Home ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಡವಟ್ಟು: ವಿದ್ಯಾರ್ಥಿನಿಗೆ‌ ಆತಂಕ

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಡವಟ್ಟು: ವಿದ್ಯಾರ್ಥಿನಿಗೆ‌ ಆತಂಕ

ಗದಗ: ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರೌಢ ಶಿಕ್ಷಣ ಮಂಡಳಿಯ ಅಧಿಕಾರಿಗಳ ಎಡವಟ್ಟಿನಿಂದಾಗಿ ವಿದ್ಯಾರ್ಥಿನಿಯೊಬ್ಬರ ಅಂಕಗಳು ಕಡಿತಗೊಂಡಿದೆ. ಉತ್ತರ ಪತ್ರಿಕೆ ಹಾಗೂ ಅಂಕಪಟ್ಟಿಯರುವ ಅಂಕಿಗಳನ್ನು ತಾಳೆ ಹಾಕಿದಾಗ 26 ಅಂಕಗಳು ಖೋತಾ ಆಗಿದ್ದು, ಇದರಿಂದಾಗಿ ಉತ್ತಮ ಕಾಲೇಜುಗಳಲ್ಲಿ ಪ್ರವೇಶ ಬಯಸಿದ್ದ ವಿದ್ಯಾರ್ಥಿನಿ ಇದೀಗ ಆತಂಕಕ್ಕೆ ಸಿಲುಕಿದ್ದು, ಲೋಪವನ್ನು ಸರಿಪಡಿಸುವಂತೆ ಶಿಕ್ಷಣ ಇಲಾಖೆಗೆ ಅಲೆಯುವಂತಾಗಿದೆ.

ಹೌದು, ತಾಲ್ಲೂಕಿನ ಹುಯಿಲಗೋಳ ಗ್ರಾಮದ ಕುಸುಮಾ ಕುಸುಗಲ್ ಎಂಬ ಬಾಲಕಿ ಹುಬ್ಬಳ್ಳಿಯ ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆ (ಆಂಗ್ಲ ಮಾಧ್ಯಮ)ಯಲ್ಲಿ ವಿದ್ಯಾರ್ಥಿನಿಯಾಗಿದ್ದಳು. ಪ್ರತಿಭಾನ್ವಿತೆಯಾಗಿದ್ದ ಕುಸುಮಾ ಇತ್ತೀಚೆಗೆ ಪ್ರಕಟಗೊಂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಒಟ್ಟು 625ಕ್ಕೆ 476 ಅಂಕ ಪಡೆದಿದ್ದಾಳೆ. ಅದರಲ್ಲೂ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿಯಾಗಿದ್ದರೂ, ಕನ್ನಡ ಭಾಷೆಯಲ್ಲಿ 125ಕ್ಕೆ 116 ಅಂಕ ಪಡೆದಿರುವುದು ವಿಶೇಷ. ಇನ್ನುಳಿದಂತೆ ಇಂಗ್ಲಿಷ್- 73, ಹಿಂದಿ- 96, ವಿಜ್ಞಾನ- 69, ಸಮಾಜ ವಿಜ್ಞಾನದಲ್ಲಿ 74 ಅಂಕ ಗಳಿಸಿದ್ದಾಳೆ. ಆದರೆ, ಗಣಿತ ವಿಷಯದಲ್ಲಿ 48 ಅಂಕ ಬಂದಿದ್ದರಿಂದ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಬೇಸರ ಮೂಡಿಸಿತ್ತು. ಹೀಗಾಗಿ ಉತ್ತರ ಪತ್ರಿಕೆಯ ಫೋಟೋ ಕಾಪಿ ತರಿಸಿದಾಗಲೇ ಅಧಿಕಾರಿಗಳ ಲೋಪ ಬೆಳಕಿಗೆ ಬಂದಿದೆ.

ಕುಸುಮಾ ಬಡತನದಲ್ಲೇ ಬೆಳೆದಿದ್ದರೂ, ಓದಿನಲ್ಲಿ ಚುರುಕಾಗಿದ್ದಳು. ಹೀಗಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರವೇಶ ಸಿಕ್ಕಿತ್ತು. ಅಲ್ಲೂ ಓದಿನಲ್ಲಿ ಮುಂದಿದ್ದ ಬಾಲೆ, ಈ ಬಾರಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ.90 ರಷ್ಟು ಅಂಕ ಗಳಿಸುವ ಛಲ ಹೊಂದಿದ್ದಳು. ಆದರೆ, ಪರೀಕ್ಷಾ ಸಂದರ್ಭದಲ್ಲಿ ಎದುರಾದ ಲಾಕ್‍ಡೌನ್ ಪರಿಣಾಮ ಸ್ವಗ್ರಾಮಕ್ಕೆ ಮರಳಿದ್ದಳು. ಲಾಕ್‍ಡೌನ್ ವೇಳೆ ಸ್ಥಳೀಯ ಸರಕಾರಿ ಶಾಲೆ ಮುಖ್ಯೋಪಧ್ಯಾಯರ ಮಾರ್ಗದರ್ಶನದಲ್ಲಿ ಪರೀಕ್ಷೆಗೆ ಸಾಕಷ್ಟು ಸಿದ್ಧತೆ ನಡೆಸಿದ್ದಳು. ಸರಕಾರದ ನಿರ್ದೇಶನದಂತೆ ಸ್ಥಳೀಯ ಗದಗ ಹೊರವಲಯದ ಬ್ರೈಟ್ ಹ್ಯಾರಿಝೋನ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಎದುರಿಸಿದ್ದಳು. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ನಿರೀಕ್ಷಿಸಿದ್ದ ಕುಸುಮಾಗೆ ಗಣಿತ ವಿಷಯದ ಅಂಕಗಳು ಆಘಾತ ಮೂಡಿಸಿತ್ತು. ಪರಿಣಾಮ ಒಂದೆರೆಡು ದಿನ ಖಿನ್ನತೆಗೆ ಒಳಗಾಗಿದ್ದಳು. ಆದರೆ, ಸ್ಥಳೀಯ ಸರಕಾರಿ ಶಾಲೆಯ ಶಿಕ್ಷಕರೊಬ್ಬರು ಧೈರ್ಯ ತುಂಬಿ, ಪರೀಕ್ಷಾ ಮಂಡಳಿಯಿಂದ ಗಣಿತ ವಿಷಯದ ಉತ್ತರ ಪತ್ರಿಕೆಯ ಫೋಟೋ ಕಾಪಿ ತರಿಸಿದ್ದು, 26 ಅಂಕಗಳು ಕಡಿಮೆ ಯಾಗಿವೆ ಎಂಬುದು ಗೊತ್ತಾಗಿದೆ. ಪರೀಕ್ಷೆಯಲ್ಲಿ ಕುಸುಮಾ ಅವರು 54 ಅಂಕ ಪಡೆದಿದ್ದಾಳೆ ಎಂದು ಉತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಿದೆ. ಆದರೆ, ಅಂಕಪಟ್ಟಿಯಲ್ಲಿ ಇಂಟರ್ನಲ್ 20, ಎಕ್ಸಟ್ರನಲ್ 28 ಸೇರಿದಂತೆ ಒಟ್ಟು 48 ಅಂಕಗಳನ್ನು ತಪ್ಪಾಗಿ ನಮೋದಿಸಿದ್ದರಿಂದ ಗೊಂದಲ ಸೃಷ್ಟಿಸಿಯಾಗಿದೆ. ಇದನ್ನು ಸರಿಪಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಗ್ರಾಮೀಣ ಮತ್ತು ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದರೂ, ಯಾವೊಬ್ಬ ಅಧಿಕಾರಿಯೂ ಸ್ಪಂದಿಸಿಲ್ಲ. ಬದಲಾಗಿ ಪರೀಕ್ಷಾ ಮಂಡಳಿಗೆ ಅರ್ಜಿ ಬರೆಯರೆಯಿರಿ, ರೀ-ಕೌಂಟಿಂಗ್‍ಗೆ ಅರ್ಜಿ ಹಾಕಿ ಎಂದು ಪುಕ್ಕಟೆ ಸಲಹೆಯಿತ್ತು, ಸಾಗಹಾಕಿದ್ದಾರೆ. ಅಧಿಕಾರಿಗಳು ತಪ್ಪು ಮಾಡಿ, ವಿದ್ಯಾರ್ಥಿಗಳನ್ನು ಅಲೆಯುವಂತೆ ಮಾಡುವುದು ಎಷ್ಟು ಸರಿ ಎಂಬುದು ಬಾಲಕಿಯ ಕುಟುಂಬಸ್ಥರ ಪ್ರಶ್ನೆಯಾಗಿದೆ.

-ಮಹಾಲಿಂಗೇಶ್ ಹಿರೇಮಠ

LEAVE A REPLY

Please enter your comment!
Please enter your name here

- Advertisment -

Most Popular

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

ಅಪರಿಚಿತ ವ್ಯಕ್ತಿ ಮರದ ತುದಿಗೇರಿ ನೇಣಿಗೆ ಶರಣು!

ವಿಜಯಪುರ : ವ್ಯಕ್ತಿಯೋರ್ವ ಮರದ ತುದಿಗೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದಲ್ಲಿ ‌ನಡೆದಿದೆ. ನಗರದ ಐನಾಪುರ ಕ್ರಾಸ್ ಬಳಿ ಇರುವ ಅರಳಿ ಮರದ ತುದಿಗೇರಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಅಂದಾಜು 50...

Recent Comments