ಏರ್​ಸ್ಟ್ರೈಕ್​ ನಂತರ ರಾಕೆಟ್ ವೇಗದಲ್ಲಿ ಹೆಚ್ಚಿದೆ ಮೋದಿ ಜನಪ್ರಿಯತೆ..!

0
338

ದೆಹಲಿ: 2019ರ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿದ್ದು, ದೇಶದಲ್ಲಿ ನರೇಂದ್ರ ಮೋದಿಯವರ ಜನಪ್ರಿಯತೆ ಹೆಚ್ಚಾಗಿದೆ. ನ್ಯಾಷನಲ್ ಅಪ್ರೂವಲ್ ರೇಟಿಂಗ್ಸ್ ಮತ್ತು ಸಿವೋಟರ್ ನಡೆಸಿರುವ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಾಗಿರೋದು ತಿಳಿದುಬಂದಿದೆ.

ಪುಲ್ವಾಮಾ ಮೇಲೆ ಉಗ್ರರ ದಾಳಿ ಮತ್ತು ನಂತರ ಪಾಕಿಸ್ತಾನದ ಜೈಷ್​-ಇ-ಮಹಮ್ಮದ್ ಉಗ್ರ ನೆಲೆಗಳ ಮೇಲೆ ಐಎಎಫ್‌ ನಡೆಸಿದ ಏರ್ ಸರ್ಜಿಕಲ್​​ ಸ್ಟ್ರೈಕ್‌ ನಂತರ ಮೋದಿ ಜನಪ್ರಿಯತೆ ರಾಕೆಟ್​ ವೇಗದಲ್ಲಿ ಹೆಚ್ಚಾಗಿದೆ. ಜನವರಿ 1ರಿಂದ ಮಾರ್ಚ್‌ ಏಳರವರೆ ಸಮೀಕ್ಷೆ ನಡೆದಿದ್ದು, ಜನವರಿ 1ರಂದು ಮೋದಿ ಜನಪ್ರಿಯತೆ ಶೇ. 46ರಷ್ಟು ಇತ್ತು. ಮಾರ್ಚ್‌ 7ರಲ್ಲಿ ಮೋದಿ ಜನಪ್ರಿಯತೆ ಶೇ.62ರಷ್ಟಾಗಿದೆ. ಅದೇ ರೀತಿ ರಾಹುಲ್ ಗಾಂಧಿ ಅವರ ಜನಪ್ರಿಯತನೆ ಜನವರಿ 1ರಂದು ಶೇ. 26ರಷ್ಟು ಇತ್ತು. ಇದೀಗ ಶೇ.16.4ಕ್ಕೆ ಇಳಿದಿದೆ.

ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ವಾಯುದಾಳಿಯ ಬಳಿಕ ಮೋದಿ ಜನಪ್ರಿಯತೆಯಲ್ಲಿ ಭಾರೀ ಏರಿಕೆಯಾಗಿದೆ ಎಂದು  ​​ ಸಮೀಕ್ಷೆಯಿಂದ ತಿಳಿದುಬಂದಿದೆ. ಮತ್ತೊಂದೆಡೆ ಪ್ರಧಾನಿ ಹುದ್ದೆ ರೇಸ್‌ನಲ್ಲಿ 2ನೇ ಸ್ಥಾನದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಜನಪ್ರಿಯತೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 2019ರ ಜನವರಿಯಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ ಶೇ. 46ರಷ್ಟಿತ್ತು. ಇನ್ನು ಫೆಬ್ರವರಿ 26ರಂದು ಭಾರತೀಯ ವಾಯುಪಡೆ ಪಾಕ್ ಉಗ್ರ ಶಿಬಿರದ ಮೇಲೆ ದಾಳಿ ನಡೆಸಿದ ಬಳಿಕ ಮೋದಿ ಜನಪ್ರಿಯತೆ ಶೇ. 62ಕ್ಕೆ ಏರಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here