Saturday, October 1, 2022
Powertv Logo
Homeದೇಶಮನ್​ ಕೀ ಬಾತ್​ನಲ್ಲಿ ಮೋದಿ 'ದೇವರ' ಸ್ಮರಣೆ

ಮನ್​ ಕೀ ಬಾತ್​ನಲ್ಲಿ ಮೋದಿ ‘ದೇವರ’ ಸ್ಮರಣೆ

ಪ್ರಧಾನಿ ನರೇಂದ್ರ ಮೋದಿ ಅವರು 52ನೇ ಮನ್​ ಕೀ ಬಾತ್​ ನಲ್ಲಿ ತುಮಕೂರು ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ನೆನೆದಿದ್ದಾರೆ.
ಸಿದ್ಧಗಂಗಾ ಶ್ರೀಗಳ ಬಗ್ಗೆ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್​ ಕಲಾಂ ಅವರು ಬರೆದಿದ್ದ ಕವನವನ್ನು ವಾಚಿಸಿದ ಮೋದಿ ಬಸವಣ್ಣನ ಸಿದ್ಧಾಂತಗಳನ್ನು ಶ್ರೀಗಳು ಪಾಲಿಸಿದ್ದಾರೆ ಎಂದು ಸ್ಮರಿಸಿದ್ರು.
ಇತ್ತೀಚೆಗಷ್ಟೇ ಲಿಂಗೈಕ್ಯರಾದ ಶ್ರೀಗಳನ್ನು ನೆನೆದಿದ್ದು ಮಾತ್ರವಲ್ಲದೆ ಸುಭಾಷ್​ ಚಂದ್ರ ಬೋಸ್​ ಅವರನ್ನೂ ಮೋದಿ ಸ್ಮರಿಸಿದ್ರು. ಜೊತೆಗೆ ಮತದಾನ ಜಾಗೃತಿ ಬಗ್ಗೆಯೂ ಮಾತನಾಡಿದ ಅವರು, ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಅಂತ ಹೇಳಿದ್ರು.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments