ಕಾಲೇಜಲ್ಲಿ ಹುಡುಗರ ಮೊಬೈಲ್ ಪುಡಿ ಪುಡಿ – ಹುಡುಗಿಯರ ಕೇಕೆ..!

0
440

ಉತ್ತರ ಕನ್ನಡ : ಕಾಲೇಜು ಕ್ಲಾಸ್​ ರೂಮ್​ನಲ್ಲಿ ಎಲ್ಲರ ಎದುರು ತಮ್ಮ ಮೊಬೈಲ್ ಪುಡಿ ಪುಡಿ ಆಗ್ತಿದೆ ಅನ್ನೋ ಸಂಕಟ ಹುಡುಗರಿಗೆ…! ಹುಡುಗರ ಮೊಬೈಲ್​ ಪುಡಿ ಪುಡಿ ಆಗುವುದನ್ನು ಕಂಡು ಹುಡುಗಿಯರ ಕೇಕೆ..! ಇಂಥಾ ಒಂದು ಸೋಜಿಗ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಎಂಇಎಸ್​ ಚೈತನ್ಯ ಕಾಲೇಜಲ್ಲಿ.
ಹೌದು, ಕಾಲೇಜು ಆವರಣದಲ್ಲಿ ಮೊಬೈಲ್ ನಿಷೇಧವಿದ್ರೂ ವಿದ್ಯಾರ್ಥಿಗಳು ಮೊಬೈಲ್​ ಬಳಿಸಿದ್ದಕ್ಕೆ ಪ್ರಿನ್ಸಿಪಾಲ್ ಕೊಟ್ಟ ಪನಿಶ್​ಮೆಂಟ್ ಪರಿ ಇದು. ಬಹುಶಃ ಹಿಂದೆ ಮೊಬೈಲ್ ತರದಂತೆ ಸಾಕಷ್ಟು ಬಾರಿ ಎಚ್ಚರಿಸಿದ್ದರೇನೋ..?! ಹುಡುಗರು ಅದಕ್ಕೆ ಕ್ಯಾರೇ ಎನ್ನದೆ ಕದ್ದು ಮುಚ್ಚಿ ಕಾಲೇಜಲ್ಲಿ ಮೊಬೈಲ್ ಬಳಸ್ತಿದ್ದರು. ಹೀಗೆ ಇತ್ತೀಚೆಗೆ ಕಾಲೇಜು ಆವರಣದಲ್ಲಿ ಮೊಬೈಲ್ ತಪಾಸಣೆ ವೇಳೆ 16 ಮೊಬೈಲ್​ಗಳು ಸಿಕ್ಕಿವೆ. ಈ ಮೊಬೈಲ್​ಗಳನ್ನು ಪ್ರಾಂಶುಪಾಲರು ಕ್ಲಾಸ್​ ರೂಮ್​ನಲ್ಲಿ ಡೇಬಲ್​ ಮೇಲಿಟ್ಟು ಸುತ್ತಿಗೆ ತಗೊಂಡು ಪುಡಿ ಪುಡಿ ಮಾಡಿದ್ದಾರೆ. ಮೊಬೈಲ್ ಪುಡಿ ಪುಡಿ ಮಾಡುವ ದೃಶ್ಯಕಂಡು ವಿದ್ಯಾರ್ಥಿನಿಯರು ಕೇಕೆ ಹಾಕಿದ್ದಾರೆ.. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಕಾಲೇಜಲ್ಲಿ ಹುಡುಗರ ಮೊಬೈಲ್ ಪುಡಿ ಪುಡಿ – ಹುಡುಗಿಯರ ಕೇಕೆ..!

ಕಾಲೇಜಲ್ಲಿ ಹುಡುಗರ ಮೊಬೈಲ್ ಪುಡಿ ಪುಡಿ – ಹುಡುಗಿಯರ ಕೇಕೆ..!

Posted by Powertvnews on Friday, September 13, 2019

LEAVE A REPLY

Please enter your comment!
Please enter your name here