Saturday, May 21, 2022
Powertv Logo
Homeರಾಜ್ಯರಕ್ಷಣೆ ಕೋರಿ ಬರೋರನ್ನು ಅವರ ಹಣೆಬರಹ ಅಂತ ಬಿಡಲಾಗಲ್ಲ : ಸಿದ್ಧಗಂಗೆಯಲ್ಲಿ ಮೋದಿ

ರಕ್ಷಣೆ ಕೋರಿ ಬರೋರನ್ನು ಅವರ ಹಣೆಬರಹ ಅಂತ ಬಿಡಲಾಗಲ್ಲ : ಸಿದ್ಧಗಂಗೆಯಲ್ಲಿ ಮೋದಿ

ತುಮಕೂರು : ನೆರೆ ರಾಷ್ಟ್ರಗಳಲ್ಲಿ ಧಾರ್ಮಿಕ ದಬ್ಬಾಳಿಕೆಗೆ ಗುರಿಯಾದವರಿಗೆ ರಕ್ಷಣೆ ನೀಡೋದು ನಮ್ಮ ಸಂಸ್ಕೃತಿ ಮಾತ್ರವಲ್ಲದೆ ನಮ್ಮ ಜವಬ್ದಾರಿ ಕೂಡ ಎಂದು ಪ್ರಧಾನಿ ನರೇಂದ್ರ ಮೋದಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡರು.
ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ ನಡೆಸುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದೆ. ಇದು ಸಂಸತ್ತಿನ ನಿರ್ಣಯದ ವಿರುದ್ಧದ ಪ್ರತಿಭಟನೆಯಾಗಿದ್ದು, ಆ ಮೂಲಕ ಸಂಸತ್ತನ್ನು ವಿರೋಧಿಸುತ್ತಿದೆ. ಪಕ್ಕದ ರಾಷ್ಟ್ರಗಳಲ್ಲಿ ಧಾರ್ಮಿಕ ದಬ್ಬಾಳಿಕೆ ಒಳಗಾದವರಿಗೆ ರಕ್ಷಣೆ ನೀಡೋದು ನಮ್ಮ ಸಂಸ್ಕೃತಿ ಮತ್ತು ಜವಬ್ದಾರಿ ಎಂದರು.
ಧರ್ಮದ ಆಧಾರದ ಮೇಲೆ ಹುಟ್ಟಿಕೊಂಡ ಪಾಕಿಸ್ತಾನ ಅಲ್ಲಿನ ಹಿಂದೂ, ಜೈನ್​, ಸಿಖ್ ಮೊದಲಾದ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರವೆಸಗುತ್ತಿದೆ, ಶೋಷಿಸುತ್ತಿದೆ. ರಕ್ಷಣೆ ಕೋರಿ ನಮ್ಮದ ಬರೋರನ್ನು ಅವರ ಹಣೆಬರಹ ಅಂತ ಬಿಡಲು ಆಗಲ್ಲ. ಅವರನ್ನೆಲ್ಲಾ ರಕ್ಷಿಸುವುದು ನಮ್ಮ ಹೊಣೆ. ಅಲ್ಪಸಂಖ್ಯಾತರನ್ನು ಶೋಷಿಸುತ್ತಿರೋ ಪಾಕಿಸ್ತಾನದ ವಿರುದ್ಧವೇಕೆ ಕಾಂಗ್ರೆಸ್ ಮಾತನಾಡುತ್ತಿಲ್ಲ? ಪಾಕಿಸ್ತಾನದ ವಿರುದ್ಧ ಮಾತನಾಡಲು ಬೀಗ ಬಿದ್ದಿರೋದು ಏಕೆ ಎಂದು ಗುಡುಗಿದರು.
ಪುಣ್ಯಭೂಮಿಯಿಂದ ಹೊಸ ವರ್ಷ ಆರಂಭ ಹರುಷ ತಂದಿದೆ : ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ ಲಿಂಗೈಕ್ಯ ಡಾ ಶಿವಕುಮಾರ ಸ್ವಾಮೀಜಿಯವರನ್ನು ನೆನೆದು, ಹೊಸ ವರ್ಷವನ್ನು ಇಂಥಾ ಮಹಾನೀಯರ ಪುಣ್ಯಭೂಮಿಯಿಂದ ಆರಂಭಿಸಿರೋದು ಸಂತಸ ತಂದಿದೆ ಎಂದರು. ಅಂತೆಯೇ ಪೇಜಾವರ ಮಠದ ಕೃಷ್ಣೈಕ್ಯ ವಿಶ್ವೇಶ ತೀರ್ಥ ಶ್ರೀಗಳನ್ನು ಸ್ಮರಿಸಿದರು.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments