ಸರ್ಜಾ-ಶ್ರುತಿ ವಾರ್ ಗೆ ಟ್ವಿಸ್ಟ್ ; ಈ ರಂಪಾಟದ ಹಿಂದಿದೆ ಇಬ್ಬರು ಹಿರಿಯ ನಟರ ಕೈವಾಡ..?

0
196

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರೋ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಕ್ಷಣಕ್ಕೊಂದು ಟ್ವಿಸ್ಟ್ ಪಡೀತಿದೆ. ಸದ್ಯ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್ ಸರ್ಜಾ ಅವ್ರ ಆಪ್ತ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ.

 ”ಶ್ರುತಿ ಮಾಡಿರೋ ಆರೋಪದ ಹಿಂದೆ ಕನ್ನಡ ಚಿತ್ರರಂಗದ ಇಬ್ಬರು ಹಿರಿಯ ನಟರು ಇದ್ದಾರೆ” ಅಂತ ಪ್ರಶಾಂತ್ ಹೇಳಿದ್ದಾರೆ. ಇದೊಂದು ರಾಷ್ಟ್ರದ್ರೋಹದ ಕೇಸ್. ಚೆನ್ನೈನಲ್ಲಿ ಅರ್ಜುನ್ ಸರ್ಜಾ ಅವ್ರು ಆಂಜನೇಯ ಸ್ವಾಮಿ ದೇವಸ್ಥಾನ ಕಟ್ಟಿಸ್ತಿದ್ದಾರೆ ಇದನ್ನು ಸಹಿಸಲಾಗದೆ ಸರ್ಜಾ ವಿರುದ್ಧ ಆರೋಪ ಮಾಡಲಾಗಿದೆ. ಹಿಂದೂ ಭಾವನೆಗಳಿಗೆ ದಕ್ಕೆ ತರುವ ಮತ್ತು ಸರ್ಜಾ ಫ್ಯಾಮಿಲಿಯ ನೆಮ್ಮದಿ ಹಾಳು ಮಾಡೋಕೆ ಹೀಗೆ ಮಾಡಲಾಗುತ್ತಿದೆ. ಅರ್ಜುನ್ ವಿರುದ್ಧ ಅಪಪ್ರಚಾರಕ್ಕೆ ದುಡ್ಡು ಕೊಡಲಾಗ್ತಿದೆ. ದುಡ್ಡು ಕೊಟ್ಟು ಡಿಜಿಟಲ್ ಮಾರ್ಕೆಟಿಂಗ್ ಮಾಡ್ತಿದ್ದಾರೆ. 400ಪುಟಗಳ ಮಾಹಿತಿ ಸಮೇತ ಸೈಬರ್ ಕ್ರೈಮ್ ಗೆ ದೂರು ನೀಡಲಾಗಿದೆ ಅಂದಿದ್ದಾರೆ. ಇಬ್ಬರು ಹಿರಿಯ ನಟರು ಶ್ರುತಿಯನ್ನು ಮುಂದಿಟ್ಟುಕೊಂಡು ಹೀಗೆ ಮಾಡ್ತಿದ್ದಾರೆ ಅಂದಿರೋ ಪ್ರಶಾಂತ್ ಆ ಇಬ್ಬರು ಯಾರು ಅಂತ ಮಾತ್ರ ಬಾಯ್ಬಿಟ್ಟಿಲ್ಲ.

 

LEAVE A REPLY

Please enter your comment!
Please enter your name here