ಪ್ರಧಾನಿ ಮೋದಿ ಹಾದಿಯಲ್ಲಿ ಕನ್ನಡತಿ!

0
375

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಹಾದಿಯಲ್ಲಿ ಮಂಗಳೂರಿನ ಯುವತಿಯೊಬ್ಬರು ಹೆಜ್ಜೆ ಇಟ್ಟಿದ್ದಾರೆ! ನಿಮ್ಗೆ ಗೊತ್ತೇ ಇದೆ ಪ್ರಧಾನಿ ನರೇಂದ್ರ ಮೋದಿ ಒಂದು ಟೈಮಲ್ಲಿ ಚಹಾ ಮಾರುತ್ತಿದ್ದವರು. ಇವತ್ತು ವಿಶ್ವದ ಬಹು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರದ ಪ್ರಧಾನಿ. ಇದು ಪ್ರಜಾಪ್ರಭುತ್ವದ ಸೌಂದರ್ಯವೂ ಹೌದು.
ಹಾಗೆಯೇ ಮಂಗಳೂರಿನ ಫುಡ್ ಡೆಲಿವರಿ ಯುವತಿಯೊಬ್ಬರು ರಾಜಕೀಯ ರಂಗ ಪ್ರವೇಶಿಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಚುನಾವಣಾ ಅಖಾಡಕ್ಕಿಳಿಯುವ ಮೂಲಕ ಫುಡ್ ಡೆಲಿವರಿ ಯುವತಿ ಹೊಸ ಇನ್ನಿಂಗ್ಸ್ ಆರಂಭಿಸ್ತಿದ್ದಾರೆ.
ಹೌದು, ಅವರ ಹೆಸ್ರು ಮೇಘನಾ ದಾಸ್. ಓದಿದ್ದು ಬಿ ಎ ಪದವಿ. ಜೀವನೋಪಾಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಫುಡ್ ಡೆಲಿವಿರಿ ಕೆಲಸ. ಈ ಕೆಲಸದ ಜೊತೆ ಜೊತೆಗೆ ಒಂದಿಷ್ಟು ಸಮಾಜ ಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದು, ಪಾಲಿಕೆ ಚುನಾವಣೆ ಮೂಲಕ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮೇಘನಾ ಮಣ್ಣಗುಡ್ಡೆ ವಾರ್ಡಿನಿಂದ ಕಣಕ್ಕಿಳಿದಿದ್ದಾರೆ.
ಈ ಬಗ್ಗೆ ಖುಷಿ ಹಂಚಿಕೊಂಡಿರೋ ಅವರು, `ರಾಜಕೀಯದ ಬಗ್ಗೆ ನಾನು ಯಾವತ್ತೂ ಆಲೋಚನೆ ಮಾಡಿರ್ಲಿಲ್ಲ. ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದೆ. ಕಾಂಗ್ರೆಸ್ ಪಕ್ಷದ ನಾಯಕರು ನನ್ನನ್ನು ಗುರುತಿಸಿ ಟಿಕೆಟ್ ನೀಡಿದ್ದಾರೆ. ನಿರೀಕ್ಷಿಸದೆ ದೊರಕಿದ ಅವಕಾಶವನ್ನು ಬಳಸಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನನ್ನು ಗೆಲ್ಲಿಸಿ ” ಅಂತ ಮತದಾರರಲ್ಲಿ ಮನವಿ ಮಾಡಿದ್ದಾರೆ. ಸದ್ಯ ಫುಡ್ ಡೆಲಿವರಿ ಕೆಲಸಕ್ಕೆ ರಜೆ ಹಾಕಿರುವ ಮೇಘನಾ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ,

LEAVE A REPLY

Please enter your comment!
Please enter your name here