ನವದೆಹಲಿ: ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೋನಾ ವಾರಿಯರ್ಸ್ ಸೇವೆ, ತ್ಯಾಗ ಸ್ಮರಣೀಯವಾಗಿದ್ದು, ಅದು ಎಲ್ಲರಿಗೂ ಆದರ್ಶವಾಗಬೇಕು. ಅದರಿಂದ ದೇಶದ ಪ್ರತಿಯೊಬ್ಬ ನಾಗರಿಕನೂ ಕೊರೋನಾ ವಾರಿಯರ್ಸ್ ಆಗಬೇಕು. ಲಾಕ್ಡೌನ್ ಸಡಿಲಿಕೆ ಮಾಡಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವುದರೊಂದಿಗೆ ಕೊರೋನಾ ಹರಡುವುದನ್ನು ತಡೆಯುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ದೇಶದ ಆರ್ಥಿಕತೆ ಅಭಿವೃದ್ಧಿಗೆ ಎಲ್ಲಾ ಅವಕಾಶಗಳು ತೆರೆದಿದ್ದು, ನಮ್ಮ ಸರ್ಕಾರವು ವಲಸೆ ಕಾರ್ಮಿಕರ ನೆರವಿಗೆ ನಿಂತಿದೆ. ಕಾರ್ಮಿಕರ ಕಷ್ಟವನ್ನು ಪರಿಹರಿಸಲು, ಅವರ ಹಸಿವು ನೀಗಿಸಲು ಆಹಾರ ಪೂರೈಕೆಗೆ ಹೊಸ ಯೋಜನೆಗಳನ್ನು ರೂಪಿಸಬೇಕಾಗಿದೆ. ಈಗಾಗಲೇ ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.
ಇನ್ನು ನಾವು ಯೋಗವನ್ನು ಆಭ್ಯಾಸ ಮಾಡುವುದರಿಂದ ಮಾನಸಿಕವಾಗಿ ಸದೃಢರಾಗಿರುವುದರ ಜೊತೆಗೆ ಉತ್ತಮ ಆರೋಗ್ಯ ಲಭ್ಯವಾಗುತ್ತದೆ. ಹಾಗಾಗಿ ಯೋಗದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಬಗ್ಗೆ ವಿಶ್ವದ ಅನೇಕ ನಾಯಕರೊಂದಿಗೆ ಯೋಗದ ಬಗ್ಗೆ ಮಾತನಾಡುತ್ತೇನೆ. ಈಗ ಇಡೀ ವಿಶ್ವವನ್ನು ನೋಡಿದರೆ ಯೋಗವೂ ತುಂಬಾ ಜನಪ್ರಿಯವಾಗಿದೆ. ಹಾಗಾಗಿ ‘ಮೈ ಲೈಫ್ ಮೈ ಯೋಗ‘ ಆ್ಯಪ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಸರ್ಕಾರಿದಿಂದ 3 ನಿಮಿಷದ ಯೋಗ ವೀಡಿಯೋ ರಿಲೀಸ್ ಮಾಡಲಾಗುತ್ತದೆ. ಈ ಯೋಗ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಪ್ರಧಾನಿ ಕರೆ ನೀಡಿದ್ದಾರೆ.
ಪ್ರಧಾನಿಯವರು ಕೊರೋನಾ ನಿಧಿಗೆ ದೇಣಿಗೆ ನೀಡಿದವರನ್ನು ಸ್ಮರಿಸಿಕೊಂಡು, ತಾವು ಕಷ್ಟದಲ್ಲಿದ್ದರೂ ದೇಣಿಗೆ ನೀಡಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ದೇಶದ ಸಾಕಷ್ಟು ಜನರು ದೇಣಿಗೆ ನೀಡಲು ಸಹಕರಿಸಿದ್ದಾರೆ. ಕೊರೋನಾ ಹೋರಾಟದಲ್ಲಿ ದೇಶದ ಜನತೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೂ ಕೊರೋನಾದಿಂದ ಹೊರಬರುವುದು ಹೇಗೆ ಅನ್ನೋದು ತಿಳಿಯುತ್ತಿಲ್ಲ.
ಈ ಕೊರೋನಾ ಸಂದರ್ಭದಲ್ಲೇ ದೇಶಕ್ಕೆ ಇನ್ನೆರಡು ಆಘಾತ ಎದುರಾಗಿದೆ. ಒಂದೆಡೆ ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಅಂಫಾನ್ ಚಂಡಮಾರುತ ಅಪ್ಪಳಿಸಿದೆ ಹಾಗೂ ಇನ್ನೊಂದೆಡೆ ಮಿಡತೆ ಹಾವಳಿ ಹೆಚ್ಚಾಗಿದೆ. ಈ ಕೀಟ ನಿವಾರಣೆಗೆ ಸರ್ಕಾರ ಈಗಾಗಲೇ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದೆ. ಆದರೆ ಇವೆಲ್ಲದರ ಮಧ್ಯೆ ಲಾಕ್ಡೌನ್ ಆದಾಗಿನಿಂದ ಪರಿಸರ ಮಾಲಿನ್ಯ ಕಡಿಮೆಯಾಗಿದೆ. ಪ್ರಾಣಿ -ಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ ಎಂದರು.
3profiles