Home ರಾಜ್ಯ ಖತರ್ನಾಕ್ ಐಡಿಯಾದಿಂದ ಪೊಲೀಸರ ಕೈಗೆ ತಗಲಾಕ್ಕೊಂಡ ಗೃಹ ಸಚಿವರ ನಕಲಿ ತಮ್ಮ!

ಖತರ್ನಾಕ್ ಐಡಿಯಾದಿಂದ ಪೊಲೀಸರ ಕೈಗೆ ತಗಲಾಕ್ಕೊಂಡ ಗೃಹ ಸಚಿವರ ನಕಲಿ ತಮ್ಮ!

ಚಿಕ್ಕಬಳ್ಳಾಪುರ: ಮೋಸ ಹೋಗೋವರು ಇದ್ರೆ, ಮೋಸ ಮಾಡೋವರು ಇರ್ತಾರೆ. ಆದರೆ ಇಲ್ಲಿ ಮೋಸ ಹೋಗಿಲ್ಲ. ಬದಲಾಗಿ ಮೋಸ ಮಾಡಲು ಯತ್ನಿಸಿದವರನ್ನೇ ಕಂಬಿ ಹಿಂದೆ ತಳ್ಳಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಗೃಹ ಸಚಿವ ಬಸವರಾಜು ಬೊಮ್ಮಾಯಿ ತಮ್ಮ ನಾನು ಮಹೇಶ್ ಬೊಮ್ಮಾಯಿ ಅಂತ ಪರಿಚಯಿಸಿಕೊಂಡು ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಪೊಲೀಸರಿಗೆ ಫೋನ್ ಮಾಡಿ ನಮ್ಮ ಸಂಬಂಧಿ ಶಿಕ್ಷಕ ರವಿಪ್ರಕಾಶ್ ಎಂಬುವರು ತಮ್ಮ ಬಳಿ ಬರ್ತಾರೆ ಅವರಿಗೆ ಕಾನೂನು ಪ್ರಕಾರ ಕೆಲಸ ಮಾಡಿಕೊಡಿ ಅಂತ ಪಿಎಸ್ಐ ಲಕ್ಷ್ಮೀನಾರಾಯಣರಿಗೆ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯ ನಿವಾಸಿ ಬಸವರಾಜು ಎಂಬಾತ ಫೋನ್ ಮಾಡಿದ್ದಾನೆ.

ಬಳಿಕ ಮಂಚೇನಹಳ್ಳಿ ಪೊಲೀಸ್ ಠಾಣೆಯ ಲ್ಯಾಂಡ್ ಲೈನ್​ಗೆ ಫೋನ್ ಮಾಡಿ ನಾನು ಗೃಹ ಸಚಿವರ ಪಿಎ ಅಂತ ಪೋನ್ ಮಾಡಿ ಕೆಲಸ ಮಾಡಿ ಕೊಡುವಂತೆ ಕತೆ ಕಟ್ಟಿದ್ದಾನೆ‌. ಬಳಿಕ ಸಹೋದರ, ಶಿಕ್ಷಕನ ಜೊತೆ ತಾನೇ ವಕೀಲನ ವೇಷದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಗೆ ಬಂದು, ಪೊಲೀಸರಿಗೆ ಆಗ ತಾನು ವಕೀಲ, ಗೃಹ ಸಚಿವರ ಕಾನೂನು ಸಲಹೆಗಾರ ಅಂತ ಹೇಳಿದ್ದಾನೆ. ಇದಕ್ಕೊ ಮೊದಲೇ ಈ ಅಸಾಮಿಯ ಪೂರ್ವಾಪರಗಳನ್ನ ಅರಿತಿದ್ದ ಮಂಚೇನಹಳ್ಳಿ ಪೊಲೀಸರು, ಇವರನ್ನು ಬಲೆಗೆ ಕೆಡವಲು ಕಾಯ್ತಿದ್ದರು. ಠಾಣೆಗೆ ಬಂದ ಬಸವರಾಜ್ ನನ್ನ ಪೊಲೀಸರು ಅವರದೇ ಶೈಲಿಯಲ್ಲಿ ವಿಚಾರಿಸಿದಾಗ ಸತ್ಯ ಬಯಲಾಗಿದೆ. ಅಲ್ಲದೇ ಪ್ರಭಾವಿಗಳು, ರಾಜಕಾರಣಿಗಳ ಹೆಸರೇ ಹೇಳಿದರೆ ಕೆಲಸ ಬೇಗ ಆಗುತ್ತೆ ಅಂತ ಬಸವರಾಜ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನಂತೆ.

 

ಘಟನೆ ಸಂಬಂಧ ಕೃತ್ಯದಲ್ಲಿ ಭಾಗಿಯಾದ ಗೌರಿಬಿದನೂರು ತಾಲ್ಲೂಕಿನ ತರಿದಾಳು ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕ ರವಿಪ್ರಕಾಶ್ ಮತ್ತವರ ಸೋದರ, ಗೃಹ ಸಚಿವರ ನಕಲಿ ತಮ್ಮ, ನಕಲಿ‌ ವಕೀಲ
ಆರೋಪಿ ಬಸವರಾಜುರನ್ನ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ 419 ಹಾಗೂ 420 ಅಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ‌.

-ಮಲ್ಲಪ್ಪ. ಎಂ.ಶ್ರೀರಾಮ್

LEAVE A REPLY

Please enter your comment!
Please enter your name here

- Advertisment -

Most Popular

ಅವರ ಬಳಿ ಹಣ ಕೇಳಿದ್ದು ತಪ್ಪು-ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ

ಚಿಕ್ಕಮಗಳೂರು : ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಬಹಳ ಪ್ರಾಮಾಣಿಕ ವ್ಯಕ್ತಿ, ನಿಷ್ಠೆ ಯಿಂದ ಕೆಲಸ ಮಾಡ್ತಾ ಇದ್ದಾರೆ, ಅವರ ಬಳಿ ಕಂದಾಯ ಸಚಿವ ಆರ್.ಅಶೋಕ್ ಪಿಎ ಗಂಗಾಧರ್ ಹಣ ಕೇಳಿದ್ದು ತಪ್ಪು,...

ಪತ್ರಕರ್ತರ ಗೋಲ್ಡ್​ ಹಿಂತಿರುಗಿಸಿ ಮಾನವೀಯತೆ ಮೆರೆದ ಕೆಎಸ್​ಆರ್​ಟಿಸಿ ಸಿಬ್ಬಂದಿ!

ವಿಜಯಪುರ : ಹೈದ್ರಾಬಾದ್ ಮಾರ್ಗದಲ್ಲಿ ಪ್ರಯಾಣಿಸುವ ಬಸ್​ನಲ್ಲಿ ಸಿಕ್ಕ ಗೋಲ್ಡ್​ ಚೈನ್​ನ್ನು ವಾರಸುದಾರರಿಗೆ ಹಿಂತಿರುಗಿಸಿ ಕೆಎಸ್​ಆರ್​ಟಿಸಿ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ವಿಜಯಪುರ ನಗರ ಕೆಎಸ್​ಆರ್​ಟಿಸಿ ಘಟಕದ ನಿರ್ವಾಹಕ ಎಸ್.ಜೆ.ಬೊಮ್ಮಣಗಿ ತಮ್ಮ ಪ್ರಾಮಾಣಿಕತೆ ತೋರಿದ್ದಾರೆ....

ಕೆಂಪುಕೋಟೆ ಹತ್ತಿದವರು ಯಾರು ರೈತರಲ್ಲ : ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು : ನಿನ್ನೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನ ರೈತರು ವಹಿಸಿಲ್ಲ, ಕೆಂಪು ಕೋಟೆ ಹತ್ತಿದವರು ಯಾರೂ ಕೂಡ ರೈತರಲ್ಲ, ಹೋರಾಟದ ನೇತೃತ್ವವನ್ನ ಉಮ್ಮರ್ ಖಾಲಿದ್ ಬಿಡುಗಡೆ ಮಾಡಿ ಅನ್ನುವಂತಹ ವಿಚಾರವಾದಿಗಳು ಹಾಗೂ...

‘4 ವರ್ಷ ಸರೆಮನೆ ವಾಸ ಪೂರ್ಣಗೊಳಿಸಿದ ಶಶಿಕಲಾ’

ಬೆಂಗಳೂರು: ದಿ.ಜಯಲಲಿತಾ ಆಪ್ತೆ ಶಶಿಕಲಾ 4 ವರ್ಷ ಶಿಕ್ಷೆ ಅವಧಿ ಪೂರ್ಣಗೊಳಿಸಿ ಇಂದು ಬಿಡುಗಡೆಯಾಗುತ್ತಿದ್ದಾರೆ.  ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ಶಶಿಕಲಾ ಜೈಲು ಸೇರಿದ್ದರು. ಜೈಲಾಧಿಕಾರಿಗಳು ಆಸ್ಪತ್ರೆಗೆ ಬಂದು ಬಿಡುಗಡೆ ಪ್ರಕ್ರಿಯೆ ಮುಗಿಸಿ, ಶಶಿಕಲಾಯಿಂದ...

Recent Comments