ಬಳ್ಳಾರಿ : ಅರಣ್ಯ ಸಚಿವ, ಬಳ್ಳಾರಿ ಜಿಲ್ಲೆ ಕೊವಿಡ್ ಉಸ್ತುವಾರಿ ಆನಂದ್ ಸಿಂಗ್ ಅವರಿಗೆ ಕೊರೋನಾ ಸೋಂಕು ತಗುಲಿದೆ.
ಶುಕ್ರವಾರ ಸ್ವಯಂ ಪ್ರೇರಿತರಾಗಿ ಆನಂದ್ ಸಿಂಗ್ ಕೊವಿಡ್ ಟೆಸ್ಟ್ ಮಾಡಿಸಿದ್ದರು. ಅದರ ವರದಿ ಶನಿವಾರ ರಾತ್ರಿ ಸಿಕ್ಕಿದ್ದು, ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಅವರಿಗೆ ರೋಗ ಲಕ್ಷಣ ಕಂಡುಬಂದಿಲ್ಲ. ಹೀಗಾಗಿ ಹೊಸಪೇಟೆಯ ತಮ್ಮ ನಿವಾಸದಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ.
ಆನಂದ್ ಸಿಂಗ್ ಬಳ್ಳಾರಿಯ ಕೊವಿಡ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಕೊರೋನಾ ಸೋಂಕಿತರ ವಾರ್ಡ್ ಒಳಗೆ ಹೋಗಿ ಬಂದಿದ್ದರು. ಇತ್ತೀಚೆಗೆ ಅವರ ಕಾರು ಚಾಲಕಗೆ ಕೊರೋನಾ ದೃಢಪಟ್ಟಿತ್ತು.