Tuesday, January 18, 2022
Powertv Logo
Homeದೇಶಹಿಂದೂ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಭೀಕರ ಕೊಲೆ: ಪಾಕಿಸ್ತಾನ

ಹಿಂದೂ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಭೀಕರ ಕೊಲೆ: ಪಾಕಿಸ್ತಾನ

ಪಾಕಿಸ್ತಾನ : ಪಾಕಿಸ್ತಾನದ ಶೆರಾಕೋಟ್‌ನಲ್ಲಿ ಎಂಟು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಲಾಗಿದೆ. ಸ್ಥಳೀಯರು ಅವರ ದೇಹವನ್ನು ನಿರ್ಮಾಣ ಹಂತದಲ್ಲಿರುವ ಕ್ವಾಟರ್ಸ್​ನಲ್ಲಿ ಗುರುತಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಬಾಲಕ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಆತನ ಮನೆಯ ಹೊರಗೆ ಅಪಹರಿಸಲಾಗಿದೆ. ಅಪರಾಧವನ್ನು ಮರೆಮಾಚಲು ಲೈಂಗಿಕವಾಗಿ ಹಲ್ಲೆ ನಡೆಸಲಾಯಿತು ಮತ್ತು ನಂತರ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಶವದ ಬಗ್ಗೆ ಸ್ಥಳೀಯ ಹುಡುಗನಿಂದ ಮಾಹಿತಿ ಪಡೆದ ಇಕ್ಬಾಲ್ ಟೌನ್ ವಿಭಾಗದ ಪೊಲೀಸ್ ಅಧೀಕ್ಷಕ(ಎಸ್‌ಪಿ) ಉಮರ್ ಫಾರೂಕ್ ಮತ್ತು ಪೊಲೀಸ್ ತಂಡವು ಅಪರಾಧ ಸ್ಥಳಕ್ಕೆ ಭೇಟಿ ನೀಡಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments