ಮಂಡ್ಯ : ಸಂಕೀರ್ತನಾ ಯಾತ್ರೆ ಹೆಸರಿನಲ್ಲಿ ಜಾಮಿಯಾ ಮಸೀದಿ ದ್ವಂಸಕ್ಕೆ ಸಂಚು ಮಾಡಲಾಗಿದೆ ಎಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಪೊಲೀಸರು ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.
ಹಿಂದೂ ಜಾಗರಣ ವೇದಿಕೆಯಿಂದ ನಡೆಯುತ್ತಿರುವ ಸಂಕೀರ್ತನಾ ಯಾತ್ರೆ ವೇಳೆ ಬಾಬರಿ ಮಸೀದಿ ಮಾದರಿಯಲ್ಲೇ ಜಾಮಿಯಾ ಮಸೀದಿ ಮೇಲೆ ದಾಳಿಗೆ ಸಂಚು ಮಾಡಿದ್ದಾರೆಂದು ಮುಸ್ಲಿಂ ಸಮುದಾಯ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಶ್ರೀರಂಗಪಟ್ಟಣದಲ್ಲಿ ಮುಂಜಾಗ್ರತ ಕ್ರಮವಾಗಿ ನಿನ್ನೆಯಿಂದಲೇ 1000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಆಗಿದೆ. ಅಲ್ಲದೇ ಶ್ರೀರಂಗಪಟ್ಟಣ ಸುತ್ತಮುತ್ತ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ.
ಹನುಮ ಜಯಂತಿ ಹಿನ್ನೆಲೆಯಲ್ಲಿ ಯಾತ್ರೆ ಆಯೋಜಿಸಿರುವ ಹಿಂದೂ ಜಾಗರಣ ವೇದಿಕೆಯು ಬೆಳಿಗ್ಗೆ 10.30ಕ್ಕೆ ನಿಮಿಷಾಂಬಾ ದೇಗುಲದಿಂದ ಆರಂಭವಾಗಿ ಮೆರವಣಿಗೆ ಉದ್ದಕ್ಕೂ ಶ್ರೀರಾಮ ಹಾಗೂ ಹನುಮ ಜಪ ಮಾಡುತ್ತ ಶ್ರೀರಂಗಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಲಿದೆ. ಸಹಸ್ರಾರು ಭಕ್ತರು ಪಾಲ್ಗೊಳ್ಳುವ ಸಾಧ್ಯತೆಯಿದೆ.
ಇಂದು ನಡೆಯಲಿರುವ ಬೃಹತ್ ಸಂಕೀರ್ತನಾ ಯಾತ್ರೆಯು ಜಾಮಿಯಾ ಮಸೀದಿ ಸೇರಿದಂತೆ ಸಾಗುವ ಮಾರ್ಗದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸಂಕೀರ್ತನಾ ಯಾತ್ರೆ ಬಳಿಕ ಶ್ರೀರಂಗನಾಥ ದೇಗುಲದ ಆವರಣದಲ್ಲಿ ಧಾರ್ಮಿಕ ಸಭೆ ಏರ್ಪಡಾಗಿದ್ದು ಸಭೆಯಲ್ಲಿ ಸಾಮೂಹಿಕ ಹನುಮಾನ್ ಚಾಲೀಸ್ ಪಾರಾಯಣ ಇರುವುದು. ಅಲ್ಲದೇ ಇಂದು ನಡೆಯುವ ಸಂಕೀರ್ತನಾ ಯಾತ್ರೆಯಿಂದ ಶ್ರೀರಂಗಪಟ್ಟಣವು ಸಂಪೂರ್ಣ ಕೇಸರಿಮಯವಾಗಲಿದೆ.
zithromax nursing implications
zithromax non prescription