾರೆ.

ಕಳೆದ ಹಲವು ದಶಕಗಳಿಂದ ಕಾರ್ಖಾನೆ ನಷ್ಟ ಮತ್ತು ಮುಚ್ಚುವ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಈ ಕಾರ್ಖಾನೆ ಕಾರ್ಮಿಕರು ತಮ್ಮ ಹೋರಾಟ ನಡೆಸಿಕೊಂಡೇ ಬರುತ್ತಿದ್ದು, ಕಾರ್ಖಾನೆ ಉಳಿಸಿ, ಕಾರ್ಮಿಕರನ್ನೂ ಉಳಿಸಿ ಎಂಬ ಕೂಗಿನ ನಡುವೆ ಇದೀಗ ಎಂಪಿಎಂ ಕಾಗದ ಕಾರ್ಖಾನೆ ಸಂಪೂರ್ಣ ಮುಚ್ಚುವ ಹಂತಕ್ಕೆ ತಲುಪಿದೆ. ಈಗಾಗಲೇ ಕಾರ್ಖಾನೆಯನ್ನು ಖಾಸಗಿಕರಣ ಮಾಡಲು ಯೋಜಿಸಲಾಗಿದ್ದು,ಇದರ ನಡುವೆಯೂ ಕಾರ್ಖಾನೆಯ ಕಾರ್ಮಿಕರ ಹೊರತಾಗಿ ಕಾರ್ಖಾನೆಗೆ ಸಂಬಂಧಿಸಿದ ಅರಣ್ಯ ದಿನಗೂಲಿ ನೌಕರರು ಕೂಡ ತಮ್ಮ ಬೇಡಿಕೆಗಳಿಗಾಗಿ ಮನವಿ ಮಾಡಿಕೊಂಡೇ ಬರುತ್ತಿದ್ದಾರೆ. ಆದ್ರೆ ಇದುವರೆಗೂ ಇವರ ಬೇಡಿಕೆ ಮಾತ್ರ ಈಡೇರಿಲ್ಲ. ಕಳೆದ 35 ವರ್ಷಗಳಿಂದ ಅಂದರೆ, 1978 ರಿಂದ ಕೆಲಸ ಮಾಡಿಕೊಂಡು ಬರುತ್ತಿರುವ ಎಂಪಿಎಂ ಅರಣ್ಯ ನೌಕರರು, ತಮ್ಮ ವಿವಿಧ ಬೇಡಿಕೆಗಳನ್ನ ಈಗಲಾದರೂ ಈಡೇರಿಸಿ ಎಂದು ಅವಲತ್ತುಕೊಳ್ಳುತ್ತಿದ್ದಾರೆ.  ನಮಗೆ ಬರೋದು ಕೇವಲ 10 – 11 ಸಾವಿರ ಸಂಬಳ  ಹೇಗೆ ಸ್ವಾಮಿ ನಮ್ಮ ಜೀವನ ಎನ್ನುತ್ತಿದ್ದಾರೆ. ಎಂಪಿಎಂ ಅರಣ್ಯ ದಿನಗೂಲಿ ಮತ್ತು ವಾಚರ್ ಎಂದು ನೇಮಿಸಿಕೊಂಡ ಇವರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಎಂಪಿಎಂ ಕಾರ್ಖಾನೆ ಮುಚ್ಚಿದ್ದರೂ ಕೂಡ ಅರಣ್ಯ ವಿಭಾಗ, ಅರಣ್ಯವನ್ನು ಕಾಪಾಡಲೇಬೇಕಿದೆ. ಈಗಲೂ ಇವರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೂ ಕಳೆದ 35 ವರ್ಷಗಳಿಂದ ನಮಗೆ ದಿನಗೂಲಿ ನೌಕರರೆಂದೇ ಪರಿಗಣಿಸಲಾಗುತ್ತಿದೆ ಎಂಬುದು ಇವರ ಅಳಲು. ಎಂಪಿಎಂ ಕಾರ್ಖಾನೆ ಆಡಳಿತ ಮಂಡಳಿ ಕಾರ್ಖಾನೆಯ ಉತ್ಪಾದನೆಯನ್ನು ನಿಲ್ಲಿಸಿದ ಬಳಿಕವೂ ಸುಮಾರು 76 ಕೋಟಿ ರೂ. ಬೆಲೆ ಬಾಳುವ 1.75 ಸಾವಿರ ಟನ್ ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ಕಡಿದು ಮಾರಾಟ ಮಾಡಿದೆ. ಈ ಹಣ ಇದ್ದರೂ ಕೂಡ ನಮಗೆ ಬಾಕಿ ವೇತನಗಳಿಕೆಯ ರಜೆಯ ಹಾಗೂ ತಿಂಗಳ ವೇತನ ಕೂಡ ಸರಿಯಾಗಿ ನೀಡುತ್ತಿಲ್ಲ. ಅನ್ನೋದು ಅರಣ್ಯ ನೌಕರರ ಅಳಲು ಈಗಲಾದರೂ ಮುಖ್ಯಮಂತ್ರಿ ಬಿಎಸ್​ವೈ ಕಣ್ತೆರೆದು ನಮ್ಮ ಕಡೆ ನೋಡಬೇಕು.

 

LEAVE A REPLY

Please enter your comment!
Please enter your name here

- Advertisment -

Most Popular

ಪರೀಕ್ಷೆ ಬೇಡ ಅಂತ ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹಿಂದಿನ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ, ಇದನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್​ನಲ್ಲಿ  ಎನ್​​​ಎಸ್​​ಯುಐ ಸಂಘಟನೆ ಪ್ರತಿಭಟನೆ ನಡೆಸಿತು. ರಾಜ್ಯ...

ಸಚಿವ ಶಾಸಕರುಗಳ ಗುಪ್ತ ಗುಪ್ತ ಸಭೆ

ಚಿಕ್ಕಮಗಳೂರು : ಸಂಪುಟ ವಿಸ್ತರಣೆ ಖಾತೆ ಹಂಚಿಕೆ ಅಸಮಾಧಾನದ ಬೇಗುದಿ ಮಧ್ಯೆ ಬಿಜೆಪಿಯೊಳಗೆ ಹೊಸ ಬಂಡಾಯ ಬೂದಿ ಮುಚ್ಚಿದಂತೆ ಇದೆ ಪಕ್ಷದೊಳಗೆ ಒಂದೆರಡಲ್ಲ, ಹಲವು ಬಣಗಳು ರೂಪುಗೊಂಡಂತೆ ತೋರುತ್ತಿವೆ. ಸಚಿವ ಸ್ಥಾನ ಸಿಗದವರದ್ದು...

ಮಗಳಿಂದ ತಂದೆಯ ಅಂತ್ಯ ಸಂಸ್ಕಾರ

ಕಾರವಾರ : ಹೃದಯಾಘಾತದಿಂದ ಮೃತಪಟ್ಟಿದ್ದ ತಂದೆಯ ಅಂತ್ಯ ಸಂಸ್ಕಾರವನ್ನು ಮಗಳೇ ನೆರವೇರಿಸಿದ ಘಟನೆ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ನಿಪೇಟೆಯಲ್ಲಿ ನಡೆದಿದೆ.ಕುರ್ನಿಪೇಟೆಯ ಚಂದ್ರಕಾಂತ ಬುದೊ ಪಾಗಿ (56) ಹೃದಯಾಘಾತದಿಂದ ಮೃತಪಟ್ಟಿದ್ದರು. 9...

ಉದ್ಧವ್ ಠಾಕ್ರೆ ಹೇಳಿಕೆಗೆ ಸಿಲಿಕಾನ್ ಸಿಟಿ ಮರಾಠಿಗರಿಂದ ವಿರೋಧ

ಬೆಂಗಳೂರು : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ದಿನ ದಿನಕ್ಕೆ ಪ್ರತಿಭಟನೆಗಳು ಜಾಸ್ತಿಯಾಗುತ್ತಿವೆ. ಇವತ್ತು ನಗರದ ಮೌರ್ಯ ಸರ್ಕಲ್​ನಲ್ಲಿ ಸಿಲಿಕಾನ್ ಸಿಟಿಯ ಮರಾಠಿಗರೆಲ್ಲಾ ಒಂದೆಡೆ ಸೇರಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ರು....

Recent Comments