Home ಸಿನಿ ಪವರ್ ಚಿರುಗಾಗಿ ಪತ್ನಿ ಮೇಘನಾ ಭಾವನತ್ಮಕ ಸಂದೇಶ..!

ಚಿರುಗಾಗಿ ಪತ್ನಿ ಮೇಘನಾ ಭಾವನತ್ಮಕ ಸಂದೇಶ..!

ಚಿರು ಸರ್ಜಾ ಎಲ್ಲರನ್ನ ಅಗಲಿ ಇಂದಿಗೆ ಹನ್ನೆರಡು ದಿನಗಳಾದವು , ಈ ಸಮಯದಲ್ಲಿ ಅವರ ಕುಟುಂಬ ವರ್ಗ , ಅಭಿಮಾನಿಗಳು ಸಾಕಷ್ಟು ನೋವಿನಲ್ಲಿದ್ದಾರೆ . ಎಲ್ಲರಿಗಿಂತ ಸ್ವಲ್ಪ ಹೆಚ್ಚಾಗಿ ನೋವಿನಲ್ಲಿರೋದು ಅವರ ಪತ್ನಿ ಮೇಘನಾ , ಚಿರು ನೆನಪಿನಲ್ಲಿರುವ ಮೇಘನಾ ಚೀರುಗಾಗಿ ಬರೆದ ಪತ್ರ ಎಂಥವರ ಕಣ್ಣಲ್ಲಿಯೂ ನೀರು ತರಿಸುತ್ತದೆ

”ಚಿರು, ನಾನು ಮತ್ತೆ ಮತ್ತೆ ಪ್ರಯತ್ನಿಸಿದೆ. ಆದರೆ ನಿನಗೆ ಏನನ್ನು ಹೇಳಲು ಬಯಸಿದ್ದೆನೋ ಅದನ್ನು ಅಕ್ಷರಗಳಲ್ಲಿ ಹೇಳಲು ಅಥವಾ ಬರೆಯಲು ಸಾಧ್ಯವಾಗುತಿಲ್ಲ .ನೀನು ನನಗೆ ಏನಾಗಿದ್ದೆ ಅನ್ನೋದನ್ನ ಯಾವ ಪದಗಳೂ ವರ್ಣಿಸಲು ಸಾಧ್ಯವಿಲ್ಲ.  ನೀನು ನನ್ನ ಸ್ನೇಹಿತ, ನನ್ನ ಪ್ರೇಮಿ, ನನ್ನ ಸಂಗಾತಿ, ನನ್ನ ಮಗು, ನನ್ನ ಆತ್ಮವಿಶ್ವಾಸ, ನನ್ನ ಪತಿ, ಈ ಎಲ್ಲದಕ್ಕಿಂತಲೂ ಹೆಚ್ಚು ನೀನು ನನ್ನ ಆತ್ಮ ಚಿರು

ಪ್ರತಿ ಬಾರಿಯೂ ನಾನು ಬಾಗಿಲಿನತ್ತ ಕಣ್ಣು ಹಾಯಿಸುವಾಗಲೆಲ್ಲಾ ಮತ್ತು ನೀನು ‘ನಾನು ಮನೆಗೆ ಬಂದೆ’ ಎಂದು ಕೂಗುತ್ತಾ ಒಳಗೆ ನಡೆದು ಬಾರದೆ ಇರುವುದನ್ನು ನೋಡಿದಾಗ ನನ್ನ ಆತ್ಮದೊಳಗೆ ಅಗಾಧ ನೋವು ಸ್ಫೋಟಿಸುತ್ತದೆ.ಪ್ರತಿ ದಿನವೂ ಪ್ರತಿ ನಿಮಿಷವೂ ನಿನ್ನನ್ನು ಸ್ಪರ್ಶಿಸಲು ಸಾಧ್ಯವಾಗದೆ ಇದ್ದಾಗ ನನ್ನ ಹೃದಯದೊಳಗೆ ಭಾವನೆಗಳು ಮುಳುಗುವಂತೆ ಅನಿಸುತ್ತದೆ. ಸಾವಿರಾರು ಸಾವುಗಳಂತೆ, ನಿಧಾನ ಮತ್ತು ಯಾತನಾಮಯ. ಆದರೆ ಮಾಂತ್ರಿಕತೆಯಂತೆ ನೀನು ನನ್ನ ಸುತ್ತಲೂ ಇದ್ದೀಯ.ಪ್ರತಿ ಬಾರಿ ನಾನು ದುರ್ಬಳಲು ಎನಿಸಿದಾಗ ರಕ್ಷಕ ದೇವತೆಯಂತೆ ನೀನು ನನ್ನ ಸುತ್ತಲೂ ಇರುತ್ತೀಯ. ನೀನು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದಿ ಎಂದರೆ ನನ್ನನ್ನು ನಿನ್ನ ಹಿಂದೆ ಒಂಟಿಯಾಗಿ ಬಿಟ್ಟು ಹೋಗಲು ಸಾಧ್ಯವಿಲ್ಲ. ಸಾಧ್ಯವೇ ನಿನಗೆ?ನಮ್ಮ ಪ್ರೀತಿಯ ಸಂಕೇತವಾದ ನಮ್ಮ ಪುಟಾಣಿ ನನಗೆ ನಿನ್ನ ಅಮೂಲ್ಯ ಕಾಣಿಕೆ. ಈ ಸಿಹಿಯಾದ ಪವಾಡಕ್ಕಾಗಿ ನಾನು ಎಂದೆಂದಿಗೂ ನಿನಗೆ ಋಣಿ. ನಿನ್ನನ್ನು ನಮ್ಮ ಮಗುವಿನ ರೂಪದಲ್ಲಿ ಮತ್ತೆ ಭೂಮಿಗೆ ಮರಳಿ ತರುವ ಗಳಿಗೆಗಾಗಿ ಕಾಯಲು ಸಾಧ್ಯವಾಗುತ್ತಿಲ್ಲ. ನಿನ್ನನ್ನು ಮತ್ತೆ ಹಿಡಿದುಕೊಳ್ಳುವುದನ್ನು ಕಾಯಲಾಗುತ್ತಿಲ್ಲ. ನಿನ್ನ ನಗುವನ್ನು ಮತ್ತೆ ನೋಡಲು ಕಾಯಲಾಗುತ್ತಿಲ್ಲ.ಇಡೀ ಕೊಠಡಿಯನ್ನು ಬೆಳಗಿಸುವ ನಿನ್ನ ಸಾಂಕ್ರಾಮಿಕ ನಗುವನ್ನು ಕೇಳಲು ಕಾಯಲು ಆಗುತ್ತಿಲ್ಲ. ನಾನು ನಿನಗಾಗಿ ಕಾಯುತ್ತಿದ್ದೇನೆ. ಇನ್ನೊಂದು ಕಡೆ ನೀನು ನನಗಾಗಿ ಕಾದಿರು. ನಾನು ಉಸಿರಾಡುವವರೆಗೂ ನೀನು ಜೀವಿಸುತ್ತಿರುತ್ತೀಯ, ನೀನು ನನ್ನೊಳಗೆ ಇದ್ದೀಯ. ಐ ಲವ್ ಯೂ. ನನ್ನ ಚಿರು ಎಂದೆಂದಿಗೂ”ಎಂಬ ಭಾವನಾತ್ಮಕ ಸಂದೇಶವನ್ನ ತಮ್ಮ ಇಂಸ್ಟಾಗ್ರಾಂಮ್​ ನಲ್ಲಿ ಹಂಚಿಕೊಂಡಿದ್ಧಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಕೊರೋನಾಗೆ ಕ್ಯಾರೆ ಅನ್ನದೆ ನೃತ್ಯ ಮಾಡಿ ಧೈರ್ಯ ತುಂಬಿದ ಹೋಟೆಲ್ ಮಾಲಕ

ಉಡುಪಿ : ಕೋರೊನಾ ಬಂದ್ರೆ ನಮ್ಮ ಕಥೆ ಮುಗಿತು ಅನ್ನೋ ಈ ಸಂದರ್ಭದಲ್ಲಿ, ಕೋಟದ ಕೊರೋನಾ ಪಾಸಿಟಿವ್ ವ್ಯಕ್ತಿಯೋರ್ವರು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕೋಟದ ಹೋಟೆಲ್ ಮಾಲಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದ...

ಸಂಬಳ ಕೇಳಿದರೆ ಕೆಲಸದಿಂದ ತೆಗೆಯುತ್ತೇವೆ ! ವಿಮ್ಸ್​​ನಲ್ಲಿ ಇದೆಂಥಾ ಅಮಾನವೀಯತೆ ?

ಬಳ್ಳಾರಿ : ಕಳೆದ ಆರು ತಿಂಗಳಿನಿಂದ ಸಂಬಳವೇ ಸಿಕ್ಕಿಲ್ಲ ಅಂತ ಬಳ್ಳಾರಿಯ ವಿಮ್ಸ್ ನಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿ ಧರಣಿ ಕೂತಿದ್ದಾರೆ. ಕೊರೊನಾ ವಾರಿಯರ್ ಅಂತ ಸರ್ಕಾರ ನಮ್ಮನ್ನ ಕರೆಯುತ್ತೆ. ಆದ್ರೆ ನಮಗೆ...

ಕೊರೋನಾ ಗೆದ್ದ 96 ವೃದ್ಧೆ ಈಗ ಕೊರೋನಾ ರೋಗಿಗಳಿಗೆ ಸ್ಫೂರ್ತಿ

ಚಿತ್ರದುರ್ಗ : ಕೊರೋನಾ ಸೋಂಕಿನ ಭೀತಿ ಎಲ್ಲೆಡೆ ಹಬ್ಬಿದ್ದರೂ, ಆತ್ಮಿವಿಶ್ವಾಸವೊಂದಿದ್ದರೆ ಕೊರೋನಾ ಸೋಂಕಿನಿಂದ ಗುಣವಾಗಬಹುದು ಎನ್ನುವುದಕ್ಕೆ ಈ ವೃದ್ಧೆಯೇ ಸಾಕ್ಷಿ. ಚಿತ್ರದುರ್ಗ  ‌ಜಿಲ್ಲೆಯ ಹಿರಿಯೂರು ಮೂಲದ 96 ವರ್ಷದ ವೃದ್ದೆ ಕರೋನಾ ಸೋಂಕಿನಿಂದ...

ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ, ಪ್ರಕರಣ ದಾಖಲು

ಉಡುಪಿ : ಹೋಮ್ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೋರ್ವರು ನಿಯಮ ಉಲ್ಲಂಘಿಸಿ ಉಡುಪಿಯಿಂದ ಕಾರ್ಕಳ ಪ್ರಯಾಣಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ. ನಿಯಮ ಉಲ್ಲಂಘಿಸಿದ ಕೊಡಂಕೂರು ನಿವಾಸಿ ವಿನಯ್ ಕುಮಾರ್ ಮೇಲೆ ಉಡುಪಿಯ ನಗರ ಠಾಣೆಯಲ್ಲಿ...