ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ: Live​ ಅಪಡೇಟ್ಸ್​

0
214

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಗಬ್ಬೂರು ಬಳಿ 65 ಎಕರೆ ಜಮೀನು ಕೆಎಲ್ಇ ಮೈದಾನದಲ್ಲಿ ಸಮಾವೇಶ ನಡೆಯುತ್ತಿದ್ದು, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಪ್ರಧಾನಿ ಮೋದಿ ಜೊತೆ ವೇದಿಕೆಯಲ್ಲಿ ಆಸೀನರಾಗಿದ್ದಾರೆ. 90 ಸಾವಿರ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ. ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದಾರೆ. ಕರ್ನಾಟಕದಲ್ಲಿ ಹುಬ್ಬಳ್ಳಿಯಿಂದಲೇ ಪ್ರಧಾನಿ ಮೋದಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಪ್ರಧಾನಿ ಮೋದಿ ಭಾಷಣದ ಲೈವ್ ಅಪ್ಡೇಟ್ಸ್ ಇಲ್ಲಿದೆ.

* ಭಾರತ್​ ಮಾತಾಕಿ ಜೈ. ಈ ಭೂಮಿ ಶೌರ್ಯ, ಸೇವೆ, ತಪಸ್ಸು, ವಿದ್ಯೆ, ಸಂಸ್ಕೃತಿ ಇತಿಹಾಸ, ಪರಂಪರೆಗಳಿಗೆ ಹೆದರುವಾಸಿಯಾಗಿದೆ. ನನಗೆ ಈ ಪುಣ್ಯ ಪವಿತ್ರ ಭೂಮಿಗೆ ಬಂದಿರುವುದಕ್ಕೆ ರೋಮಾಂಚನವಾಗಿದೆ ಎಂದು ಕನ್ನಡದಲ್ಲಿ ಪ್ರಧಾನಿ ಮೋದಿ ಭಾಷಣ ಆರಂಭ.

* ಭಾಷಾಂತರದ ಅಗತ್ಯ ಇಲ್ಲವಲ್ಲ ಎಂದು ಕೇಳಿದ ಮೋದಿಗೆ ಜನರ ಮೋದಿ ಜೈಕಾರವೇ ಉತ್ತರ

* ನನಗೆ ಗೊತ್ತಿದೆ. ನೀವು ಮೂರು, ಎರಡು ಗಂಟೆ ಮುಂಚೆಯೇ ಬಂದು ಕುಳಿತಿದ್ದೀರಿ. ಈ ನಿಮ್ಮ ಪ್ರೀತಿ, ಆಶೀರ್ವಾದಕ್ಕೆ ನಾನು ಅಭಾರಿ. ಇಂದು ವಸಂತ ಪಂಚಮಿ. ಇಂದಿನಿಂದ ಹವಾಮಾನ ಬದಲಾಗುತ್ತದೆ. ಇಷ್ಟುದೊಡ್ಡ ಸಂಖ್ಯೆಯಲ್ಲಿ ನೀವಿಲ್ಲಿ ಸೇರಿದ್ದೀರಿ ಅಂದ್ರೆ ಕರ್ನಾಟಕ ರಾಜ್ಯ ರಾಜಕಾರಣದಲ್ಲಾಗುವ ಬದಲಾವಣೆಯನ್ನೂ ನಾನು ಕಂಡುಕೊಳ್ಳುತ್ತಿದ್ದೇನೆ.

* ಶ್ರೀ ಶಿವಕುಮಾರಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ನಾನು ಶ್ರದ್ಧಾಂಜಲಿ ಅರ್ಪಿಸುತ್ತೇನೆ.

* ಶ್ರೀ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಕವಿ ಕುಮಾರ ವ್ಯಾಸ, ದ ರಾ ಬೇಂದ್ರೆ, ಗಂಗೂಬಾಯಿ ಹಾನಗಲ್, ಪಂಡಿತ್​ ಭೀಮ್​ ಸೇನ್​ ಜೋಶಿ ಅವರ ಹೆಸರುಗಳು ದೇಶ ವಿದೇಶದಲ್ಲಿ ಖ್ಯಾತಿ ಪಡೆದಿದೆ.

* ವಸಂತ ಪಂಚಮಿ ದಿನ ಸಹೋದರ ಸಹೋದರಿಯರಿಗೆ ಪ್ರಧಾನಮಂತ್ರಿ ಆವಾಸ್​ ಯೋಜನೆಯಡಿ ಮನೆ ದೊರೆತಿದೆ. ಇವರಿಗೆ ಶುಭಾಶಯಗಳು. ಕೇಂದ್ರ ಸರ್ಕಾರ ಎಲ್ಲರ ವಿಕಾಸಕ್ಕಾಗಿ ಕೆಲಸ ಮಾಡ್ತಿದೆ. 50 ಲಕ್ಷ ಮನೆಗಳು ಈಗಾಗಲೇ ನಿರ್ಮಾಣವಾಗಿದೆ. ಇನ್ನೂ ಹೆಚ್ಚಿನ ಮನೆಗಳು ನಿರ್ಮಾಣವಾಗ್ತಿದೆ.

* ಇತಿಹಾಸದಲ್ಲಿಯೇ ಮೊದಲಬಾರಿ 5 ಲಕ್ಷ ತನಕ ವೇತನಕ್ಕೆ ಟ್ಯಾಕ್ಸ್​ ರಿಲಾಕ್ಸೇಶನ್​ ನೀಡಲಾಗಿದೆ.

* ರೈತರಿಗಾಗಿ, ಕೃಷಿಕರಿಗಾಗಿ ಬಜೆಟ್​ನಲ್ಲಿ ಕೊಡುಗೆ ನೀಡಲಾಗಿದೆ. ಶ್ರಮಿಕರಿಗಾಗಿ ಪೆನ್ಶನ್​ ನೀಡುವ ತೀರ್ಮಾನ ಮಾಡಲಾಗಿದೆ.

* ನಿಮ್ಮ ಈ ಪ್ರಧಾನ ಸೇವಕ ದೇಶದ ಬಡವರಿಗೆ ಬೇಕಾದ ನೆರವು ಅವರ ಖಾತೆಗೇ ಹೋಗುತ್ತಿದೆ. ಜನಸಾಮಾನ್ಯರಿಗೆ ಮೋದಿ ಮೇಲೆ ನಂಬಿಕೆ ಇದೆ. ಭ್ರಷ್ಟರಿಗೆ ಮೋದಿಯಿಂದ ಕಷ್ಟವಿದೆ.

 * ಯಾರ ಬಗ್ಗೆ ಜನ ಮಾತಾಡಲು ಭಯಪಡುತ್ತಿದ್ದರೋ ಅವರಿಂದ ತನಿಖಾ ದಳದ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇವರು ಕೃಷಿಕರನ್ನೂ ಬಿಡಲಿಲ್ಲ. ಚುನಾವಣೆಗೆ ಮೊದಲು ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದ್ರು. ಆದರೆ ಏನೂ ಮಾಡಲಿಲ್ಲ.

* ಈ ರಾಜ್ಯದ ನಾಟಕವನ್ನು ದೇಶವೇ ನೋಡುತ್ತಿದೆ. ಕುರ್ಚಿಗಾಗಿ ಗಲಾಟೆ ಮಾಡುತ್ತಿದ್ದಾರೆ. ರೆಸಾರ್ಟ್​ನಲ್ಲಿ ಕಿತ್ತಾಡುತ್ತಿದ್ದಾರೆ. ಇಲ್ಲಿನ ಮುಖ್ಯಮಂತ್ರಿಗೆ ಧಮ್ಕಿ ಹಾಕುತ್ತಾರೆ. ಕುರ್ಚಿ ರಕ್ಷಿಸುವಲ್ಲೇ ಅವರು ಬ್ಯುಸಿಯಾಗಿದ್ದಾರೆ. ಸರ್ಕಾರದ ಮುಖ್ಯಸ್ಥರೇ ಕೋಣೆಯೊಳಗೆ ಅಳುವಂತಹ ಮಾದರಿಯನ್ನು ದೇಶವೇ ನೋಡ್ತಿದೆ. ಸಮಾಜ ದೇಶವನ್ನು ನೋಡಿ ನಗುತ್ತಿದೆ.

* ಧನಾತ್ಮಕ ಸರ್ಕಾರ ಬೇಕೋ? ಋಣಾತ್ಮಕ ಸರ್ಕಾರ ಬೇಕೋ? ಕ್ಲೀಯಾರಿಟಿ ಬೇಕೋ? ಕನ್​​ಫ್ಯೂಷನ್​ ಬೇಕೋ? ನೀವೇ ನಿರ್ಧರಿಸಿ ಅನ್ನುವ ಮೋಲ ಪ್ರಧಾನಿ ಭಾಷಣ ಕೊನೆಗೊಳಿಸಿದ್ದಾರೆ.

 

 

LEAVE A REPLY

Please enter your comment!
Please enter your name here