Home ದೇಶ-ವಿದೇಶ ಮೋದಿ ಮಾಸ್ಕ್​ ಧರಿಸಿ 2000 ಕೆ.ಜಿ ಲಡ್ಡು ತಯಾರಿ..!

ಮೋದಿ ಮಾಸ್ಕ್​ ಧರಿಸಿ 2000 ಕೆ.ಜಿ ಲಡ್ಡು ತಯಾರಿ..!

ಮುಂಬೈ: ಚುನಾವಣೋತ್ತರ ಸಮೀಕ್ಷೆ ವರದಿಗಳು ಪ್ರಕಟವಾಗಿದ್ದು, ಬಿಜೆಪಿ ಬಹಮತ ಪಡೆದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಅಂತ ಹೆಚ್ಚಿನ ವರದಿಗಳು ತಿಳಿಸಿದೆ. ಮಹಾರಾಷ್ಟ್ರದ ಬಿಜೆಪಿ ಅಭ್ಯರ್ಥಿಯೊಬ್ಬರು ಈಗಾಗಲೇ ಸಂಭ್ರಮಾಚರಣೆಯ ತಯಾರಿಯಲ್ಲಿದ್ದಾರೆ.

ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಎಂಬವರು 2000 ಕೆ.ಜಿ ಲಡ್ಡು ತಯಾರಿಗೆ ಆರ್ಡರ್​ ನೀಡಿದ್ದಾರೆ. ಈ ಲಡ್ಡುಗಳನ್ನು 23ರಂದು ಹಂಚಲೆಂದೇ ತಯಾರಿಸಲಾಗುತ್ತಿದೆ. ಆರ್ಡರ್ ಪಡೆದುಕೊಂಡಿರೋ ವಿವೇದಂ ಸ್ವೀಟ್ಸ್ ಕೇಂದ್ರದಲ್ಲಿ ಕಾರ್ಮಿಕರು ಮೋದಿ ಮಾಸ್ಕ್ ಧರಿಸಿ ಉತ್ಸಾಹದಲ್ಲಿ ಲಡ್ಡು ತಯಾರಿಯಲ್ಲಿ ತೊಡಗಿದ್ದಾರೆ.

“ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಅವರಿಂದ ಆರ್ಡರ್ ಲಭಿಸಿದೆ. 2000 ಕೆಜಿ ಲಡ್ಡು ಮಾಡಲು ಹೇಳಿದ್ದು, ಇನ್ನೂ ಹೆಚ್ಚು ಆರ್ಡರ್ ಲಭಿಸುವ ಸಾಧ್ಯತೆ ಇದೆ. ನಮ್ಮ ಕಾರ್ಮಿಕರೂ ಮೋದಿ ಅಭಿಮಾನಿಗಳಾಗಿರುವುದರಿಂದ ಅವರ ಮಾಸ್ಕ್ ಧರಿಸಿಯೇ ಲಡ್ಡು ತಯಾರಿಸುತ್ತಿದ್ದಾರೆ” ಅಂತ ಸ್ವೀಟ್​ ಶಾಪ್ ಮಾಲೀಕ ಭರತ್ ಭಾಯ್ ಹೇಳಿದ್ದಾರೆ.

“ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ನಂತರ ಕಾಂಗ್ರೆಸ್ ಯಾವುದೇ ಸಿಹಿ ತಿಂಡಿ ತಯಾರಿಗೆ ಆರ್ಡರ್ ನೀಡಿಲ್ಲ. ಸಮೀಕ್ಷೆಯೇ ನಿಜವಾದರೆ ಅವರು ಇನ್ನೂ ಯಾವುದೇ ಆರ್ಡರ್ ನೀಡಲು ಸಾಧ್ಯವಿಲ್ಲ” ಅಂತ ಹೇಳಿದ್ದಾರೆ. ಗೋಪಾಲ್ ಶೆಟ್ಟಿ ವಿರುದ್ಧ ಕಾಂಗ್ರೆಸ್​ನಿಂದ ಊರ್ಮಿಳಾ ಮಾತೋಂಡ್ಕರ್ ಸ್ಪರ್ಧಿಸಿದ್ದಾರೆ. ಮುಂಬೈ ಉತ್ತರ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದರೂ ಊರ್ಮಿಳಾ ಮಾತೋಂಡ್ಕರ್ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments