Homeಲೈಫ್ ಸ್ಟೈಲ್ಫ್ಯಾಶನ್ಕನ್ನಡತಿ ಮುಡಿಗೆ ಮಿಸ್​ ಇಂಡಿಯಾ ಕಿರೀಟ!

ಕನ್ನಡತಿ ಮುಡಿಗೆ ಮಿಸ್​ ಇಂಡಿಯಾ ಕಿರೀಟ!

ಕರ್ನಾಟಕದ ಬೆಡಗಿ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದ್ದಾರೆ. ಬೀದರಿನ ಧುಮ್ಮಸೂರು ಎಂಬ ಕುಗ್ರಾಮದ ಚೆಲುವೆ ನಿಶಾ ತಾಳಂಪಳ್ಳಿ ಮಿಸ್​ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಕನ್ನಡತಿ.
ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಮಿಸ್ ಇಂಡಿಯಾ ಇಂಟರ್​ನ್ಯಾಷನಲ್ ಸ್ಪರ್ಧೆಯಲ್ಲಿ ನಿಶಾ ಮಿಂಚಿದ್ರು. ನವೆಂಬರ್ 18ರಂದು ನಡೆದ ಫೈನಲ್​ನಲ್ಲಿ 30 ಮಂದಿ ಮಾಡೆಲ್​ಗಳ ಜೊತೆ ಸ್ಪರ್ಧಿಸಿ, ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದ್ರು.
ನಿಶಾ ತಾಳಂಪಳ್ಳಿ ಹುಮನಾಬಾದ್, ಬೀದರ್ ನಲ್ಲಿ ವಿದ್ಯಾಭ್ಯಾಸ ಮುಗಿಸಿ, ಹೈದರಾಬಾದ್ ನಲ್ಲಿ ಡಿಪ್ಲೋಮಾ ಇನ್ ಏವಿಏಷನ್ ಕಲಿತಿದ್ದಾರೆ. ಬಳಿಕ ಒಂದು ತಿಂಗಳ ಮಾಡೆಲಿಂಗ್ ತರಬೇತಿ ಪಡೆದಿದ್ದರು. ಈಗ ಮಿಸ್​ ಇಂಡಿಯಾ ಆಗುವ ಮೂಲಕ ಮಾಡೆಲಿಂಗ್ ಕ್ಷೇತ್ರದಲ್ಲಿ ಮಹತ್ವದ ಸಾಧನೆಯೊಂದನ್ನು ಮಾಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments