ಬೆಂಗಳೂರು: ರಾಜ್ಯದ ಕೊರೊನಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ತಂದೆಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ಟ್ಟೀಟ್ಮೂಲಕ ಮಾಹಿತಿ ನೀಡಿರುವ ಸಚಿವ ಡಾ. ಕೆ ಸುಧಾಕರ್, “ನನ್ನ ತಂದೆಯವರ ಕೋವಿಡ್ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಕುಟುಂಬದ ಇತರೆ ಸದಸ್ಯರ ವರದಿಗಾಗಿ ಆತಂಕದಿಂದ ಕಾಯುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ,” ಎಂದಿದ್ದಾರೆ.
82 ವರ್ಷದ ಪಿ.ಎನ್.ಕೇಶವರೆಡ್ಡಿ ಜಿಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಮೂಲತಃ ಶಿಕ್ಷಕರಾಗಿದ್ದ ಕೇಶವರೆಡ್ಡಿ, ನಿವೃತ್ತಿಯ ಬಳಿಕ ರಾಜಕಾರಣದಲ್ಲಿ ತೊಡಗಿಸಿಕೊಂಡು ಎರಡು ಬಾರಿ ಜಿಪಂ ಸದ್ಯಸ್ಯರಾಗಿ ಆಯ್ಕೆಗೊಂಡು 2015-16ನೇ ಸಾಲಿನ ಮೊದಲ ಅವಧಿಗೆ ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷರಾಗಿದ್ದು ಹಾಲಿ ಸದಸ್ಯರಾಗಿದ್ದಾರೆ.