ಟಿ20 ವರ್ಲ್ಡ್ ಕಪ್ ಸೆಮಿಫೈನಲ್ ನಿಂದ ತಮ್ಮನ್ನು ಹೊರಗಿಟ್ಟಿದ್ದಕ್ಕೆ ಟೀಮ್ ಇಂಡಿಯಾದ ಒಡಿಐ ಕ್ಯಾಪ್ಟನ್ ಮಿಥಾಲಿ ರಾಜ್ ಕೊನೆಗೂ ಮೌನ ಮುರಿದಿದ್ದಾರೆ. ಕೋಚ್ ರಮೇಶ್ ಪವಾರ್ ಹಾಗೂ ಆಡಳಿತ ಮಂಡಳಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಒಎ ಆಡಳಿತ ಮಂಡಳಿಯ ಸದಸ್ಯೆ ಹಾಗೂ ಟೀಮ್ಇಂಡಿಯಾದ ಮಾಜಿ ನಾಯಕಿ ಡಯಾನ ಎಡುಲ್ಜಿ ಪಕ್ಷಪಾತದ ಧೋರಣೆ ಅನುಸರಿಸುತಿದ್ದು, ಕೋಚ್ ರಮೇಶ್ ಪೋವಾರ್ ಸೇರಿದಂತೆ ಕೆಲವರು ಕರಿಯರ್ ಗೆ ತೊಂದ್ರೆ ಮಾಡ್ತಿದ್ದಾರೆ ಅಂತ ಗಂಭೀರ ಆರೋಪ ಮಾಡಿ, ಸಿಇಒ ರಾಹುಲ್ ಜೊಹ್ರಿ ಮತ್ತು ಸಬಾ ಕರೀಂರವರಿಗೆ ಪತ್ರ ಬರೆದಿದ್ದಾರೆ. ಟಿ-20 ವರ್ಲ್ಡ್ ಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ಮಿಥಾಲಿರಾಜ್ರನ್ನು ತಂಡದಿಂದ ಹೊರಗಿಡಲಾಗಿತ್ತು. ಪಂದ್ಯದ ಸೋಲಿನ ಬಳಿಕ ಅಭಿಮಾನಿಗಳು ಮಿಥಾಲಿರಾಜ್ ರನ್ನು ಪ್ರಮುಖ ಮ್ಯಾಚ್ ನಿಂದ ಕೈ ಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಡಯಾನಾ ಎಡುಲ್ಜಿ, ಮಿಥಾಲಿ ರಾಜ್ಯನ್ನ ಪಂದ್ಯದಿಂದ ಹೊರಗಿಟ್ಟ ಕ್ರಮವನ್ನ ಸಮರ್ಥಿಸಿಕೊಂಡಿದ್ರು. ಇನ್ನು ಈ ಬಗ್ಗೆ ಸ್ಪಷ್ಟಣೆಗೆಂದು ಹರ್ಮನ್ ಪ್ರೀತ್ ಕೌರ್, ಮಿಥಾಲಿ ರಾಜ್, ಕೋಚ್ ರಮೇಶ್ ಪೋವಾರ್ ಹಾಗೂ ತಂಡದ ಮ್ಯಾನೇಜರ್ರನ್ನ ಸಿಒಎ ಕಮಿಟಿ ಸಭೆ ಕರೆದಿದೆ.