ಸಂಸದ ಪ್ರತಾಪ್ ಸಿಂಹ ರಿಲೀಸ್..!

0
156

ಬೆಂಗಳೂರು: ಜಾಮೀನು ಮೇಲೆ ಸಂಸದ ಪ್ರತಾಪ ಸಿಂಹ ಅವರನ್ನು ಬಿಡುಗಡೆ ಮಾಡಲು ಕೋರ್ಟ್‌ ಆದೇಶ ನೀಡಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನ ನ್ಯಾಯಾಧೀಶರು ಕಾನೂನಿನ ಬಗ್ಗೆ ಗೌರವವಿರಲಿ ಅಂತ ಪ್ರತಾಪ್‌ ಸಿಂಹ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂದು ಬೆಳಗ್ಗೆ ಪ್ರತಾಪ್ ಸಿಂಹ ಅವರನ್ನು ಕೋರ್ಟ್‌ ಕಸ್ಟಡಿಗೆ ತೆಗೆದುಕೊಳ್ಳಲಯ ನ್ಯಾಯಾಧೀಶರು ಆದೇಶ ನೀಡಿದ್ದರು. ವಾರೆಂಟ್ ಜಾರಿಯಾದ್ರೂ ಪ್ರತಾಪ್ ಸಿಂಹ ಅವರು ಕೋರ್ಟ್‌ಗೆ ಹಾಜರಾಗಿರಲಿಲ್ಲ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯ ಪ್ರತಾಪ್ ಸಿಂಹ ವಿರುದ್ಧ ನಟ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಕೆಲ ದಿನಗಳ ಹಿಂದೆ ನಟ ಪ್ರಕಾಶ್ ರೈ , ಪ್ರಧಾನಿ ನರೇಂದ್ರ ಮೋದಿ ಅವರನ್ನು ಘಟನೆಯೊಂದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮೂಲಕ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಸಂಸದ ಪ್ರತಾಪ್ ಸಿಂಹ ಟ್ವೀಟರ್ ಮೂಲಕ ನಟ ರೈಗೆ ತಿರುಗೇಟು ನೀಡಿದ್ದರು. ತನ್ನ ಮಗ ತೀರಿಹೋದಾಗ ನೃತ್ಯಗಾರ್ತಿಯೊಬ್ಬರ ಮಗ್ಗುಲಲ್ಲಿದ್ದ ಈ ವ್ಯಕ್ತಿಗೆ ಮೋದಿಯವರನ್ನು ಪ್ರಶ್ನಿಸುವ ನೈತಿಕತೆ ಏನಿದೆ? ರೀಲ್​ನಲ್ಲಷ್ಟೇ ಅಲ್ಲ, ನಿಜಜೀವನದಲ್ಲೂ ರೈ ಖಳನಾಯಕ ಎಂದು ಟ್ವಿಟರ್ ನಲ್ಲಿ ಟೀಕಿಸಿದ್ದರು. ಇದು ಬಳಿಕ ವಿವಾದಕ್ಕೆ ಗುರಿಯಾಗಿತ್ತು. ಮೈಸೂರು- ಕೊಡಗು ಕ್ಷೇತ್ರದ ಸಂಸದ ಪ್ರತಾಪ ಸಿಂಹರ ಈ ಟ್ವೀಟರ್ ಹೇಳಿಕೆ ವಿರುದ್ಧ ಬಹುಭಾಷ ನಟ, ನಿರ್ಮಾಪಕ ಪ್ರಕಾಶ ರೈ ಮೈಸೂರು ನ್ಯಾಯಾಲಯದಲ್ಲಿ 1 ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣ ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು.

LEAVE A REPLY

Please enter your comment!
Please enter your name here