ದಾಖಲೆ ಪ್ರಮಾಣದ ಮತದಾನಕ್ಕೆ ಮೋದಿ ಕರೆ

0
117

ನವದೆಹಲಿ: 2019ರ ಲೋಕಸಭಾ ಮೊದಲ ಹಂತದ ಮತದಾನ ಇಂದು ಪ್ರಾರಂಭವಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್​ ಮಾಡಿದ್ದಾರೆ. “ಯಾವೇಲ್ಲಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆಯೋ ಅಲ್ಲಿ ಮತದಾರರು ದಾಖಲೆಯ ಪ್ರಮಾಣದ ಮತದಾನ ಮಾಡಿ” ಎಂದು ಟ್ವೀಟ್ ಮಾಡಿದ್ದಾರೆ. ಇದೇ ಮೊದಲಬಾರಿಗೆ ಮತದಾನ ಮಾಡುತ್ತಿರುವ ಯುವಜಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ” ಎಂದು ಸಂದೇಶ ರವಾನಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ  ರಾಹುಲ್​ಗಾಂಧಿ ಅವರೂ ಮತದಾರಿಗೆ ಶುಭಾಶಯ ಕೊರಿದ್ದಾರೆ. ಅಷ್ಟೇ ಅಲ್ಲದೆ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.  “2 ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ, ಬ್ಯಾಂಕ್ ಖಾತೆಗೆ 15ಲಕ್ಷ ಬಂದಿಲ್ಲ, ಅಚ್ಛೇ ದಿನವೂ ಬಂದಿಲ್ಲ ಎಂದು ಟೀಕಿಸುವುದರ ಮೂಲಕ ಭಾರತದ ಆತ್ಮಕ್ಕೆ ಮತದಾನ ಮಾಡಿ, ಭಾರತದ ಭವಿಷ್ಯಕ್ಕಾಗಿ ಮತದಾನ ಮಾಡಿ” ಅಂತ ಕೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here