ಮುದ್ದಹನುಮೇಗೌಡ ಪರ ಶಾಸಕ ಸುಧಾಕರ್ ಟ್ವೀಟ್

0
136

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಲಾಗಿದ್ದು, ಸಂಸದ ಮುದ್ದಹನುಮೇಗೌಡ ಅವರ ಬೆಂಬಲಿಗರು ಅಸಮಧಾನಗೊಂಡಿದ್ದಾರೆ. ಕ್ಷೇತ್ರ ಕಾಂಗ್ರೆಸ್ ಕೈ ತಪ್ಪಿದ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ನಾಯಕರು ಸೀಟು ಕಾಂಗ್ರೆಸ್​ಗೆ ಬಿಟ್ಟುಕೊಡುವಂತೆಯೂ ಒತ್ತಾಯಿಸಿದ್ದಾರೆ. ಮುದ್ದಹನುಮೇಗೌಡ ಪರ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

“ಯೋಗ್ಯ ಒಕ್ಕಲಿಗ ನಾಯಕನಿಗೆ ಅನ್ಯಾಯವಾಗಿದೆ. ಮುದ್ದಹನುಮೇಗೌಡರಿಗೆ ನನ್ನ ನೈತಿಕ ಬೆಂಬಲ ಇದೆ” ಅಂತ ಟ್ವೀಟ್ ಮಾಡಿದ್ದಾರೆ. ತುಮಕೂರು ಕ್ಷೇತ್ರ ಹಿಂಪಡೆಯಲು ಜಿಲ್ಲಾ ನಾಯಕರು ಕಸರತ್ತು ನಡೆಸಿದ್ದು, ದೇವೇಗೌಡರು ಮಾತ್ರ ಸೀಟು ಬಿಟ್ಟುಕೊಡುವ ಕುರಿತು ಮಾತನಾಡಿಲ್ಲ.

LEAVE A REPLY

Please enter your comment!
Please enter your name here