Saturday, October 1, 2022
Powertv Logo
Homeರಾಜಕೀಯಮತ್ತೆ ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ : ಇನ್ಸ್‌ಪೆಕ್ಟರ್​​​ಗೆ ಧಮ್ಕಿ

ಮತ್ತೆ ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ : ಇನ್ಸ್‌ಪೆಕ್ಟರ್​​​ಗೆ ಧಮ್ಕಿ

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಪೊಲೀಸ್ ಅಧಿಕಾರಿಯನ್ನು ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಬಾಯಿಗೆ ಬಂದಂತೆ ನಿಂದಿಸಿರೋ ಆಡಿಯೋ ಇದೀಗ ಫುಲ್ ವೈರಲ್ ಆಗ್ತಿದೆ.

ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಇನ್ಸ್​​​ಪೆಕ್ಟರ್ ಆಗಿ ಚಾರ್ಜ್ ತೆಗೆದುಕೊಂಡಿದ್ದ ರವೀಶ್​​ಗೆ ಎಂ.ಪಿ.ಕುಮಾರಸ್ವಾಮಿ ನಿಂದಿಸಿದ್ದಾರೆ. ಯಾರೋ ನೀನು, ಎಲ್ಲಿದ್ದೀಯಾ? ನಿನ್ನನ್ನು ಬೇಡ ಅಂತ ಹೇಳಿದ್ದೆ ತಾನೆ? ಸ್ಟೇಷನ್​​ನಲ್ಲಿ ಇರಬೇಡ. ಮರ್ಯಾದೆಯಿಂದ ಬಂದ ರೀತಿಯಲ್ಲೇ ವಾಪಸ್ ಹೋಗು ಎಂದು ಶಾಸಕ ಬೆದರಿಕೆ ಹಾಕಿದ್ದಾರೆ. ಐಜಿಪಿಗೆ ಎಷ್ಟು ಲಂಚ ಕೊಟ್ಟಿದ್ದೀಯಾ? ಯಾವನು ಐಜಿಪಿ ಅಂತ ಹಿರಿಯ ಹುದ್ದೆಯ ಅಧಿಕಾರಿಗೂ ಏಕವಚನ ಬಳಸಿದ್ದಾರೆ. ಅಲ್ಲದೇ, ಮೂಡಿಗೆರೆಗೆ ಎಲ್ಲ ನಾನೇ. ನನ್ನ ನ್ನು ನೋಡಲು ಬಂದ್ರೆ ಒದ್ದು ಓಡಿಸ್ತೀನಿ ಅಂತ ಶಾಸಕ ಎಂ.ಪಿ.ಕುಮಾರಸ್ವಾಮಿ ಇನ್ಸ್​​​ಪೆಕ್ಟರ್ ರವೀಶ್​​ಗೆ ಧಮ್ಕಿ ಹಾಕಿದ್ದಾರೆ..

ಶಾಸಕ : ಹಲೋ… ಯಾರಪ್ಪಾ ಇದು ನಂಬರು…?
ಪಿ.ಎಸ್.ಐ : ಸರ್… ನಾನು ರವೀಶ್ ಮಾತಾಡೋದು ಸಾರ್…
ಶಾಸಕ : ಎಲ್ಲಿದ್ದೀಯಾ… ಈಗ ಎಲ್ಲಿದ್ದೀಯಾ…
ಪಿ.ಎಸ್.ಐ : ಸ್ಟೇಷನ್ ನಲ್ಲಿ ಇದೀನಿ ಸರ್…
ಶಾಸಕ : ಇಲ್ಲಿಗೆ ಬರ್ಬೇಡ ಅಂದಿದ್ನಲ್ಲ ನಾನು…
ಪಿ.ಎಸ್.ಐ : ಐಜಿ ಸರ್ ಫೋನ್ ಮಾಡಿ ಹೇಳಿದ್ರು ಸರ್… ತಗೋಳಿ ಹೋಗಿ ಅಂತ…
ಶಾಸಕ : ವಾಪಸ್ ಹೋಗು… ಮರ್ಯಾದೆಯಿಂದ ವಾಪಸ್ ಹೋಗು… ಸ್ಟೇಷನ್ ನಲ್ಲಿ ಇರಬೇಡ…
ಶಾಸಕ : ಮರ್ಯಾದೆಯಿಂದ ವಾಪಸ್ ಹೋಗಲೇ…
ಶಾಸಕ : ನಾನು ಹೇಳಿದಂತೆ ಕೇಳು, ರೆಕಾರ್ಡ್ ಮಾಡಿಕೋ ಬೇಕಾದ್ರೆ…
ಪಿ.ಎಸ್.ಐ : ಸರ್… ಹಾಗೇನಿಲ್ಲ ಸರ್… ಅಲ್ಲಿಗೆ ನಿಮ್ಮ ಬಳಿ ಬರ್ತೇನೆ ಸರ್…ನಾಳೆ ಬಂದ್ ನಿಮ್ಮನ್ನಾ ಕಾಣ್ತೀನಿ ಸರ್…
ಶಾಸಕ : ಮರ್ಯಾದೆಯಿಂದ ವಾಪಸ್ ಹೋಗು, ಬಂದ ದಾರಿಯಲ್ಲೇ ವಾಪಸ್ ಹೋಗು…ನಾಳೆಯೇ ಚೇಂಜ್ ಮಾಡಿಸ್ತೀನಿ ನೋಡು…ನಿಮ್ಮದು ನಡೀಯಲ್ಲ…
ಶಾಸಕ : ಎಷ್ಟು ಲಂಚ ಕೊಟ್ಟಿದ್ದೀಯಾ… ಐಜಿಗೆ… ಯಾರಿಗೆ ಎಷ್ಟು ಕೊಟ್ಡೀದ್ದೀಯಾ, ನನಗೆ ಗೊತ್ತಿಲ್ವಾ…
ಪಿ.ಎಸ್.ಐ : ಸರ್… ಅ ರೀತಿ ಏನಿಲ್ಲ ಸರ್… ನಾನೇನು ಕೊಟ್ಟಿಲ್ಲ ಸರ್…
ಶಾಸಕ : ಮರ್ಯಾದೆಯಿಂದ ಹೊರಟು ಹೋಗು, ಬಂದ ದಾರಿಯಲ್ಲಿ ಹೋಗು…
ಪಿ.ಎಸ್.ಐ : ನಾಳೆ ಬಂದು ನಿಮ್ಮನ್ನ ಭೇಟಿ ಮಾಡ್ತೀನಿ ಸರ್‌…
ಶಾಸಕ : ಯಾವನ್ ಐಜಿ… ಐಜಿ ಅಲ್ಲ… ಮೂಡಿಗೆರೆಗೆ ನಾನು…
ಪಿ.ಎಸ್.ಐ : ನಾಳೆ ಬಂದು ನಿಮ್ಮನ್ನ ಭೇಟಿ ಆಗುತ್ತೇನೆ ಸರ್…
ಶಾಸಕ : ಅವನಿಗೆ ಹೇಳು ಐಜಿಗೆ…
ಪಿ.ಎಸ್.ಐ : ಸರ್‌‌… ನಾಳೆ ಬಂದು ನಿಮ್ಮನ್ನ ಕಾಣ್ತೀನಿ ಸರ್… ಒದ್ದು ಓಡಿಸುತ್ತೇನೆ ಬಂದ್ರೆ…
ಶಾಸಕ : ಮರ್ಯಾದೆಯಿಂದ ವಾಪಸ್ ಹೋಗು… ಬಂದ ದಾರಿಯಲ್ಲೇ ಹೋಗು..

- Advertisment -

Most Popular

Recent Comments