ಶಾಸಕ ನಾರಾಯಣ ಗೌಡ್ರಿಗೆ ಸಿಎಂ ಬಗ್ಗೆ ಅಸಮಾಧಾನವೇಕೆ..?

0
343

ಮಂಡ್ಯ: ಸಿಎಂ ಎಚ್​ ಡಿ ಕುಮಾರಸ್ವಾಮಿ ಬಗ್ಗೆ ಶಾಸಕ ಕೆ ಸಿ ನಾರಾಯಣ ಗೌಡ ಅವರಿಗೆ ಅಸಮಧಾನವಿದೆ ಅಂತ ಅವರ ಬೆಂಬಲಿಗರೇ ಮಂಡ್ಯದಲ್ಲಿ ಹೇಳಿದ್ದಾರೆ. ಬಗ್ಗೆ  ಜೆಡಿಎಸ್​ ಪಕ್ಷದಲ್ಲೂ ಅಸಮಾಧಾನ ಸ್ಫೋಟಗೊಂಗಿದ್ದು ಇದು ಜೆಡಿಎಸ್​ ಪಕ್ಷಕ್ಕೂ, ಸಿಎಂಗೂ ಆಘಾತಕಾರಿ ವಿಚಾರ. ಸಿಎಂ ಕುಮಾರಸ್ವಾಮಿ ನಡೆಗೆ ಕೆಆರ್​ ಪೇಟೆ ಶಾಸಕ ನಾರಾಯಣ ಗೌಡ ಅವರಿಗೆ ಅಸಮಾಧಾನವಿರುವುದಾಗಿ ಅವರ ಬೆಂಬಲಿಗರೇ ಹೇಳಿಕೆ ನೀಡಿದ್ದಾರೆ.

ಕೆ.ಆರ್.ಪೇಟೆ ಪ್ರವಾಸಿ ಮಂದಿರದಲ್ಲಿ ನಡೆದ ಜೆಡಿಎಸ್ ವರಿಷ್ಠರ ಸಭೆಯಲ್ಲಿ ನಾರಾಯಣ ಗೌಡ ಅವರ ಬೆಂಬಲಿಗರು ಸಭೆಯ ನಂತರ ಪ್ರತಿಕ್ರಿಯಿಸಿ, ಕೆಆರ್​ ಪೇಟೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಸಿಎಂ ಮೀನಾಮೇಷ ಎಣಿಸುತ್ತಿದ್ದಾರೆ. ಈ ಕಾರಣದಿಂದ ಸಿಎಂ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಮಂತ್ರಿ ವಿರುದ್ಧ ನಾರಾಯಣ ಗೌಡ ಅವರಿಗೆ ಬೇಸರವಿದೆ. ನಾರಾಯಣ ಗೌಡ ಅವರು ಅಸಮಾಧಾನಗೊಂಡಿರುವುದು ನಿಜ. ಅಧಿವೇಶನದಲ್ಲಿ ಭಾಗಿ ಆಗದೇ ಶಾಸಕರು ಮುಂಬೈನಲ್ಲಿ ಇರುವುದು ಹೌದು ಅಂತ ಅವರ ಬೆಂಬಲಿಗರು ಹೇಳಿದ್ದಾರೆ.

LEAVE A REPLY

Please enter your comment!
Please enter your name here