Monday, January 17, 2022
Powertv Logo
Homeದೇಶಕೆಂಪು ಏಡಿಗಳ ಪಯಣಕ್ಕೆ ರೋಡ್​ಗಳನ್ನೆ ಬಂದ್​ ಮಾಡಿದ ದೇಶವೊಂದರ ಸರ್ಕಾರ

ಕೆಂಪು ಏಡಿಗಳ ಪಯಣಕ್ಕೆ ರೋಡ್​ಗಳನ್ನೆ ಬಂದ್​ ಮಾಡಿದ ದೇಶವೊಂದರ ಸರ್ಕಾರ

ಅಮೆರಿಕಾ : ಸಾಧರಣವಾಗಿ ಜನ ಸಮಾನ್ಯರು ಗಾಡಿಯಲ್ಲಿ ಓಡಾಡುವಾಗ ಕೋಳಿ, ಕುರಿ, ನಾಯಿ, ಹಸುಗಳ ಗುಂಪು ಹೀಗೆ ಹಲವು ಪ್ರಾಣಿಗಳು ಅಡ್ಡ ಬರುತ್ತವೆ. ಅದ್ರಲ್ಲೂ ನಮ್ಮಲ್ಲಿ ಮಾತ್ರ ಈ ಸಮಸ್ಯೆಗೆ ಯಾವುದೇ ರೀತಿಯಲ್ಲಿ ಕೊರತೆಯಿಲ್ಲ ಯಾಕಂದ್ರೆ ನಮ್ಮಲ್ಲಿ ಸಾಕಷ್ಟು ಜನ ಪ್ರಾಣಿ ಸಾಕಾಣೆ ಮಾಡೋದ್ರ ಜೊತೆಗೆ ಅವುಗಳನ್ನ ಬೇಕಾ ಬಿಟ್ಟಿಯಾಗಿ ರಸ್ತೆಗೆ ಬಿಡುವವರ ಸಂಖ್ಯೆ ಕೂಡ ಹೆಚ್ಚಿದೆ. ಹೀಗಾಗಿ ನಮ್ಮಲ್ಲಿ ಕೆಲವೊಮ್ಮೆ ಟ್ರಾಫಿಕ್​ ಜಾಮ್​, ಅಥವಾ ರಸ್ತೆಯಲ್ಲಿ ಸಾಗುವಾಗ ಪ್ರಾಣಿಗಳಿಂದ ಕಿರಿಕಿರಿ ಉಂಟಾಗೋದು ಸಾಮನ್ಯವಾಗಿದೆ ಆದ್ರೆ ಈ ಪ್ರಾಣಿಗಳ ತೊಂದ್ರೆ ಕೆಲ ಕಾಲ ಇದ್ದು ಆ ನಂತರ ಯತಾ ರೀತಿಯಾಗಿ ಪ್ರಯಾಣವನ್ನ ನಡೆಸಬಹುದು. ಆದ್ರೆ ಇದೊಂದು ರಾಷ್ಟ್ರದಲ್ಲಿ ಮಾತ್ರ ಇಡೀ ರಸ್ತೆಗಳನ್ನ ಕೆಂಪು ಏಡಿಗಳು ಆವರಿಸಿಕೊಂಡಿದ್ದು ಇದೀಗ ಈ ಕೆಂಪು ಏಡಿಗಳಿಂದ ಹಲವು ರಸ್ತೆಗಳನ್ನ ಬಂದ್​ ಮಾಡಲಾಗಿದೆ.

ಸಾಧರಣವಾಗಿ ಏಡಿಗಳು ಎಲ್ಲಾ ಗದ್ದೆ, ಸಾಗರ, ಕೆರೆ, ತೋಟಗಳ ಬಳಿ ಕಂಡು ಬರುತ್ತವೆ.. ಸತ್ತ ಪ್ರಾಣಿಗಳನ್ನೋ ಅಥವಾ ಕೆಲ ಸೀಮಿತ ಹಣ್ಣುಗಳನ್ನ ಮಾತ್ರ ಸೇವಿಸಿ ಬದುಕುವ ಇವು ಸಾಕಷ್ಟು ಜನರ ನೆಚ್ಚಿನ ಆಹಾರ ಕೂಡ ಹೌದು.. ಇನ್ನು ಇಂತಹ ಏಡಿಗಳಲ್ಲಿ ವಿವಿಧ ಜಾತಿಯ ಏಡಿಗಳಿದ್ದು ಅವುಗಳಲ್ಲಿ ಈ ಕೆಂಪು ಏಡಿಯೂ ಒಂದು.. ಹೌದು ಹಿಂದೂ ಮಹಾಸಾಗರದ ಕ್ರಿಸ್ಮಸ್ ದ್ವೀಪ ಮತ್ತು ಕೊಕೊಸ್ ದ್ವೀಪಗಳಲ್ಲಿ ವಾಸಿಸುವ ವಿಶಿಷ್ಟ ಏಡಿ. ದೊಡ್ಡ ಗಾತ್ರದ ಕೆಂಪು ಬಣ್ಣದ ಈ ಏಡಿಗಳು ಸ್ವಲ್ಪ ದಟ್ಟತೆಯಿಂದ ಕೂಡಿದ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಸಾಧರಣವಾಗಿ ಬೇಸಿಗೆಯಲ್ಲಿ ಬಿಲ ತೋಡಿ ವಾಸಿಸುತ್ತಾ ಬಳಿಕ, ಮಳೆಗಾಲ ಪ್ರಾರಂಭವಾಗ್ತಾ ಇದ್ದ ಹಾಗೆ ಬಿಲದಿಂದ ಹೊರಗೆ ಬರೋ ಈ ಕೆಂಪು ಏಡಿಗಳು ಸಂತಾನೋತ್ಪತ್ತಿಗಾಗಿ ಸಾಗರ ತೀರಕ್ಕೆ ತೆರಳುತ್ತವೆ.

ಸಾಗರ ತೀರದಲ್ಲಿರುವ ಗಂಡು ಏಡಿಗಳು ಬಿಲ ತೋಡಿರುತ್ತವೆ ನಂತರ ಅಲ್ಲಿಗೆ ಬರುವ ಹೆಣ್ಣು ಏಡಿಗಳು ಪರಸ್ಪರ ಕೂಡಿದ ನಂತರ ಗಂಡು ಏಡಿಗಳು ತೆರಳುತ್ತವೆ. ಅಲ್ಲೇ ಇರುವ ಹೆಣ್ಣು ಏಡಿಗಳು 10 ರಿಂದ 15 ದಿನಗಳವರೆಗೆ ಅದೇ ಬಿಲದಲ್ಲಿದ್ದು ಹೊಟ್ಟೆಯ ಚೀಲದಲ್ಲಿರುವ ಮೊಟ್ಟೆಗಳಿಗೆ ಕಾವು ಕೊಡುತ್ತವೆ. ನಂತರ ಹೆಣ್ಣು ಏಡಿಗಳು ಸಮುದ್ರದಲ್ಲಿ ಆ ಮೊಟ್ಟೆಗಳನ್ನು ವಿಸರ್ಜಿಸುತ್ತವೆ. ಹೀಗೆ ಸಮುದ್ರ ಸ್ಪರ್ಶವಾಗುತ್ತಿದ್ದಂತೆಯೆ ಮೊಟ್ಟೆ ಒಡೆದು ಮರಿಗಳು ಹೊರಬರುತ್ತವೆ. ಈ ಮರಿಗಳು ಮುಂದಿನ ಹದಿನೈದು ದಿನಗಳ ಕಾಲ ಸಮುದ್ರದಲ್ಲಿ ಬೆಳೆದು, ನಂತರ ಮತ್ತೆ ಕಾಡಿಗೆ ವಲಸೆ ಹೊರಡುತ್ತವೆ.. ಇದೀಗ ಇದೇ ವಲಸೆ ಆಸ್ಟ್ರೇಲಿಯದ ಜನರಿಗೆ ಉಸಿರುಗಟ್ಟೋ ಹಾಗೆ ಮಾಡಿದ್ದು ಈ ಬಾರಿ ಆಸ್ಟ್ರೇಲಿಯ ಸರ್ಕಾರ ಹಲವು ರಸ್ತೆಗಳನ್ನ ಬ್ಲಾಕ್​ ಮಾಡಿ ಏಡಿಗಳ ವಲಸೆಗೆ ಅನುವು ಮಾಡಿ ಕೊಟ್ಟಿದೆ..

ಇದೀಗ ಇದೇ ಕಾರಣಕ್ಕೆ ಆಸ್ಟ್ರೇಲಿಯದ ಬಹುತೇಕ ರಸ್ತೆಗಳಲ್ಲಿ ಕೆಂಪು ಏಡಿಗಳ ದರ್ಶನವಾಗ್ತಾ ಇದ್ದು, ಇದು ಆಸ್ಟ್ರೇಲಿಯದ ಕ್ರಿಸ್​ಮಸ್​ ದ್ವೀಪಕ್ಕೆ ಬಂದ ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡ್ತಾ ಇದೆ. ಎಣಿಕೆಗೆ ಸಿಗದೇ ಇರುವಷ್ಟು ಕೆಂಪು ಏಡಿಗಳು ಒಟ್ಟಿಗೆ ಬಂದು ನಗರದ ಎಲ್ಲಾ ರಸ್ತೆಗಳನ್ನ ಪೂರ್ತಿಯಾಗಿ ಆವರಿಸಿಕೊಂಡು ಯಾವುದೇ ವಾಹನ ಸವಾರರಿಗೆ ಜಾಗವನ್ನ ಕೊಡದೆ ರಸ್ತೆಯ ಮೇಲೆ ಬಿಡದೇ ಆಕ್ರಮಿಸಿಕೊಂಡಿರುವ ದೃಶ್ಯ ಇದೀಗ ಅಸ್ಟ್ರೇಲಿಯದಲ್ಲಿ ಸರ್ವೆ ಸಾಮಾನ್ಯವಾಗಿ ಕಂಡು ಬರ್ತಾ ಇದೆ.

ಇದೀಗ ಸ್ಥಳೀಯರು ಚಿತ್ರೀಕರಿಸಿದ ಮತ್ತು ಹಂಚಿಕೊಂಡ ವಿಡಿಯೋಗಳಿಂದ ಈ ಪುಟ್ಟ ಜೀವಿಗಳು ಕಾಡು ತಲುಪೋದಕ್ಕೆ ರಸ್ತೆಗಳು ಮತ್ತು ಬಂಡೆಗಳನ್ನು ದಾಟಿಕೊಂಡು ಹೋಗುತ್ತಿರೋದನ್ನ ನೋಡಿ ಸಾಕಷ್ಟು ಜನ ದಿಗ್ಬ್ರಮೆಗೊಂಡಿರೋದಂತು ಸುಳ್ಳಲ್ಲ. ಈ ವರ್ಷ ಕೆಂಪು ಏಡಿಗಳ ವಲಸೆ ಹೆಚ್ಚು ಅಂತ ಅಸ್ಟ್ರೇಲಿಯ ಸರ್ಕಾರ ಹೇಳ್ತಾ ಇದ್ದು, ಈ ಬಾರಿ ಅಂದಾಜು ಅಂದ್ರೆ ಸುಮಾರು 50 ಮಿಲಿಯನ್ ಏಡಿಗಳು ಮಳೆಯ ನಂತರ ಕಾಡಿನಿಂದ ಹಾದು ಹೋಗ್ತಾ ಇದೆ ಅಂತ ಹೇಳಲಾಗ್ತಾ ಇದೆ. ಇನ್ನು ಇದು ಪ್ರತೀ ವರ್ಷ ಅಕ್ಟೋಬರ್ ಮತ್ತು ನವೆಂಬರ್​ನಲ್ಲಿ ಈ ಕೆಂಪು ಏಡಿಗಳ ವಲಸೆ ನಡೀತಾ ಇದ್ದು, ಇದುವರೆಗು ಕೂಡ ಇಷ್ಟು ಪ್ರಮಾಣದ ಏಡಿಗಳು ಕಂಡು ಬಂದಿಲ್ಲ ಅಂತ ಜನ ಸಾಮಾನ್ಯರು ಅಭಿಪ್ರಾಯ ಪಟ್ಟಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments