Home ರಾಜ್ಯ ಬೆಂಗಳೂರು ಗೋಡ್ಸೆ ಸಾವಿನ ಕುರಿತ ಚರ್ಚೆ ಖುಷಿ ವಿಚಾರ - ಸಂಸದರಿಂದ ವಿವಾದಾತ್ಮಕ ಟ್ವೀಟ್​..!

ಗೋಡ್ಸೆ ಸಾವಿನ ಕುರಿತ ಚರ್ಚೆ ಖುಷಿ ವಿಚಾರ – ಸಂಸದರಿಂದ ವಿವಾದಾತ್ಮಕ ಟ್ವೀಟ್​..!

ಬೆಂಗಳೂರು: 7 ದಶಕಗಳ ಬಳಿಕ ಗೋಡ್ಸೆ ಸಾವಿನ ಕುರಿತು ಚರ್ಚೆಯಾಗುತ್ತಿದೆ. ಇಂದಿನ ತಲೆಮಾರು ಈ ಬಗ್ಗೆ ಚರ್ಚೆ ಮಾಡುತ್ತಿರೋದು ಖುಷಿ ವಿಚಾರ ಅಂತ ಸಂಸದ ಅನಂತ್​ ಕುಮಾರ್ ಹೆಗಡೆ​​ ಟ್ವೀಟ್ ಮಾಡಿರೋದು ವಿವಾದಕ್ಕೆಡೆಯಾಗಿದೆ.

ಟ್ವಿಟ್​ ಬಗ್ಗೆ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಅನಂತ ಕುಮಾರ್​ ಹೆಗಡೆ ಟೈಮ್​ ಲೈನ್​ನಿಂದ ಗೋಡ್ಸೆ ಟ್ವೀಟ್​ ಡಿಲೀಟ್​​ ಆಗಿದೆ. ನನ್ನ ಟ್ವಿಟ್ಟರ್​ ಖಾತೆ ಕಳೆದೊಂದು ವಾರದಲ್ಲಿ ಎರಡು ಬಾರಿ ಹ್ಯಾಕ್​ ಆಗಿದೆ. ಹ್ಯಾಕ್​ ಮಾಡಿ ನನ್ನ ಟೈಮ್​ ಲೈನ್​ನಲ್ಲಿ ಪೋಸ್ಟ್​ ಹಾಕಲಾಗುತ್ತೆ, ತೆಗೆಯಲಾಗುತ್ತೆ. ಇಂಥ ಪೋಸ್ಟ್​ಗಳು ನನಗೆ ಹತಾಶೆಯನ್ನುಂಟು ಮಾಡುತ್ತವೆ ಎಂದು ಗೋಡ್ಸೆ ಟ್ವೀಟ್​ ತೆಗೆದು ಹಾಕಿ ಸಮರ್ಥನೆ ನೀಡಿದ್ದಾರೆ.

ಬಿಜೆಪಿ ಸಂಸದ ನಳೀನ್​ ಕುಮಾರ್​ ನಿನ್ನೆ ವಿವಾದಾತ್ಮಕ ಟ್ವೀಟ್​​ ಮಾಡಿದ್ದರು. “ನಾಥೂರಾಮ್ ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000, ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು?” ಅಂತ ನಳೀನ್​ ಕುಮಾರ್​​ ಕಟೀಲ್​ ಟ್ವೀಟ್ ಮಾಡಿದ್ದರು.

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments