Homeಸಿನಿ ಪವರ್ಕಾಲಿವುಡ್ಅಣ್ಣಾವ್ರ ಫ್ಯಾಮಿಲಿಯಲ್ಲಿರೋ ಹಾರ್ಟ್​ ಪ್ರಾಬ್ಲಂ ರೀವಿಲ್ ಬಿಚ್ಚಿಟ್ಟ : ಮೆಗಾಸ್ಟಾರ್ ಚಿರಂಜೀವಿ

ಅಣ್ಣಾವ್ರ ಫ್ಯಾಮಿಲಿಯಲ್ಲಿರೋ ಹಾರ್ಟ್​ ಪ್ರಾಬ್ಲಂ ರೀವಿಲ್ ಬಿಚ್ಚಿಟ್ಟ : ಮೆಗಾಸ್ಟಾರ್ ಚಿರಂಜೀವಿ

ಇತ್ತೀಚೆಗೆ ಟಾಲಿವುಡ್​ನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಪುನೀತ್ ರಾಜ್​ಕುಮಾರ್​ರನ್ನ ನೆನಪಿಸಿಕೊಂಡಿದ್ದಾರೆ ಮೆಗಾಸ್ಟಾರ್ ಚಿರಂಜೀವಿ. ಹೌದು ಹೆಲ್ತ್ ಬಗ್ಗೆ ಮಾತು ಮುಂದುವರೆಸುವಾಗ ಥಟ್ ಅಂತ ರಾಜ್​ ಫ್ಯಾಮಿಲಿಯನ್ನ ನೆನಪಿಸಿಕೊಂಡಿದ್ದಾರೆ. ಬರೀ ಪುನೀತ್ ಬಗ್ಗೆಯಷ್ಟೇ ಅಲ್ಲ, ಅವರ ಕುಟುಂಬದಲ್ಲಿರೋ ಹಾರ್ಟ್​ ಸಮಸ್ಯೆ ಬಗ್ಗೆ ಡಿಟೈಲ್ಡ್ ಆಗಿ ಮಾತನಾಡಿದ್ದಾರೆ.

ಸೂಪರ್ ಸ್ಟಾರ್​ ರಾಜ್​ಕುಮಾರ್ ಕೂಡ ಹಾರ್ಟ್​ ಅಟ್ಯಾಕ್​ನಿಂದಲೇ ಇನ್ನಿಲ್ಲವಾಗಿದ್ದರು. ಹಾರ್ಟ್​ ಸಮಸ್ಯೆ ಅವರ ಕುಟುಂಬದಲ್ಲಿ ದಶಕಗಳಿಂದಲೂ ಇದೆ. ಅಷ್ಟೇ ಅಲ್ಲ, ಅಣ್ಣಾವ್ರ ಹಿರಿಮಗ ಡಾ. ಶಿವರಾಜ್​ಕುಮಾರ್​ಗೂ ಇಂಜಿಯೋಗ್ರಾಮ್ ಮಾಡಿ ಸ್ಟಂಟ್ ಅಳವಡಿಸಲಾಗಿದೆ ಎಂದರು ಚಿರಂಜೀವಿ.

ಇನ್ನೂ ರಾಜ್​ಕುಮಾರ್​ರ ಎರಡನೇ ಮಗ ರಾಘವೇಂದ್ರ ರಾಜ್​ಕುಮಾರ್ ಅನಾರೋಗ್ಯದ ಬಗ್ಗೆಯೂ ಹೇಳಿದ ಚಿರಂಜೀವಿ,ಇನ್ನು ಪುನೀತ್​ ಮಾತ್ರ ಸಿಕ್ಕಾಪಟ್ಟೆ ಫಿಟ್ ಅಂಡ್ ಫೈನ್ ಆಗಿದ್ದರು. ಆಹಾರ ಪದ್ದತಿ ಚೆನ್ನಾಗಿತ್ತು, ಬ್ಯಾಡ್ ಹ್ಯಾಬಿಟ್ಸ್ ಇರಲಿಲ್ಲ. ನನಗೆ ಬರೋದಿಲ್ಲ ಬಿಡು ಅಂದುಕೊಂಡಿದ್ರು. ಆದ್ರೆ ಅದು ಜೀನ್ಸ್​ನಿಂದಲೇ ಬಂದಿದೆ. ಹಾಗಾಗಿ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು ಅನ್ನೋದನ್ನ ಬಹಿರಂಗವಾಗಿ ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments