ಚಿಕ್ಕಮಗಳೂರು: ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ಗಳು ಭರವಸೆ ಕೊಡೊದೇ ಜಾಸ್ತಿ, ಆದರೆ ಗೆದ್ದ ಮೇಲೆ ಮರೆತು ಬಿಡುತ್ತಾರೆ. ಆದರೆ ಇಲ್ಲೋಬ್ಬ ಗ್ರಾಮ ಪಂಚಾಯತಿ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದ ನಂತರ ತಾನು ಓದಿದ ಶಾಲೆಯನ್ನು ಸ್ವಚ್ಛಗೋಳಿಸಿ, ಶಾಲೆಯ ಅಭಿವೃದ್ಧಿ ಮಾಡಬೇಕು ಎಂದು ಪಣತೊಟ್ಟಿದ್ದಾರೆ.
ಶೃಂಗೇರಿ ತಾಲೂಕಿನ ಕಾವಡಿ ಗ್ರಾಮದ ರಾಘವೇಂದ್ರ ಈ ಬಾರಿ ಗ್ರಾಮ ಪಂಚಾಯತಿ ಚುನಾವಣೆ ಸ್ಪರ್ಧಿಸಿದ್ದರು. ಪ್ರಚಾರದ ವೇಳೆ ನಮ್ಮ ಶಾಲೆಯನ್ನು ಅಭಿವೃದ್ಧಿ ಮಾಡುತ್ತೇನೆ. ಈ ಶಾಲೆ ಮತ್ತೆ ಆರಂಭ ಆಗಬೇಕು ಅಂತ ಕನಸು ಕಂಡಿದ್ದರು. ತಾನು ಓದಿದ ಶಾಲೆ ಮಕ್ಕಳಿಲ್ಲದೇ 10 ವರ್ಷಗಳಿಂದ ಬಂದ್ ಆಗಿತ್ತು. ಚುನಾವಣೆಯಲ್ಲಿ ಗೆದ್ದ ನಂತರ ಶಾಲೆ ಸ್ವಚ್ಛಗೋಳಿಸಿ ಶಾಲೆಯನ್ನು ಶೃಂಗಾರಗೋಳಿಸುತ್ತಿದ್ದಾನೆ. ಈ ಶಾಲೆಗೆ ಸುಮಾರು 70 ವರ್ಷಗಳ ಇತಿಹಾಸ ಇದೆ. ಈ ಶಾಲೆಯಲ್ಲಿ ಎನ್.ಆರ್.ಪುರ ತಾಲೂಕಿನ ಹರಪುರದ ಸ್ವಾಮಿಜೀ ಸಚ್ಚಿದಾನಂದ ಸ್ವಾಮೀಜಿ ಓದಿದ್ದಾರೆ. 70 ವರ್ಷ ಇತಿಹಾಸ ಇರುವ ಈ ಶಾಲೆ ಆರಂಭಕ್ಕೆ ಮುಂದಾಗಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಘವೇಂದ್ರ ತಮ್ಮ ಊರಿನ ಮತ ಕೇಂದ್ರವಾದ ಉಳುವೆಬೈಲು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಮುಂದಾಗಿದ್ದಾರೆ. ಶಾಲೆಯನ್ನು ಮತ್ತೆ ಆರಂಭಿಸಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಮನವಿ ಮಾಡಿದ್ದಾರೆ. ಗೆದ್ದ ನಂತರ ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ಗ್ರಾಮದ ಅಭಿವೃದ್ಧಿಗೆ ಮುಂದಾದ ರಾಘವೇಂದ್ರ ಕಾರ್ಯಕ್ಕೆ ಗ್ರಾಮಸ್ಥರು ಸಹ ಸಂತಸ ವ್ಯಕ್ತಪಡಿಸಿದ್ದಾರೆ.
ಈ ವ್ಯಕ್ತಿಗೆ ಮತ ನೀಡಿದ್ದು, ಸಾರ್ಥಕವಾಯ್ತು ಅಂತ ರಾಘವೇಂದ್ರನ ಕಾರ್ಯಕ್ಕೆ ಯುವಕರು ಕೈ ಜೊಡಿಸಿ ಆದರ್ಶ ಗ್ರಾಮವನ್ನಾಗಿ ಮಾಡುವ ಸಂಕಲ್ಪ ಮಾಡಿದ್ದಾರೆ.
– ಸಚಿನ್ ಶೆಟ್ಟಿ ಚಿಕ್ಕಮಗಳೂರು