Homeದೇಶ-ವಿದೇಶಈ ಕೋಣದ ಬೆಲೆ ಕೇಳಿದರೆ ದಂಗಾಗುತ್ತೀರಿ !

ಈ ಕೋಣದ ಬೆಲೆ ಕೇಳಿದರೆ ದಂಗಾಗುತ್ತೀರಿ !

ಮೊನ್ನೆ ಮೊನ್ನೆಯಷ್ಟೇ ಕರ್ನಾಟಕದ ಹಳ್ಳಿಕಾರ್​ ತಳಿಯ ಹೋರಿಗೆ 1 ಕೋಟಿ ಬೆಲೆ ಅನ್ನೋ ಸುದ್ದಿ ಕೇಳಿ ಎಲ್ಲರೂ ಅಚ್ಚರಿಪಟ್ಟಿದ್ರು. ಇದೀಗ ರಾಜಸ್ಥಾನದ ಕೋಣವೊಂದರ ಬೆಲೆ ಕೇಳಿದ್ರೆ ಇಡೀ ದೇಶದ ಜನತೆ ಆಶ್ಚರ್ಯ ಪಡ್ತೀರಿ. ಅರೆ, ಇದೇನ್ರಿ ಕೋಣದ ಬೆಲೆ ಕೇಳಿ ಆಶ್ಚರ್ಯ ಪಡ್ತಾರಾ ಅಂತೀರಾ?

ಮೊನ್ನೆ ಮೊನ್ನೆಯಷ್ಟೇ ನಮ್ಮ ರಾಜ್ಯದಲ್ಲಿ ನಡೆದ ಕೃಷಿಮೇಳದಲ್ಲಿ ಹಳ್ಳಿಕಾರ್​ ಹೋರಿಯ ಬೆಲೆ ಸಾಕಷ್ಟು ಸದ್ದು ಮಾಡಿತ್ತು. ಈ ಹಳ್ಳಿಕಾರ್​ ಹೋರಿಗೆ ಸುಮಾರು 1 ಕೋಟಿ ರೂಪಾಯಿಗೆ ಬೇಡಿಕೆ ಇದೆ ಅಂತ ಹೇಳಿ ಪ್ರಚಾರ ಕೊಡಲಾಗಿತ್ತು. ಈ ಸುದ್ದಿ ನೋಡಿ ರಾಜ್ಯದ ಜನತೆ ಅಚ್ಚರಿ ಪಟ್ಟಿದ್ದು ಸುಳ್ಳಲ್ಲ. ಬಳಿಕ ಬೇರೆ ಬೇರೆ ರೈತರು ಹಾಗು ಹಳ್ಳಿಕಾರ್​ ಹೋರಿಯ ಬಗ್ಗೆ ಚಕಾರ ಎತ್ತಿದ್ರು. ಯಾಕಂದ್ರೆ ಈ ಹೋರಿಗಳ ಬೆಲೆ ಕೇವಲ 7 ಲಕ್ಷವಾಗಿದ್ದು, 1 ಕೋಟಿ ತಲುಪೋದಕ್ಕೆ ಸಾಧ್ಯವೇ ಇಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಇದಾದ ಬಳಿಕ ಈ ಬಗ್ಗೆ ಹಲವು ಸುದ್ಧಿಗಳು ಕೇಳಿ ಬಂದ್ರೂ ಹಳ್ಳಿಕಾರ್​ ಹೋರಿಯ ನಿಖರ ಬೆಲೆ ಏನು ಅನ್ನೋದು ಸರಿಯಾಗಿ ತೀರ್ಮಾನವೇ ಆಗಲಿಲ್ಲ. ಮುಂದಿನ ವರ್ಷದ ಕೃಷಿ ಮೇಳದಲ್ಲಿ ಈ ಬಗ್ಗೆ ಮಾಹಿತಿ ಸಿಕ್ಕರೂ ಸಿಗಬಹುದು ಅನ್ನೋದನ್ನ ಕೆಲ ರೈತರು ಹೇಳ್ತಿದ್ದಾರೆ.

ಇದೇ ಸಾಲಿಗೆ ಇದೀಗ ರಾಜಸ್ಥಾನದ ಕೋಣವೊಂದು ಸೇರ್ಪಡೆಯಾಗಿದೆ. ಹೌದು ಮುರ್ರಾ ತಳಿಯ ಕೋಣಗಳಿಗೆ ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ ಸೇರಿ ಹಲವು ಕಡೆ ಸಾಕಷ್ಟು ಬೇಡಿಕೆ ಇದೆ. ಈ ತಳಿಯ ಕೋಣಗಳಲ್ಲಿ ಸಾಕಷ್ಟು ದಷ್ಟಪುಷ್ಟವಾಗಿರುವ ಕೋಣಗಳಿಗೆ ಅಧಿಕ ಬೆಲೆಯನ್ನ ನೀಡಿ ಹಲವರು ಕೊಂಡುಕೊಳ್ಳೋದು ಸರ್ವೇ ಸಾಮಾನ್ಯ. ಈಗ ಇದೇ ತಳಿಯ ಕೋಣವೊಂದಕ್ಕೆ ಸುಮಾರು 24 ಕೋಟಿ ಕೊಟ್ಟು ಖರೀದಿಸೋದಕ್ಕೆ ವ್ಯಕ್ತಿಯೊಬ್ಬ ಮುಂದಾಗಿದ್ದ ಅನ್ನೋ ವರದಿಗಳು ಕೇಳಿ ಬಂದಿವೆ. ಹಾಗಾಗಿ ಈ ಕೋಣ ಇಡೀ ರಾಜಸ್ಥಾನದಲ್ಲಿ ಸಂಚಲನವನ್ನ ಮೂಡಿಸ್ತಿದ್ದು, ಈ ಬಗ್ಗೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಕೂಡ ಅಚ್ಚರಿ ಪಟ್ಟಿದ್ದಾರೆ. ಇನ್ನು ಈ ಕೋಣ ಸುಮಾರು 1500 ಕೆಜಿ ತೂಕವಿದ್ದು, ಇದರ ಗಾತ್ರ ನೋಡಿಯೇ ಜನ್ರು ದಂಗಾಗಿದ್ರು.

ಕಳೆದ ಕೆಲ ದಿನಗಳ ಹಿಂದೆ ರಾಜಸ್ಥಾನದ ಜೊಧ್​ಪುರ್​ನಲ್ಲಿ ನಡೆಯುತ್ತಿದ್ದ ಜಾನುವಾರುಗಳ ಮೇಳದಲ್ಲಿ ಪಶು ಪ್ರದರ್ಶನಕ್ಕೆ ಸಾವಿರಾರು ಮಂದಿ ಆಗಮಿಸಿದ್ರು, ಈ ವೇಳೆ ಭೀಮ್​ ಹೆಸರಿನ ಕೋಣವೊಂದನ್ನ ಅದರ ಮಾಲಿಕ ಈ ಪಶು ಮೇಳಕ್ಕೆ ಕರೆತಂದಿದ್ದ. 14 ಅಡಿ ಉದ್ದ, ಆರು ಅಡಿ ಎತ್ತರವಿರುವ ಈ ಕೋಣದ ಮೈಕಟ್ಟು ಸಾಕಷ್ಟು ಜನರನ್ನ ಆಕರ್ಷಿಸಿತ್ತು. ಇದೇ ವೇಳೆ ಈ ಕೋಣಕ್ಕೆ ಅಫ್ಘನ್​ ಷೇಕ್​ ಒಬ್ಬರು ಸುಮಾರು 24 ಕೋಟಿ ಕೊಟ್ಟು ಈ ಕೋಣಯನ್ನ ಖರೀದಿಸೋದಕ್ಕೆ ಮುಂದಾಗಿದ್ರಂತೆ. ಆದ್ರೆ ಇದಕ್ಕೊಪ್ಪದ ಮಾಲೀಕ ಅರವಿಂದ್ ಜಂಗಿಡ್ ಈ ಕೋಣವನ್ನ ತಾವು ಮಾರಲ್ಲ, ಬದಲಾಗಿ ಈ ತಳಿಯ ಬಗ್ಗೆ ಜಾಗೃತಿ ಮೂಡಿಸೋದಕ್ಕೆ ನಾವು ಈ ಕೋಣವನ್ನ ಪ್ರದರ್ಶನಕ್ಕೆ ಇಟ್ಟಿದ್ದೇವೆ ಅನ್ನೋ ಮಾಹಿತಿ ನೀಡ್ತಾರೆ. ಇನ್ನು ಈ ಭೀಮನಿಗೆ ಇಷ್ಟೊಂದು ಬೆಲೆ ಬರೋದಕ್ಕೆ ಕಾರಣ ಇದರ ನಿರ್ವಹಣೆಗೆ ತಗಲುವ ವೆಚ್ಚ ಅಂತಾ ರೈತ ಅರವಿಂದ್​ ಜಂಗಡ್​ ಹೇಳಿದ್ದಾರೆ.

ಈ ಭೀಮ್​ ಕೋಣದ ನಿರ್ವಹಣೆಗೆ ತಿಂಗಳಿಗೆ 2 ಲಕ್ಷಕ್ಕೂ ಅಧಿಕ ವೆಚ್ಚ ತಗುಲ್ತಾ ಇದ್ದು, ಪ್ರತಿನಿತ್ಯ ಒಂದು ಕೆಜಿ ತುಪ್ಪ ಹಾಗೂ 25 ಲೀಟರ್ ಹಾಲನ್ನು ಸೇವಿಸುವ ಭೀಮ ಜೊತೆಯಲ್ಲಿ ಒಂದು ಕಿಲೋ ಗೋಡಂಬಿ-ಬಾದಾಮಿಯನ್ನೂ ಸವಿಯುತ್ತಾನೆ ಅಂತ ಹೇಳಲಾಗಿದೆ. 2019ರಲ್ಲಿ ಪುಷ್ಕರ್ ಜಾನುವಾರು ಮೇಳಕ್ಕೆ ಬಂದಿದ್ದ ಭೀಮ ಆಗಲೇ 1300 ಕೆಜಿ ತೂಕವಿದ್ದು, 21 ಕೋಟಿ ರೂ ಬೆಲೆ ಬಾಳುತ್ತಿದ್ದ. ಇದೀಗ ಈತನ ತೂಕ 1500 ಕೆಜಿಗೆ ಬಂದಿದ್ದು, 24 ಕೋಟಿ ರೂಪಾಯಿ ಬೆಲೆ ಬಾಳುವ ಕೋಟ್ಯಾಧೀಶ ಕೋಣನಾಗಿದ್ದಾನೆ ಅಂತಾ ಆತನ ಮಾಲೀಕ ತಿಳಿಸಿದ್ದಾನೆ.

ಸದ್ಯದ ಮಟ್ಟಿಗೆ ಈ ವಿಚಾರ ದೇಶಾದ್ಯಂತ ಸಾಕಷ್ಟು ಸುದ್ಧಿ ಮಾಡಿದೆ. ಈ ಬಗ್ಗೆ ಹಲವು ರೈತರು ಈ ಕೋಣ ಗೆ ಇಷ್ಟೊಂದು ಬೆಲೆ ಇರೋದಕ್ಕೆ ಸಾಧ್ಯವೇ ಇಲ್ಲ ಅನ್ನೋ ಮಾತನಾಡ್ತಿದ್ದಾರೆ. ಈ ಮಧ್ಯೆ ಕೆಲ ಪ್ರತ್ಯಕ್ಷದರ್ಶಿಗಳು ಕೂಡ ಈ ಬಗ್ಗೆ ಮಾತನಾಡಿದ್ದು, ಈ ಕೋಣವನ್ನು 25 ಕೋಟಿ ಮೌಲ್ಯಕ್ಕೆ ಕೇಳಿದ್ದನ್ನ ನೋಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದ್ರ ಜೊತೆಗೆ ಈ ಕೋಣದ ಬೆಲೆ ಕೇಳಿದ ಸಾಕಷ್ಟು ಜನ ಇಂತಹದ್ದೇ ತಳಿಯ ಕೋಣಗಳನ್ನ ಖರೀದಿಸೋದಕ್ಕೆ ಮುಂದಾಗಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿ ಬಂದಿದೆ.

ಒಟ್ಟಾರೆಯಾಗಿ ಈ ಮುರ್ರಾ ತಳಿಯ ಈ ಭೀಮ್​ ಕೋಣ ತನ್ನ ಬಲಿಷ್ಠ ಮೈಕಟ್ಟು ಹಾಗೂ ಬೆಲೆಯಿಂದ ಸಾಕಷ್ಟು ಸುದ್ಧಿ ಮಾಡಿದೆ. ಈ ಕೋಣವನ್ನು ನೋಡೋದಕ್ಕೆ ಹಲವು ಊರುಗಳಿಂದ ಹಾಗು ಬೇರೆ ಬೇರೆ ರಾಜ್ಯಗಳಿಂದ ಜನರು ಬರ್ತಾ ಇದ್ದಾರೆ. ಆದ್ರೆ ಕೆಲವರು ಹೇಳುವ ಪ್ರಕಾರ ಇಷ್ಟೊಂದು ಬೆಲೆ ಇದ್ರೂ, ಇಲ್ಲದೇ ಇದ್ರೂ ಇದರ ತಳಿಯ ಬಗ್ಗೆ ಜನರಿಗೆ ಅರಿವು ಮೂಡುವಂತಾಗಿದೆ ಅಂತ ಹಲವರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ

LEAVE A REPLY

Please enter your comment!
Please enter your name here

- Advertisment -

Most Popular

Recent Comments